ನವದೆಹಲಿ: ಕೇಂದ್ರೀಯ ಪ್ರೌಢ  ಶಿಕ್ಷಣ ಮಂಡಳಿ (CBSE ) 2019- 2020 ನೇ ಸಾಲಿನ 10 ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳ ದಿನಾಂಕವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಂಗಳವಾರ ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ಸಿಬಿಎಸ್‌ಇ ಮಂಡಳಿಯ ಪರೀಕ್ಷೆಗಳು ಫೆಬ್ರವರಿ 15, 2020 ರಿಂದ ಪ್ರಾರಂಭವಾಗಲಿವೆ. ಅಧಿಸೂಚನೆಯ ಪ್ರಕಾರ, 12 ನೇ ತರಗತಿ ಪರೀಕ್ಷೆಗಳು ಮಾರ್ಚ್ 30 ಕ್ಕೆ ಕೊನೆಗೊಳ್ಳಲಿದ್ದು, 10 ನೇ ತರಗತಿ ಮಾರ್ಚ್ 20 ರಂದು ಮುಕ್ತಾಯಗೊಳ್ಳಲಿದೆ.


"ಡೇಟಾದ ಆಧಾರದ ಮೇಲೆ, ಈ ವರ್ಷ, 10 ನೇ ತರಗತಿ ಮತ್ತು 12 ನೇ ತರಗತಿಗಳಲ್ಲಿ ವಿದ್ಯಾರ್ಥಿಗಳು ಸುಮಾರು 30,000 ವಿಷಯಗಳ ಸಂಯೋಜನೆಯನ್ನು ಆರಿಸಿಕೊಂಡಿದ್ದಾರೆ ಎಂದು ಗಮನಿಸಲಾಗಿದೆ" ಎಂದು ಸಿಬಿಎಸ್‌ಇಯ ಹೇಳಿಕೆಯಲ್ಲಿ ತಿಳಿಸಲಾಗಿದೆ.


ಬೋರ್ಡ್ ಪರೀಕ್ಷೆಗಳ ಸಮಯ ಬೆಳಿಗ್ಗೆ 10 ರಿಂದ ಮೂರು ಗಂಟೆಗಳವರೆಗೆ ಪ್ರಾರಂಭವಾಗುತ್ತದೆ. ಪ್ರಶ್ನೆಪತ್ರಿಕೆ ಓದಲು ವಿದ್ಯಾರ್ಥಿಗಳಿಗೆ ಮೊದಲ 15 ನಿಮಿಷಗಳನ್ನು ನೀಡಲಾಗುವುದು.


ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಭ್ಯರ್ಥಿಗಳು ಶೇಕಡಾ 33 ಅಂಕಗಳನ್ನು ಪಡೆಯಬೇಕಾಗಿದ್ದು, ಇದರಲ್ಲಿ ಥಿಯೇರಿ ಮತ್ತು ಪ್ರಾಯೋಗಿಕ ಅಂಕಗಳೂ ಸೇರಿವೆ.


10 ನೇ ತರಗತಿ ಮತ್ತು 12 ನೇ ತರಗತಿ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳ ವಿವರವಾದ ವಿಷಯವಾರು ಡೇಟ್‌ಶೀಟ್ ಪರಿಶೀಲಿಸಲು ಬಯಸುವ ವಿದ್ಯಾರ್ಥಿಗಳು ಅದನ್ನು ಡೌನ್‌ಲೋಡ್ ಮಾಡಲು cbse.nic.in ಗೆ ಲಾಗ್ ಇನ್ ಮಾಡಬಹುದು.