CBSE Class 10, 12 Term 1 Result 2022: CBSE 10 ಮತ್ತು 12ನೇ ತರಗತಿಗಳ ಅವಧಿ-1 ಫಲಿತಾಂಶ ಇಂದು ಪ್ರಕಟಣೆಯಾಗಲಿವೆ, ಈ ರೀತಿ ಪರಿಶೀಲಿಸಿ
CBSE Class 10, 12 Term 1 Result 2022 - ಸಿಬಿಎಸ್ಇ ಮಂಡಳಿ ಇಂದು ತನ್ನ ಅಧಿಕೃತ ವೆಬ್ ಸೈಟ್ ಮೇಲೆ 10 ಮತ್ತು 12ನೇ ತರಗತಿಯ ಟರ್ಮ್-1 ಪರೀಕ್ಷೆಯ ಫಲಿತಾಂಶ (CBSE Class 10, 12 Board Exam 2022 Term 1 Result) ಪ್ರಕಟಿಸುವ ಸಾದ್ಯತೆ ಇದೆ. ಸಿಬಿಎಸ್ಇ ಅಧಿಕೃತ ವೆಬ್ ಸೈಟ್ ಆಗಿರುವ cbse.gov.in ಮೇಲೆ ನಿಮ್ಮ ಸ್ಕೋರ್ ಪರಿಶೀಲಿಸಬಹುದು.
CBSE Class 10, 12 Board Exam 2022 Term 1 Result - ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಇದುವರೆಗೆ CBSE ತರಗತಿ 10, 12 ಬೋರ್ಡ್ ಪರೀಕ್ಷೆ 2022 ಟರ್ಮ್ 1 ಫಲಿತಾಂಶವನ್ನು ಬಿಡುಗಡೆ ಮಾಡಿಲ್ಲ (CBSE ಕ್ಲಾಸ್ 10, 12 ಬೋರ್ಡ್ ಪರೀಕ್ಷೆ 2022 ಟರ್ಮ್ 1 ಫಲಿತಾಂಶ) ಮತ್ತು ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು (CBSE Class 10,12 Term 1 Scores) ಪರಿಶೀಲಿಸಲು ಕಾತರರಾಗಿದ್ದಾರೆ . ಮಾಧ್ಯಮ ವರದಿಗಳ ಪ್ರಕಾರ, ಫಲಿತಾಂಶವನ್ನು ಇಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆಯಾಗುವ ನಿರೀಕ್ಷೆ ಇದೆ. ಜನವರಿ 15 ರಂದು ಫಲಿತಾಂಶಗಳನ್ನು (CBSE ತರಗತಿ 10, 12 ಬೋರ್ಡ್ ಪರೀಕ್ಷೆ 2022 ಟರ್ಮ್ 1 ಫಲಿತಾಂಶ) ಪ್ರಕಟಿಸಲಾಗುವುದು ಎಂದು ಈ ಮೊದಲು ನಿರೀಕ್ಷಿಸಲಾಗಿತ್ತು. ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಯಾವಾಗ ಬೇಕಾದರೂ ಬಿಡುಗಡೆ ಮಾಡಬಹುದು. ಫಲಿತಾಂಶಗಳ ಬಿಡುಗಡೆಯ ನಂತರ (CBSE ಬೋರ್ಡ್ ಪರೀಕ್ಷೆ 2022 ಅವಧಿ 1 ಫಲಿತಾಂಶಗಳು), 10 ನೇ ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಸ್ಕೋರ್‌ಗಳನ್ನು CBSE ವೆಬ್‌ಸೈಟ್‌ಗಳಾದ cbse.gov.in ಮತ್ತು cbseresults.nic.in ನಲ್ಲಿ ಪರಿಶೀಲಿಸಲು ಸಾಧ್ಯವಾಗಲಿದೆ.
