ನವದೆಹಲಿ: ಕರೋನವೈರಸ್ ಲಾಕ್ ಡೌನ್ ಸಮಯದಲ್ಲಿ ವಿವಿಧ ರಾಜ್ಯಗಳಿಗೆ ಅಥವಾ ತಮ್ಮ ಸ್ವಂತ ಜಿಲ್ಲೆಗಳಿಗೆ ತೆರಳಿದ ಸಿಬಿಎಸ್ಇ 10 ಮತ್ತು 12 ತರಗತಿ ವಿದ್ಯಾರ್ಥಿಗಳು ಅಲ್ಲಿ ಬಾಕಿ ಇರುವ ಬೋರ್ಡ್ ಪರೀಕ್ಷೆಗಳಿಗೆ ತಮ್ಮ ಜಿಲ್ಲೆಗಳಲ್ಲಿಯೇ ಹಾಜರಾಗಬಹುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ.ರಮೇಶ್ ಪೋಖ್ರಿಯಲ್ 'ನಿಶಾಂಕ್' ಬುಧವಾರ ಹೇಳಿದ್ದಾರೆ.
#Covid_19 संकट के कारण हजारों बच्चे अपने गृह प्रदेश में चले गए थे, ऐसी स्थिति में सीबीएसई की बोर्ड परीक्षाओं में शामिल हो रहे विद्यार्थियों की समस्या को ध्यान में रखते हुए #CBSE ने यह फैसला लिया है कि ऐसे विद्यार्थी अपनी बोर्ड परीक्षा अपने गृह जिले में ही दे सकते हैं।@DDNewslive pic.twitter.com/3UFkbISIPm
— Dr Ramesh Pokhriyal Nishank (@DrRPNishank) May 27, 2020
ಕೋವಿಡ್ -19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತಮ್ಮ ಸ್ವಂತ ರಾಜ್ಯ ಅಥವಾ ಜಿಲ್ಲೆಗಳಿಗೆ ತೆರಳಿದ್ದ ಸಾವಿರಾರು ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಕೇಂದ್ರ ಎಚ್‌ಆರ್‌ಡಿ ಸಚಿವ ರಮೇಶ್ ಪೋಖ್ರಿಯಾಲ್ ಅವರ ಪ್ರಕಟಣೆ ಸ್ವಲ್ಪ ನೆಮ್ಮದಿ ನಿಟ್ಟಿಸಿರು ಬಿಡುವಂತಾಗಿದೆ. ಅವರು ಈಗ ತಮ್ಮ ತವರು ಜಿಲ್ಲೆಗಳಲ್ಲಿ ಸಿಬಿಎಸ್‌ಇ ಮಂಡಳಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.
ಸಿಬಿಎಸ್‌ಇ ಇತ್ತೀಚೆಗೆ ಉಳಿದ 10 ಮತ್ತು 12 ನೇ ಬೋರ್ಡ್ ಪರೀಕ್ಷೆಗಳಿಗೆ ಪರಿಷ್ಕೃತ ಡೇಟ್‌ಶೀಟ್ ಬಿಡುಗಡೆ ಮಾಡಿತ್ತು. 2020 ರ ಜುಲೈ 1 ರಿಂದ ಜುಲೈ 15 ರವರೆಗೆ ಉಳಿದ 29 ಪತ್ರಿಕೆಗಳಿಗೆ 10 ಮತ್ತು 12 ನೇ ಬೋರ್ಡ್ ಪರೀಕ್ಷೆಗಳನ್ನು ವಿವಿಧ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿತ್ತು.