CBSE 10, 12 Term 1  Board Exam Results: ಭಾರತದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಸಿಬಿಎಸ್ಇ (CBSE) 10 ನೇ ತರಗತಿ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆ 2022 ಟರ್ಮ್ 1 ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಇಂದು ಬಹುನಿರೀಕ್ಷಿತ CBSE 10, 12ನೇ ತರಗತಿ ಟರ್ಮ್-1 ಪರೀಕ್ಷೆ ಫಲಿತಾಂಶ ಸಾಧ್ಯತೆಯಿದೆ.


COMMERCIAL BREAK
SCROLL TO CONTINUE READING

ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಸೋಮವಾರ (ಜನವರಿ 24)  ಸಿಬಿಎಸ್ಇ (CBSE) 10 ನೇ ತರಗತಿ ಮತ್ತು 12 ನೇ ತರಗತಿ ಟರ್ಮ್-1 ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಆದರೆ, ಮಂಡಳಿ ವತಿಯಿಂದ ಅಂತಹ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. 


ಇದನ್ನೂ ಓದಿ- ಬಿಜೆಪಿ ಜೊತೆ ಮೈತ್ರಿಕೊಂಡು ಶಿವಸೇನೆ 25 ವರ್ಷ ವ್ಯರ್ಥಮಾಡಿದೆ : ಉದ್ಧವ್ ಠಾಕ್ರೆ


ಸಿಬಿಎಸ್ಇ 10 ನೇ ತರಗತಿ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆ 2022 ಟರ್ಮ್ 1 ಫಲಿತಾಂಶವನ್ನು (CBSE Class 10, 12 Board Exam Term 1 Results) ಘೋಷಿಸಿದ ನಂತರ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ವಿವಿಧ ವಿಧಾನಗಳ ಮೂಲಕ ವೀಕ್ಷಿಸಬಹುದು. 


CBSE ತರಗತಿ 10, 12ನೇ ತರಗತಿ ಬೋರ್ಡ್ ಪರೀಕ್ಷೆಯ ಟರ್ಮ್ 1 ಫಲಿತಾಂಶ 2022 ಅನ್ನು ಹೇಗೆ ಪರಿಶೀಲಿಸುವುದು?
>> ಫಲಿತಾಂಶಗಳನ್ನು ಘೋಷಿಸಿದ ನಂತರ, ವಿದ್ಯಾರ್ಥಿಗಳು CBSE ಯ ಅಧಿಕೃತ ವೆಬ್‌ಸೈಟ್‌ಗೆ ( cbse.nic.in ) ಭೇಟಿ ನೀಡಬೇಕಾಗುತ್ತದೆ.
>> ಮುಖಪುಟದಲ್ಲಿ, 'ಫಲಿತಾಂಶಗಳು' ಲಿಂಕ್ ಅನ್ನು ಕ್ಲಿಕ್ ಮಾಡಿ.
>> ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ, ಅಲ್ಲಿ ನೀವು 'CBSE ತರಗತಿ 10ನೇ ಫಲಿತಾಂಶ 2022' ಅಥವಾ 'CBSE ತರಗತಿ 12ನೇ ಫಲಿತಾಂಶ 2022' ಲಿಂಕ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
>> ನಿಮ್ಮ ರೋಲ್ ಸಂಖ್ಯೆ ಸೇರಿದಂತೆ ನಿಮ್ಮ ವಿವರಗಳನ್ನು ನಮೂದಿಸಿ ಮತ್ತು 'ಸಲ್ಲಿಸು' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 
>> ನಿಮ್ಮ CBSE ತರಗತಿ 10 ಅಥವಾ 12 ಬೋರ್ಡ್ ಪರೀಕ್ಷೆಯ ಟರ್ಮ್ 1 ಫಲಿತಾಂಶ 2022 ಅನ್ನು ನಿಮ್ಮ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.


ಇದನ್ನೂ ಓದಿ- ಮೂರನೇ ಕೊರೊನಾ ಅಲೆ ಆರಂಭವಾದಾಗಿನಿಂದ ಕನಿಷ್ಠ 875 ಸಂಸತ್ ಸಿಬ್ಬಂದಿಗೆ ಕೋವಿಡ್ -19 ಧೃಡ


CBSE ತರಗತಿ 10 ಮತ್ತು ತರಗತಿ 12 ಬೋರ್ಡ್ ಪರೀಕ್ಷೆಯ ಟರ್ಮ್ 1 ಫಲಿತಾಂಶಗಳನ್ನು ಪರಿಶೀಲಿಸಲು ಇತರ ಮಾರ್ಗಗಳು? 
ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಡಿಜಿಲಾಕರ್ ಅಪ್ಲಿಕೇಶನ್ ಮತ್ತು ಯುನಿಫೈಡ್ ಮೊಬೈಲ್ ಅಪ್ಲಿಕೇಶನ್ ಫಾರ್ ನ್ಯೂ-ಏಜ್ ಗವರ್ನೆನ್ಸ್ (UMANG) ಅಪ್ಲಿಕೇಶನ್ ಮೂಲಕ ಪರಿಶೀಲಿಸಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.