CBSE Board Exam 2021: ಸಿಬಿಎಸ್ಇ ಮಂಡಳಿಯ ಪರೀಕ್ಷೆಗಳ ದಿನಾಂಕಗಳು ಸೇರಿದಂತೆ ಜೆಇಇ (JEE) ಹಾಗೂ ನೀಟ್ (NEET) ಪರೀಕ್ಷೆಗಳಿಗೂ ಕೂಡ ದಿನಾಂಕಗಳು ಪ್ರಕಟಗೊಂಡಿವೆ. ಇಂತಹುದರಲ್ಲಿ JEE ಹಾಗೂ NEET ಪರೀಕ್ಷೆಗಳಿಗೆ ಪಠ್ಯಕ್ರಮ ಏನಾಗಿರಲಿದೆ ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಮೂಡಿದೆ.


COMMERCIAL BREAK
SCROLL TO CONTINUE READING

ಕೊರೊನಾ ಮಹಾಮಾರಿಯ ಹಿನ್ನೆಲೆ ಸಿಬಿಎಸ್ಇ 10ನೇ ಹಾಗೂ 12ನೇ ತರಗತಿಗಳ ಪಠ್ಯಕ್ರಮವನ್ನು ಶೇ.30ರಷ್ಟು ಕಡಿಮೆ ಮಾಡಲಾಗಿದೆ. ಆದರೆ, ವಿದ್ಯಾರ್ಥಿಗಳಲ್ಲಿ ಕಡಿತಗೊಂಡ ಸಿಲೆಬಸ್ ನಿಂದ ಪ್ರಶ್ನೆಗಳನ್ನು ಕೇಳಲಾಗುವುದೇ ಎಂಬ ಗೊಂದಲ ಮೂಡಿದೆ.


ಪಠ್ಯಕ್ರಮ ಏನಾಗಿರಲಿದೆ?
ವಿದ್ಯಾರ್ಥಿಗಳ ಈ ಗೊಂದಲಕ್ಕೆ ಸ್ವತಃ ಕೇಂದ್ರ ಶಿಕ್ಷಣ ಸಚಿವರಾಗಿರುವ ರಮೇಶ್ ಪೋಖರಿಯಾಲ್ ನಿಶಾಂಕ್ (Ramesh Pokhriyal Nishank) ಅವರೇ ಉತ್ತರ ನೀಡಿದ್ದಾರೆ.


ಕೇಂದ್ರೀಯ ವಿದ್ಯಾಲಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿರುವ ಅವರು ರಿವೈಸ್ಡ್ ಸಿಲೆಬಸ್ ಆಧರಿಸಿಯೇ 10ನೇ ಮತ್ತು 12ನೇ ಬೋರ್ಡ್ ಪರೀಕ್ಷೆಗಳಿಗೆ (CBSE Board Exam 2021) ಪ್ರಶ್ನೆಗಳನ್ನು ಕೇಳಲಾಗುವುದು ಹಾಗೂ ಜೆಇಇ ಹಾಗೂ ನೀಟ್ ಪರೀಕ್ಷೆಗಳಿಗೂ ಕೂಡ ಇದೇ ಸಿಲೆಬಸ್ ಆಧರಿಸಿಯೇ ಪ್ರಶ್ನೆಗಳನ್ನು ಕೇಳಲಾಗುವುದು.


ಕಡಿಮೆಯಾಗಿರುವ ಸಿಲೆಬಸ್ ಪ್ರಶ್ನೆಗಳ ಜಾಗದಲ್ಲಿ ಶೇಷ ಉಳಿದಿರುವ ಸಿಲೆಬಸ್ ನಿಂದಲೇ  ಪ್ರಶ್ನೆಗಳನ್ನು ಹೆಚ್ಚಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.


ಇದನ್ನು ಓದಿ-  CBSE Exam 2021: ಪರೀಕ್ಷೆ ನಡೆಸುವ ವಿಧಾನದಲ್ಲಿ ಭಾರಿ ಬದಲಾವಣೆ ಸಾಧ್ಯತೆ... ಇಲ್ಲಿದೆ ವಿವರ


ಪ್ರಶ್ನೆ ಕೇಳಿದ ಗುರುಗ್ರಾಮ್  ವಿದ್ಯಾರ್ಥಿನಿ
ಈ ಕುರಿತು ಕೇಂದ್ರ ಶಿಕ್ಷಣ ಸಚಿವರಿಗೆ ಪ್ರಶ್ನೆ ಕೇಳಿರುವ ಗುರುಗ್ರಾಮ್ ಕೇಂದ್ರೀಯ ವಿದ್ಯಾಲಯ ಸಂಖ್ಯೆ 1ರ ವಿದ್ಯಾರ್ಥಿನಿ ಆದಿತ್ಯಾ ಶ್ರೀವಾಸ್ತವ್, ಈ ವರ್ಷಬೋರ್ದ್ ಪರೀಕ್ಷೆಗಳ ಎಲ್ಲ ವಿಷಯಗಳ ಪಠ್ಯಕ್ರಮ ಕಡಿತಗೊಳಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹಲವು ವಿಷಯಗಳ ಅಧ್ಯಯನ ನಡೆಸಿಲ್ಲ. ಈ ಹಿನ್ನೆಲೆ ತೆಗೆದು ಹಾಕಲಾಗಿರುವ ಸಿಲೆಬಸ್ ಅನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಗಣಿಸಲಾಗುವುದೇ ಎಂದು ಪ್ರಶ್ನಿಸಿದ್ದಳು.


ಇದನ್ನು ಓದಿ-JEE NEET ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಮೋದಿ ಸರ್ಕಾರ


NEET Exam 2021 
ಭಾರತದಲ್ಲಿ MBBS, BDS ಇತ್ಯಾದಿಗಳ ಪ್ರವೇಶ ಪಡೆಯಲು ರಾಷ್ಟ್ರೀಯ ಮಟ್ಟದಲ್ಲಿ ಅರ್ಹತಾ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (National Eligibility Cum Entrance Test-NEET) ಎಂದು ಕರೆಯಲಾಗುತ್ತದೆ.


ಇದನ್ನು ಓದಿ-NEET, JEE Main 2021 Syllabus Change! NTA ಗೆ ಶಿಕ್ಷಣ ಸಚಿವಾಲಯ ನೀಡಿದೆ ಈ ಗೈಡ್ ಲೈನ್ಸ್


ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಅನುಮತಿ ಪಡೆದು ದೇಶಾದ್ಯಂತ ನಡೆಯುತ್ತಿರುವ ಮೆಡಿಕಲ್ ಹಾಗೂ ಡೆಂಟಲ್ ಕಾಲೇಜುಗಳ MBBS ಹಾಗೂ BDS ತರಗತಿಗಳಿಗೆ ಪ್ರವೇಶ ಈ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೀಡಲಾಗುತ್ತದೆ.


ಇದನ್ನು ಓದಿ -JEE Main Exam 2021 Dates: ಫೆಬ್ರವರಿ 23 ರಿಂದ JEE Main 2021 ಪರೀಕ್ಷೆ ಆರಂಭ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.