ನವದೆಹಲಿ : ಕೊರೊನಾವೈರಸ್ (Coronavirus) ಸಾಂಕ್ರಮಣದಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಕರೋನಾ ಕಾರಣದಿಂದಾಗಿ ದೇಶಾದ್ಯಂತ ಆನ್ಲೈನ್ ತರಗತಿಗಳೇ (Online classes) ನಡೆದಿವೆ. ಇನ್ನೇನು ಕೆಲವೇ ದಿನಗಳಲ್ಲಿ 10, 12 ನೇ ತರಗತಿಯ ಪರೀಕ್ಷೆಗಳು ಆರಂಭವಾಗಲಿವೆ. ವಿದ್ಯಾರ್ಥಿಗಳ ಸ್ಟ್ರೆಸ್ ಕಡಿಮೆ ಮಾಡುವ ಉದ್ದೇಶದಿಂದ ಮಂಡಳಿಯು 10, 12 ನೇ ಪಠ್ಯಕ್ರಮದಲ್ಲಿ 30% ದಷ್ಟನ್ನು ಕಡಿಮೆ ಮಾಡಿದೆ. ಇದೀಗ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ನಡೆಸಲು ಅನುಕೂಲವಾಗುವಂತೆ, ಮಂಡಳಿಯು ತನ್ನ ಅಧಿಕೃತ ಸೈಟ್ cbse.gov.in ನಲ್ಲಿ  ಇ-ಪರೀಕ್ಷೆಯ ಪೋರ್ಟಲ್ ಅನ್ನು ಆರಂಭಿಸಿದೆ. 


COMMERCIAL BREAK
SCROLL TO CONTINUE READING

ಸಿಬಿಎಸ್‌ಇಯಿಂದ  ಇ-ಪರೀಕ್ಷೆಯ ಪೋರ್ಟಲ್ ಲಾಂಚ್ : 
ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗೆ   2021(CBSE Board Exam 2021)  ಕ್ಷಣಗಣನೆ ಪ್ರಾರಂಭವಾಗಿದೆ. ಮೇ 4 ರಿಂದ ಆರಂಭವಾಗಲಿರುವ ಬೋರ್ಡ್ ಪರೀಕ್ಷೆಯ ಪ್ರಾಕ್ಟಿಕಲ್ ಪರೀಕ್ಷೆ (CBSE Board Practical Exam 2021)  ನಡೆಸಲಾಗುತ್ತಿದೆ.  ಈ ಮಧ್ಯೆ,  ಸಿಬಿಎಸ್ಇ 2021ರ ಬೋರ್ಡ್ ಪರೀಕ್ಷೆಗೆ (CBSE Board Exam 2021) ಹಾಜರಾಗುವ ವಿದ್ಯಾರ್ಥಿಗಳಿಗಾಗಿ ಇ-ಪರೀಕ್ಷಾ ಪೋರ್ಟಲ್(e-pariksha portal) ಅನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ (Exam) ತಯಾರಿ ನಡೆಸಲು ಈ ಪೋರ್ಟಲ್ ಅನುಕೂಲಕರವಾಗಲಿದೆ ಎನ್ನಲಾಗಿದೆ.


ಇದನ್ನೂ ಓದಿ :  ಬದಲಾಗಲಿದೆ ಕಲಿಕಾ ಪದ್ಧತಿ : ಲಾಂಚ್ ಆಗಿದೆ CBSE ಹೊಸ Assessment Framework


ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪೋರ್ಟಲ್ ವಿಂಗಡಣೆ :
ವಿದ್ಯಾರ್ಥಿಗಳ ಬಳಕೆಗೆ ಅನುಕೂಲವಾಗುವಂತೆ, ಇ-ಪರೀಕ್ಷೆಯ ಪೋರ್ಟಲ್ ಅನ್ನು ಹಲವಾರು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಪೋರ್ಟಲ್ ಸಹಾಯದಿಂದ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರ, ಪ್ರಾಯೋಗಿಕ ಪರೀಕ್ಷಾ ಕೇಂದ್ರವನ್ನು ಬದಲಾಯಿಸಲು ಸಾಧ್ಯವಾಗುತ್ತದೆ. ೧೦ನೇ ತರಗತಿ ವಿದ್ಯಾರ್ಥಿಗಳ ಇಂಟರ್ನಲ್  ಅಸ್ಸೆಸ್ಮೆಂಟ್ (CBSE Internal Assessment) ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳ ಇಂಟರ್ನಲ್  ಗ್ರೇಡ್ ಗಳನ್ನ  ಈ ಪೋರ್ಟಲ್  ನಲ್ಲಿಯೇ ಅಪ್‌ಲೋಡ್ (Upload) ಮಾಡಲಾಗುವುದು. 


ಒಂದೇ ಒಂದು ಕ್ಲಿಕ್‌ನಲ್ಲಿ ಎಲ್ಲಾ ಮಾಹಿತಿ ಲಭ್ಯ : 
ಇ-ಪರೀಕ್ಷ ಪೋರ್ಟಲ್‌ನ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ, ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತದೆ. ತಮ್ಮ ಯುಸರ್ ಐಡಿ, ಪಾಸ್‌ವರ್ಡ್ (Password) ಮತ್ತು ಸೆಕ್ಯೂರಿಟಿ  ಪಿನ್ ಹಾಕಿದ  ನಂತರ, ವಿದ್ಯಾರ್ಥಿಗಳು ಈ ಪೋರ್ಟಲ್ ಅನ್ನು ಆಕ್ಸೆಸ್ ಮಾಡುವುದು ಸಾಧ್ಯವಾಗುತ್ತದೆ.


ಇದನ್ನೂ ಓದಿ :  DBSE: ಇನ್ಮುಂದೆ ದೆಹಲಿಗೂ ಸಿಗಲಿದೆ ತನ್ನದೇ ಆದ ಶಿಕ್ಷಣ ಮಂಡಳಿ, ಸಿಎಂ ಕೆಜ್ರಿವಾಲ್ ಘೋಷಣೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.