ಆದರೆ, ಈ ನಿಟ್ಟಿನಲ್ಲಿ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಮಾಡಲಾಗಿಲ್ಲವಾದರೂ, ಮಂಡಳಿಯು CBSE ಬೋರ್ಡ್ ಪರೀಕ್ಷೆ 2022 ಟರ್ಮ್ 1 ಫಲಿತಾಂಶವನ್ನು ಇಂದು ಜನವರಿ 24 ರಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಫಲಿತಾಂಶದ ಘೋಷಣೆಯ ನಂತರ, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಪರಿಶೀಲಿಸಲು ಮತ್ತು cbse.gov.in ನಲ್ಲಿ ತನ್ನ ಸ್ಕೋರ್ ನೋಡಲು ಸಾಧ್ಯವಾಗಲಿದೆ.
CBSE Class 10, 12 Board Exam 2022 Term 1 Result: ಈ ರೀತಿ ಪರಿಶೀಲಿಸಿ
1: CBSE ಅಧಿಕೃತ ವೆಬ್‌ಸೈಟ್ cbse.gov.in ಗೆ ಭೇಟಿ ನೀಡಿ.
2: CBSE 10ನೇ ಅವಧಿ 1 ಫಲಿತಾಂಶ 2022 ಅಥವಾ CBSE 12ನೇ ಫಲಿತಾಂಶ 2022 ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
3: ಹೊಸ ಪುಟ ತೆರೆಯುತ್ತದೆ. ಇಲ್ಲಿ ನಿಮ್ಮ ರೋಲ್ ಸಂಖ್ಯೆ ಮತ್ತು ಜನ್ಮ ದಿನಾಂಕ ಮತ್ತು ಇತರ ವಿವರಗಳನ್ನು ನಮೂದಿಸಿ.
4: ಇದರ ನಂತರ 10ನೇ ಅಥವಾ 12ನೇ ತರಗತಿಯ ಫಲಿತಾಂಶ ನಿಮ್ಮ ಪರದೆಯ ಮೇಲೆ ಬರಲಿದೆ.
10 ನೇ ಮತ್ತು 12 ನೇ ತರಗತಿಯ ಅವಧಿ 1ರ ಪರೀಕ್ಷೆಯನ್ನು ನೀಡಿದ ವಿದ್ಯಾರ್ಥಿಗಳು (CBSE Class 10, 12 Board Exam 2022 Term 1 Result) ತಮ್ಮ ಅಂಕಗಳನ್ನು ಡಿಜಿಲಾಕರ್ ಅಪ್ಲಿಕೇಶನ್ (DigiLocker app) ಮತ್ತು UMANG ಅಪ್ಲಿಕೇಶನ್‌ನಲ್ಲಿಯೂ (UMANG app) ಪರಿಶೀಲಿಸಬಹುದು.
ಇದನ್ನೂ ಓದಿ-Republic Day 2022: ದೆಹಲಿಯಲ್ಲಿ ಮಿಂಚಲಿದ್ದಾಳೆ ಮೈಸೂರಿನ ಕುವರಿ
DigiLocker - ಇದಕ್ಕಾಗಿ digilocker.gov.in ಗೆ ಹೋಗಿ. ನಿಮ್ಮ ರೋಲ್ ಸಂಖ್ಯೆ ಮತ್ತು ಜನ್ಮ ದಿನಾಂಕದ ಸಹಾಯದಿಂದ ಮಾರ್ಕ್ ಶೀಟ್ ಅನ್ನು ಡೌನ್‌ಲೋಡ್ ಮಾಡಿ.
ಇದನ್ನೂ ಓದಿ-Salman Khan ಫಾರ್ಮ್ ಹೌಸ್ ಕೆಳಗಡೆ ಫಿಲ್ಮ್ ಸ್ಟಾರ್ಸ್ ಗಳ ಶವಗಳನ್ನು ಹೂಳಲಾಗಿದೆಯಂತೆ!
UMANG app - ಇದಕ್ಕಾಗಿ ಉಮಂಗ್ ಆಪ್ ಅನ್ನು ಮೊದಲು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ. ಇದರಲ್ಲಿ ಫಲಿತಾಂಶವನ್ನು ಪರಿಶೀಲಿಸಲು ವಿದ್ಯಾರ್ಥಗಳು ಅವನ / ಅವಳ ರೋಲ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕು.
ಇದನ್ನೂ ಓದಿ-Single Sign On Service: ಒಂದೇ ID ಬಳಸಿ ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯಗಳ ಲಾಭ ಪಡೆಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.