CBSE Board Exam 2021: ಕೇವಲ Main Subjects ಗೆ ಮಾತ್ರ ನಡೆಯಲಿದೆ ಪರೀಕ್ಷೆ
10 ಮತ್ತು 12 ನೇ ತರಗತಿ ಸಿಬಿಎಸ್‌ಇ ಪ್ರಾಯೋಗಿಕ ಪರೀಕ್ಷೆ ದೇಶಾದ್ಯಂತ ಆರಂಭವಾಗಿದೆ. ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ ಮಾಡಿದ್ದಾರೆ.
ನವದೆಹಲಿ: CBSE Board Exam 2021ರ ಪರೀಕ್ಷೆ ಮೇ ತಿಂಗಳಲ್ಲಿ ನಡೆಯಲಿದೆ. ಸಿಬಿಎಸ್‌ಇ ಬೋರ್ಡ್ ಪರೀಕ್ಷ ವೇಳಾ ಪಟ್ಟಿಯ ಪ್ರಕಾರ 10 ಮತ್ತು 12 ನೇ ತರಗತಿಗೆ ಮೇ 4 ರಿಂದ ಪರೀಕ್ಷೆ ಆರಂಭವಾಗಲಿದೆ. ಇದೀಗ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, CBSE ಮಂಡಳಿ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ.
ಕೇವಲ 29 ವಿಷಯಗಳಿಗೆ ಮಾತ್ರ ನಡೆಯಲಿದೆ ಪರೀಕ್ಷೆ :
10 ಮತ್ತು 12 ನೇ ತರಗತಿ ಸಿಬಿಎಸ್‌ಇ ಪ್ರಾಯೋಗಿಕ ಪರೀಕ್ಷೆ (CBSE Board Practical Exam 2021) ದೇಶಾದ್ಯಂತ ಆರಂಭವಾಗಿದೆ. ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ (Ramesh Pokhriyal Nishank) ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ ಮಾಡಿದ್ದಾರೆ. ಹೆಚ್ಚುತ್ತಿರುವ ಕರೋನ ಸಾಂಕ್ರಾಮಿಕವನ್ನು (Coroanavirus) ಗಮನದಲ್ಲಿಟ್ಟುಕೊಂಡು ಈ ವರ್ಷ ಕೇವಲ 29 ಮುಖ್ಯ ವಿಷಯಗಳ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಸಿಬಿಎಸ್‌ಇಗೆ (CBSE) ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ : ಬದಲಾಗಲಿದೆ ಕಲಿಕಾ ಪದ್ಧತಿ : ಲಾಂಚ್ ಆಗಿದೆ CBSE ಹೊಸ Assessment Framework
ಇತರ ವಿಷಯಗಳಿಗೆ ಶೀಘ್ರದಲ್ಲೇ ಜಾರಿಯಾಗಲಿದೆ ಅಸ್ಸೆಸ್ಮೆಂಟ್ :
ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ( Ramesh Pokhriyal Nishank) ಪ್ರಕಟಣೆಯಿಂದ ವಿದ್ಯಾರ್ಥಿಗಳು ಕೊಂಚ ಮಟ್ಟಿನ ಸಮಾಧಾನ ಪಡುವಂತಾಗಿದೆ. ಮುಂದಿನ ತರಗತಿಗೆ ಅಥವಾ ಮುಂದಿನ ಶಿಕ್ಷಣದಲ್ಲಿ ಬಡ್ತಿಗಾಗಿ ಮುಖ್ಯ ಆಗಿರುವ ವಿಷಯಗಳಿಗಷ್ಟೇ ಈ ಬಾರಿ ಪರೀಕ್ಷೆ ನಡೆಸಲಾಗುವುದು. ಉಳಿದ ವಿಷಯಗಳನ್ನು ಪರೀಕ್ಷೆಯಲ್ಲಿ ಸೇರಿಸಲಾಗುವುದಿಲ್ಲ. ಆದರೆ ಅದರ ಮಾರ್ಕಿಂಗ್ ಗಾಗಿ (Marking) ಹೊಸ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು.
ಪರೀಕ್ಷಾ ಕೇಂದ್ರವನ್ನು ಬದಲಾಯಿಸಬಹುದು :
ಕೊರೊನಾವೈರಸ್ (COVI-19) ಸೋಂಕಿನಿಂದಾಗಿ, ಅನೇಕ ವಿದ್ಯಾರ್ಥಿಗಳು ತಮ್ಮ ಕುಟುಂಬಗಳೊಂದಿಗೆ ಬೇರೆ ನಗರಗಳಿಗೆ ಸ್ಥಳಾಂತರಗೊಂಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷಾ ಕೇಂದ್ರ (Exam center) ಮತ್ತು ಪ್ರಾಯೋಗಿಕ ಕೇಂದ್ರವನ್ನು ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ, ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳಿಗೆ 11 ಜೂನ್ 2021 ರವರೆಗೆ ಪ್ರಾಯೋಗಿಕ ಪರೀಕ್ಷೆಗಳನ್ನು ನೀಡಲು ಅನುಮತಿ ನೀಡಲಾಗಿದೆ.
ಇದನ್ನೂ ಓದಿ : DBSE: ಇನ್ಮುಂದೆ ದೆಹಲಿಗೂ ಸಿಗಲಿದೆ ತನ್ನದೇ ಆದ ಶಿಕ್ಷಣ ಮಂಡಳಿ, ಸಿಎಂ ಕೆಜ್ರಿವಾಲ್ ಘೋಷಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.