ನವದೆಹಲಿ: ನಿಮ್ಮ ಬ್ಯಾಂಕ್ ಖಾತೆಯಿಂದ ಇಮೇಲ್ ವರೆಗೆ ಪಾಸ್‌ವರ್ಡ್ (Password) ಅಗತ್ಯವಿದೆ. ಈ ಪಾಸ್‌ವರ್ಡ್ ಗಳಿಂದಲೇ ನಮ್ಮ ಡೇಟಾ ಮತ್ತು ಇತರ ಮಾಹಿತಿಯನ್ನು ರಕ್ಷಿಸಲಾಗುತ್ತದೆ. ಆದರೆ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಪ್ರಪಂಚದಾದ್ಯಂತದ ಹೆಚ್ಚಿನ ಬಳಕೆದಾರರು ಈ ಕುರಿತು ನಿರ್ಲಕ್ಷ್ಯವನ್ನು ಮಾಡುತ್ತಾರೆ. ಈಗ ಸಾಮಾನ್ಯ ಮತ್ತು ಕೆಟ್ಟ ಪಾಸ್‌ವರ್ಡ್‌ಗಳು ಯಾವುವು ಎಂಬುದನ್ನು ತೋರಿಸುವ ವರದಿಯನ್ನು ಬಿಡುಗಡೆ ಮಾಡಲಾಗಿದೆ.
ಇದನ್ನು ಓದಿ- ಕೇವಲ ಹತ್ತೇ ನಿಮಿಷಗಳಲ್ಲಿ ನಿಮ್ಮ Password ಹ್ಯಾಕ್ ಆಗುವ ಸಾಧ್ಯತೆ, ಇಂದೇ ಈ ಕೆಲಸ ಮಾಡಿ
ಬ್ರಿಟಿಷ್ ಸೈಟ್ 'Silicon' ಪ್ರಕಟಿಸಿರುವ ವರದಿಯ ಪ್ರಕಾರ, 2020 ರಲ್ಲಿ '123456' ಪಾಸ್‌ವರ್ಡ್ ಹೆಚ್ಚು ಬಳಕೆಯಾದ ಪಾಸ್‌ವರ್ಡ್ ಆಗಿದೆ ಮತ್ತು ಇದನ್ನು 23 ಮಿಲಿಯನ್‌ಗಿಂತಲೂ ಹೆಚ್ಚು ಅಂದರೆ 23 ಮಿಲಿಯನ್ ಬಾರಿ ಹ್ಯಾಕ್ ಮಾಡಲಾಗಿದೆ. ಪಾಸ್‌ವರ್ಡ್ ವ್ಯವಸ್ಥಾಪಕ ನಾರ್ಡ್‌ಪಾಸ್ ಈ ಮಾಹಿತಿಯನ್ನು ವಾರ್ಷಿಕ ವರದಿಯಲ್ಲಿ ನೀಡಿದೆ.
200 ಅತ್ಯಂತ ಕೆಟ್ಟ ಪಾಸ್ವರ್ಡ್ ಗಳ ಪಟ್ಟಿ ಬಿಡುಗಡೆ
123456 ಪಾಸ್‌ವರ್ಡ್ ಅನ್ನು ಲಕ್ಷಾಂತರ ಜನರು ಬಳಸಿದ್ದಾರೆಂದು ತಾಂತ್ರಿಕ ತಜ್ಞರು ಹೇಳುತ್ತಾರೆ ಮತ್ತು ಅದನ್ನು ಮುರಿಯಲು ಒಂದು ಸೆಕೆಂಡಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಈ ಪಟ್ಟಿಯು ವರ್ಷದ 200 ಕೆಟ್ಟ ಪಾಸ್‌ವರ್ಡ್‌ಗಳನ್ನು ಹಾಗೂ ಅವುಗಳನ್ನು ಎಷ್ಟು ಬಾರಿ ಉಲ್ಲಂಘಿಸಲಾಗಿದೆ, ಬಳಸಲಾಗಿದೆ ಮತ್ತು ಅವುಗಳನ್ನು ಬ್ರೀಚ್ ಮಾಡಲು ಎಷ್ಟು ಸಮಯ ಕಾಲಾವಕಾಶ ತೆಗೆದುಕೊಂಡಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. '123456789' ಎರಡನೇ ಸ್ಥಾನದಲ್ಲಿದ್ದರೆ, 'picture 1' ಮೂರನೇ ಸ್ಥಾನದಲ್ಲಿದೆ.
