CBSE Board Exam 2021: ಶಾಲೆಗಳಿಗೆ ಈ ಮಾಹಿತಿ ನೀಡಲು ಇಂದೇ ಕೊನೆಯ ದಿನ, ಇಲ್ದಿದ್ರೆ ನಿಂತ್ಹೋಗುತ್ತೆ Result
CBSE ಶಾಲೆಗಳು CBSE ಮಂಡಳಿಗೆ (CBSE Board) ಶಿಕ್ಷಕರ ಮಾಹಿತಿ ನೀಡಲು ಇಂದು ಕೊನೆಯ ದಿನವಾಗಿದೆ. ಒಂದು ವೇಳೆ ಇಂದೂ ಕೂಡ ಶಾಲೆಗಳು ತಮ್ಮ ಶಿಕ್ಷಕರ ಕುರಿತು ಮಾಹಿತಿ ನೀಡದೆ ಹೋದಲ್ಲಿ, ಅಂತಹ ಶಾಲೆಗಳಿಗೆ 50 ಸಾವಿರ ರೂ.ದಂಡದ ಜೊತೆಗೆ CBSE ಮಂಡಳಿ ಪರೀಕ್ಷಾ ಫಲಿತಾಂಶ 2021 (CBSE Board Exam Result 2021) ಕೂಡ ತಡೆಹಿಡಿಯಲಾಗುವುದು ಎನ್ನಲಾಗಿದೆ.
ನವದೆಹಲಿ: CBSE ಮಂಡಳಿಯಿಂದ ಮಾನ್ಯತೆ ಪಡೆದ ಎಲ್ಲಾ ಶಾಲೆಗಳಿಗೆ ಶಿಕ್ಷಕರ ಮಾಹಿತಿ ಅಪ್ಡೇಟ್ ಮಾಡಲು ಸೂಚಿಸಲಾಗಿತ್ತು. CBSE Board Exam 2021 ಮೇ 4, 2021ಕ್ಕೆ ಆರಂಭವಾಗುತ್ತಿವೆ ಹಾಗೂ ಪ್ರಸ್ತುತ ಶಾಲೆಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳು (CBSE Practical Exam 2021) ನಡೆಯುತ್ತಿವೆ . ಇದರ ಹೊರತಾಗಿಯೂ ಕೂಡ ಶಾಲೆಗಳು ಇದುವರೆಗೆ ತಮ್ಮ ಶಾಲೆಗಳಲ್ಲಿನ ಶಿಕ್ಷಕರ ವಿವರಗಳನ್ನೂ ಮಂಡಳಿಗೆ ತಲುಪಿಸಿಲ್ಲ. ಹೀಗಾಗಿ ಮಂಡಳಿ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಶಾಲೆಗಳಿಗೆ ಬೀಳಲಿದೆ ಭಾರಿ ದಂಡ
ಸಿಬಿಎಸ್ಇ ಬೋರ್ಡ್, ತನ್ನಿಂದ ಮಾನ್ಯತೆ ಪಡೆದ ಎಲ್ಲ ಶಾಲೆಗಳಿಗೆ ಶಿಕ್ಷಕರ ಸಂಪೂರ್ಣ ಮಾಹಿತಿಯನ್ನು ಸಿಬಿಎಸ್ಇ ಅಫಿಲೇಟೆಡ್ ಸ್ಕೂಲ್ ಇನ್ಫಾರ್ಮಶನ್ ಸಿಸ್ಟಮ್ (OASIS)ನಲ್ಲಿ ಅಪ್ಡೇಟ್ ಮಾಡಲು ಸೂಚಿಸಿದೆ. ಇದಕ್ಕಾಗಿ ಶಾಲೆಗಳಿಗೆ ಏಪ್ರಿಲ್ 10, 2021 ರವರೆಗೆ ಕಾಲಾವಕಾಶ ನೀಡಲಾಗಿದೆ. ಇಂದು ಸಂಪೂರ್ಣ ದಿನ ಒಂದು ವೇಳೆ ಶಾಲೆಗಳು ತಮ್ಮ ಶಿಕ್ಷಕರ ಮಾಹಿತಿ ನೀಡದೆ ಇದ್ದ ಸಂದರ್ಬದಲ್ಲಿ, ಅಂತಹ ಶಾಲೆಗಳಿಗೆ ಬೋರ್ಡ್ 50 ಸಾವಿರ ದಂಡ ವಿಧಿಸಲಿದೆ.
