JEE Main Exam 2021 Dates: ಫೆಬ್ರವರಿ 23 ರಿಂದ JEE Main 2021 ಪರೀಕ್ಷೆ ಆರಂಭ

JEE Main 2021 Exam Dates ಅನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖರಿಯಾಲ್ ನಿಶಾಂಕ್ ಘೋಷಿಸಿದ್ದಾರೆ. 

Last Updated : Dec 18, 2020, 02:06 PM IST
  • JEE Main 2021 ಪರೀಕ್ಷೆಯ ವೇಳಾಪಟ್ಟಿಯನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖರಿಯಾಲ್ ನಿಶಾಂಕ್ ಘೋಷಿಸಿದ್ದಾರೆ.
  • ವೇಳೆ ಮಾಹಿತಿ ನೀಡಿರುವ ಅವರು ಮುಂದಿನ ವರ್ಷ ಫೆಬ್ರವರಿ 23 ರಿಂದ ಪರೀಕ್ಷೆಗಳು ಆರಂಭಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.
  • ಮುಂದಿನ ವರ್ಷ ಒಟ್ಟು ನಾಲ್ಕು ಪರೀಕ್ಷೆಗಳನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ
JEE Main Exam 2021 Dates: ಫೆಬ್ರವರಿ 23 ರಿಂದ JEE Main 2021 ಪರೀಕ್ಷೆ ಆರಂಭ title=
JEE Main 2021 Exam Dates

JEE Main 2021 Exam Dates: ಪರೀಕ್ಷೆಯ ವೇಳಾಪಟ್ಟಿಯನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖರಿಯಾಲ್ ನಿಶಾಂಕ್ ಘೋಷಿಸಿದ್ದಾರೆ. ಈ ವೇಳೆ ಮಾಹಿತಿ ನೀಡಿರುವ ಅವರು ಮುಂದಿನ ವರ್ಷ ಫೆಬ್ರವರಿ 23 ರಿಂದ ಪರೀಕ್ಷೆಗಳು ಆರಂಭಗೊಳ್ಳಲಿದ್ದು. ಒಟ್ಟು ನಾಲ್ಕು ಪರೀಕ್ಷೆಗಳನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ. ಜೆಇಇ ಮೆನ್ಸ್ 2021 ರ ಮೊದಲ ಸೆಶನ್ ಫೆಬ್ರುವರಿ 23 ರಿಂದ ಫೆಬ್ರುವರಿ 26, 2021 ರ ನಡುವೆ ನಡೆಯಲಿದೆ. ಈ ವರ್ಷ ಒಟ್ಟು ನಾಲ್ಕು ಬಾರಿ JEE Mains ಪರೀಕ್ಷೆಗಳು ನಡೆಯಲಿವೆ. ಫೆಬ್ರುವರಿ ಬಳಿಕ ಎರಡನೇ ಸೆಶನ್ ಮಾರ್ಚ್, ಮೂರನೇ ಸೆಶನ್ ಏಪ್ರಿಲ್ ಹಾಗೂ ನಾಲ್ಕನೇ ಸೆಶನ್ ಮೇ ತಿಂಗಳಿನಲ್ಲಿ ನಡೆಸಲಾಗುವುದು. ವಿವಿಧ ರಾಜ್ಯಗಳಲ್ಲಿ ನಡೆಸಲಾಗುವ ಬೋರ್ಡ್ ಪರೀಕ್ಷೆಗಳು ಜೆಇಇ ಪರೀಕ್ಷೆಗಳಿಗೆ ಅಡೆತಡೆ ಉಂಟು ಮಾಡಬಾರದು ಎಂಬುದೇ ಇದರ ಹಿಂದಿನ ಉದ್ದೇಶವಾಗಿದೆ ಎಂದು ನಿಶಾಂಕ್ ಹೇಳಿದ್ದಾರೆ. ಇದಕ್ಕೂ ಮೊದಲು ವರ್ಷದಲ್ಲಿ ಎರಡು ಬಾರಿ ಈ ಪರೀಕ್ಷೆಗಳು ನಡೆಯುತ್ತಿದ್ದವು.

ಒಟ್ಟು 13 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ
ಜೆಇಇ ಮೈನ್ಸ್ ಪರೀಕ್ಷೆ ಈ ಬಾರಿ ಒಟ್ಟು 13 ಭಾಷೆಗಳಲ್ಲಿ ನಡೆಸಲಾಗುತ್ತಿದೆ. ಇಂಗ್ಲಿಷ್, ಹಿಂದಿ ಭಾಷೆಗಳು ಸೇರಿದಂತೆ, ಗುಜರಾತಿ, ಬಂಗಾಳಿ, ಅಸಾಮಿ, ಕನ್ನಡ, ಮರಾಠಿ, ಮಲಯಾಳಂ. ಒಡಿಯಾ, ತಮಿಳು, ತೆಲುಗು, ಉರ್ದು, ಪಂಜಾಬಿ ಭಾಷೆಗಳಲ್ಲಿ ಈ ಬಾರಿ ಪರೀಕ್ಷೆಗಳು ನಡೆಯಲಿವೆ. ಇದಕ್ಕೂ ಮೊದಲು ಇಂಗ್ಲಿಷ್, ಹಿಂದಿ, ಗುಜರಾತಿ ಭಾಷೆಗಳಲ್ಲಿ ಜೆಇಇ ಪರೀಕ್ಷೆ ನಡೆಸಲಾಗುತ್ತಿತ್ತು.