ಇದನ್ನು ಓದಿ- Google Chrome ಬಳಸಿ ನೀವು Secure Passwords ರಚಿಸಬಹುದು... ಇಲ್ಲಿದೆ ವಿಧಾನ
ಜನರು ಸರಳ ಮತ್ತು ಸುಲಭವಾಗಿ ನೆನಪಿಟ್ಟುಕೊಳ್ಳುವ ಪಾಸ್‌ವರ್ಡ್‌ಗಳನ್ನು ಬಳಸುತ್ತಾರೆ ಏಕೆಂದರೆ ಅವುಗಳು ಅವರಿಗೆ ಅನುಕೂಲಕರವಾಗಿವೆ ಎಂದು NordPass ನಡೆಸಿರುವ ಸಂಶೋಧನೆಯಲ್ಲಿ ತಿಳಿದುಬಂದಿದೆ. ಹೆಚ್ಚು ಸುಲಭವಾಗಿ ನೆನಪಿಡುವ ಪಾಸ್‌ವರ್ಡ್‌ಗಳು ಸಹ ಕ್ರ್ಯಾಕಿಂಗ್‌ಗೆ ಹೆಚ್ಚು ಗುರಿಯಾಗುತ್ತವೆ ಎಂದು ಸಂಶೋಧನೆ ತೋರಿಸುತ್ತದೆ.
ಇಡೀ ವಿಶ್ವಾದ್ಯಂತ ಪಾಸ್ವರ್ಡ್ ಹೆಸರಿನಲ್ಲಿ ತುಂಬಾ ಸಾಮಾನ್ಯ ಪದಗಳ ಬಳಕೆ ಮಾಡಲಾಗುತ್ತದೆ. ಪಟ್ಟಿಯಲ್ಲಿ ಮೇಲಿನಿಂದ ಕೆಳಗಿನವರೆಗೆ ಸಾಮಾನ್ಯವಾಗಿ ಬಳಸಲಾದ ಟಾಪ್ 20 ಪಾಸ್ವರ್ಡ್ ಗಳು ‘123456', ‘123456789', ‘picture1', ‘password', ‘12345678', ‘111111', ‘123123', ‘12345', ‘1234567890', ‘senha', ‘1234567', ‘qwerty', ‘abc123', ‘Million2', ‘000000', ‘1234', ‘iloveyou', ‘aaron431', ‘password1' ಹಾಗೂ ‘qqww1122' ಇವೆ. ವರದಿಯ ಪ್ರಕಾರ ಇವುಗಳಲ್ಲಿ ಹೆಚ್ಚಿನವುಗಳನ್ನು ಕ್ರ್ಯಾಕ್ ಮಾಡಲು ಒಂದು ಸೆಕೆಂಡ್ ಕೂಡ ಬೇಕಾಗುವುದಿಲ್ಲ ಎನ್ನಲಾಗಿದೆ.
ಇದನ್ನು ಓದಿ- ಇನ್ಮುಂದೆ ಗೂಗಲ್ ಸೇವೆಗೆ ಪಾಸ್ ವರ್ಡ್ ಬದಲು ಬೆರಳಚ್ಚು ಮುದ್ರೆ ಅಥವಾ ಸ್ಕ್ರೀನ್ ಲಾಕ್ ಬಳಸಿ!
ಇವಲ್ಲದೆ ಸಾಮಾನ್ಯವಾಗಿ ಬಳಸುವ ಪಾಸ್‌ವರ್ಡ್‌ಗಳನ್ನು ಸಹ ಬಹಿರಂಗಪಡಿಸಲಾಗಿದೆ. ಪಟ್ಟಿಯಲ್ಲಿ 90,000 ಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಈ ವರ್ಷ 'ಆರನ್ 431' ಪಾಸ್‌ವರ್ಡ್‌ಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಹೆಸರಾಗಿದೆ, ಆದರೆ 'ಚಾಕೊಲೇಟ್' 21,409 ಬಳಕೆದಾರರೊಂದಿಗೆ ಸಾಮಾನ್ಯವಾಗಿ ಬಳಸಲ್ಪಟ್ಟ ಪಾಸ್ವರ್ಡ್ ಆಡಿದೆ. 'ಪೋಕ್ಮನ್' ಎಂಬ ಹೆಸರನ್ನು 37,000 ಕ್ಕೂ ಹೆಚ್ಚು ಬಳಕೆದಾರರು ಬಳಸಿದ್ದಾರೆ, ಇದು ಹೆಚ್ಚು ಬಳಸಿದ ಮನರಂಜನಾ ಪದವಾಗಿದೆ. ಸಾಮಾನ್ಯವಾಗಿ ಬಳಸುವ ಪಾಸ್‌ವರ್ಡ್‌ಗಳ ಪಟ್ಟಿಯಲ್ಲಿ 'iloveyou' 17 ನೇ ಸ್ಥಾನದಲ್ಲಿದೆ.