ಇದನ್ನೂ ಓದಿ- CBSE Exam Date Sheet 2021: CBSE 10ನೇ ಮತ್ತು 12ನೇ ತರಗತಿ ಪರೀಕ್ಷೆಗಳ Date Sheet ಬಿಡುಗಡೆ, ಹೀಗೆ ಡೌನ್ಲೋಡ್ ಮಾಡಿ
ಫಲಿತಾಂಶದ ಮೇಲೂ ಕೂಡ ಪ್ರಭಾವ ಬೀರಲಿದೆ
ಶಿಕ್ಷಕರ ಮಾಹಿತಿ ನೀಡದೆ ಇರುವ ಶಾಲೆಗಳ ಮೇಲೆ ಕೇವಲ ದಂಡ ಮಾತ್ರ ವಿಧಿಸದೆ, ಅಂತಹ ಶಾಲೆಗಳ ಪರೀಕ್ಷಾ ಫಲಿತಾಂಶ ಕೂಡ ತಡೆ ಹಿಡಿಯಲಾಗುವುದು ಎಂದು ಮಂಡಳಿ ಸೂಚಿಸಿದೆ. ಸಿಬಿಎಸ್ಇ ಮಂಡಳಿಯ ಎಕ್ಸಾನ್ ಕಂಟ್ರೋಲರ್ ಡಾ. ಸೈಯಮ್ ಭಾರದ್ವಾಜ್ ಈ ಕುರಿತು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ನಿಯಮಗಳನ್ನು ಪಾಲಿಸದೆ ಇರುವ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಮತ್ತು ಶಾಲೆಗಳ ಪ್ರಾಯೋಗಿಕ ಪರೀಕ್ಷೆಗಳನ್ನು ಕೂಡ ರದ್ದುಗೊಳಿಸಲಾಗುವುದು. ಇದಲ್ಲದೆ ಶಾಲೆಯ ಪ್ರಾಂಶುಪಾಲರನ್ನೇ ಇದಕ್ಕೆ ಹೊಣೆ ಮಾಡಲಾಗುವುದು.
ಇದನ್ನೂ ಓದಿ- CBSE Board Exam 2021: CBSE ಹೊಸ ನಿಯಮ, ಈ ಪರೀಕ್ಷೆಯಲ್ಲಿ ಯಾರಿಗೂ ಕೂಡ Fail ಮಾಡಲಾಗುವುದಿಲ್ಲ
ಕೊವಿಡ್-19 ಹಿನ್ನೆಲೆ ನೌಕರಿ ಕಳೆದುಕೊಂಡ ಶಿಕ್ಷಕರು
ಕೊವಿಡ್-19 ಮಹಾಮಾರಿಯ ಹಿನ್ನೆಲೆ ಹಲವು ಶಾಲೆಗಳು ತನ್ನ ಕೆಲವು ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗಳ ಸಿದ್ಧತೆಯಲ್ಲಿ ಕೊರತೆ ಎದುರಾಗಿದೆ. ಯಾವ ಶಿಕ್ಷಕರನ್ನು ಮಂಡಳಿ ಪರೀಕ್ಷಾ ಸಿದ್ಧತೆಗಳ ಡ್ಯೂಟಿಗೆ ನಿಯೋಜಿಸಿದೆಯೋ, ಆ ಶಿಕ್ಷಕರು ಇದೀಗ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿಲ್ಲ. ಹೀಗಿರುವಾಗ ಶಾಲೆಗಳು ಹೊರ ಶಿಕ್ಷಕರ ನೆರವಿನಿಂದ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಥಿಯರಿ ಪರೀಕ್ಷೆಗಳಲ್ಲಿ ಈ ರೀತಿಯ ಸಮಸ್ಯೆಗಳು ಉದ್ಭವಿಸಬಾರದು ಎಂಬುದೇ ಬೋರ್ಡ್ ನ ಈ ನಿರ್ಣಯದ ಹಿಂದಿನ ಉದ್ದೇಶವಾಗಿದೆ.
ಇದನ್ನೂ ಓದಿ- CBSE Board Exam 2021: ಕೇವಲ Main Subjects ಗೆ ಮಾತ್ರ ನಡೆಯಲಿದೆ ಪರೀಕ್ಷೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.