ಇದನ್ನು ಓದಿ- NEET, JEE Main 2021 Syllabus Change! NTA ಗೆ ಶಿಕ್ಷಣ ಸಚಿವಾಲಯ ನೀಡಿದೆ ಈ ಗೈಡ್ ಲೈನ್ಸ್

2021ರ ಒಟ್ಟು ನಾಲ್ಕು ಚಾನ್ಸ್ ಗಳಲ್ಲಿ ವಿದ್ಯಾರ್ಥಿಗಳ ಬೆಸ್ಟ್ NTA ಸ್ಕೋರ್ ಆಧರಿಸಿ ಮೆರಿಟ್ ಲಿಸ್ಟ್/ ಶ್ರೇಯಾಂಕ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಈ ಬಾರಿ UPSEE (2021) ಪರೀಕ್ಷೆಗಳನ್ನು ಆಯೋಜಿಸಲಾಗುವುದಿಲ್ಲ. ಹೀಗಾಗಿ ಡಾ. ಎಪಿಜೆ ಅಬ್ದುಲ್ ಕಲಾಮ್ ತಾಂತ್ರಿಕ ವಿವಿ, ಲಖನೌನಲ್ಲಿ ರಾಜ್ಯದ 750 ಕಾಲೇಜುಗಳಲ್ಲಿ 1.40 ಲಕ್ಷ ಸೀಟ್ ಗಳಿಗಾಗಿ ಜೆಇಇ ಮೇನ್ 2021ನ ಸ್ಕೋರ್ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು ಎನ್ನಲಾಗಿದೆ.

ಶೆಡ್ಯೂಲ್ ಇಂತಿದೆ
JEE Main Exam 2021 ಗಾಗಿ ರಿಜಿಸ್ಟ್ರೇಶನ್ ಆರಂಭಗೊಂಡಿದೆ. ಇಚ್ಛೆಯುಳ್ಳ ಹಾಗೂ ಯೋಗ್ಯ ಅಭ್ಯರ್ಥಿಗಳು NTA ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ನೋಂದಣಿ ಮಾಡಿಕೊಳ್ಳಬಹುದು. ರಿಜಿಸ್ಟ್ರೇಶನ್ ನ ಸಂಪೂರ್ಣ ಮಾಹಿತಿ jeemain.nta.nic.in ನೀಡಲಾಗಿದೆ.

ಆನ್ಲೈನ್ ನೋಂದಣಿ ಆರಂಭ- 15 ಡಿಸೆಂಬರ್
ಆನ್ಲೈನ್ ಅರ್ಜಿ ಭರ್ತಿ ಮಾಡಲು ಅಂತಿಮ ತಿಥಿ-15 ಜನವರಿ 
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ -16 ಜನವರಿ 
ತಿದ್ದುಪಡಿಯ ದಿನಾಂಕ-18 ಜನವರಿ, 2021 

90 ಪ್ರಶ್ನೆಗಳಲ್ಲಿ ಒಟ್ಟು 75 ಪ್ರಶ್ನೆಗಳಿಗೆ ಉತ್ತರಿಸಬೇಕು
ಪ್ರಶ್ನೆ ಪತ್ರಿಕೆಯ ಪ್ಯಾಟರ್ನ್ ಕುರಿತು ಮಾಹಿತಿ ನೀಡಿರುವ ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಕರಿಯಾಲ್ ನಿಶಾಂತ್, "ವಿಭಿನ್ನ ಶಿಕ್ಷಣ ಮಂಡಳಿಗಳ ಸಲಹೆ ಪಡೆದುಕೊಂಡಿರುವ NTA, ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 90 ಪ್ರಶ್ನೆಗಳಿರಲಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಒಟ್ಟು 75 ಪ್ರಶ್ನೆಗಳನ್ನು ಉತ್ತರಿಸಬೇಕು ಹಾಗೂ ಉಳಿದ 15 ಪ್ರಶ್ನೆಗಳು ವಿಕಲ್ಪಗಳಾಗಿರಲಿವೆ. ಆದರೆ, ವಿಕಲ್ಪ ಎಂದು ನೀಡಲಾಗಿರುವ 15 ಪ್ರಶ್ನೆಗಳಿಗೆ ಋಣಾತ್ಮಕ ಅಂಕ (Negative Marking) ಇರುವುದಿಲ್ಲ ಎಂದು ಹೇಳಿದ್ದಾರೆ. ನಾಲ್ಕು ಪರೀಕ್ಷೆಗಳಲ್ಲಿನ ಉತ್ತಮ ಅಂಕಗಳನ್ನು ಆಧರಿಸಿ ಮೆರಿಟ್ ಲಿಸ್ಟ್ /ಶ್ರೇಯಾಂಕ ಪಟ್ಟಿ ಸಿದ್ಧಪಡಿಸಲಾಗುವುದು" ಎಂದು ಅವರು ಹೇಳಿದ್ದಾರೆ.

Trending News