Single Sign On Service: ಒಂದೇ ID ಬಳಸಿ ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯಗಳ ಲಾಭ ಪಡೆಯಿರಿ, ಆಗಸ್ಟ್ ನಿಂದ ಆರಂಭಗೊಳ್ಳುತ್ತಿದೆ ಈ ಹೊಸ ಸೇವೆ

Single Sign On Serviceನಲ್ಲಿ ನೀವು ಪದೇ ಪದೇ ಪರಿಶೀಲನೆಯ ಪ್ರಕ್ರಿಯೆಯ ಮೂಲಕ ಹೋಗಬೇಕಾಗಿಲ್ಲ. ಒಂದೇ ಐಡಿಯಿಂದ ಎಲ್ಲಾ ರೀತಿಯ ಸರ್ಕಾರಿ ಸೇವೆಗಳನ್ನು (Government Fecilities) ನೀವು ಪಡೆಯಬಹುದು.

Written by - Nitin Tabib | Last Updated : Jan 23, 2022, 05:24 PM IST
  • ಇನ್ಮುಂದೆ ಎಲ್ಲಾ ರೀತಿಯ ಸರ್ಕಾರಿ ಯೋಜನೆಗಳಿಗೆ ಒಂದೇ ID ಇರಲಿದೆ.
  • ಇನ್ಮುಂದೆ ಮಲ್ಟಿಪಲ್ ಲಾಗ್ ಇನ್ ಅವಶ್ಯಕತೆ ನಿಮಗೆ ಬೇಕಾಗುವುದಿಲ್ಲ.
  • ಜೀವನಪೂರ್ತಿ ನೀವು ಒಂದೇ ಐಡಿಯನ್ನು ಬಳಕೆ ಮಾಡಬಹುದು.
Single Sign On Service: ಒಂದೇ ID ಬಳಸಿ ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯಗಳ ಲಾಭ ಪಡೆಯಿರಿ, ಆಗಸ್ಟ್ ನಿಂದ ಆರಂಭಗೊಳ್ಳುತ್ತಿದೆ ಈ ಹೊಸ ಸೇವೆ title=
Single Sign On Service (Representational Image)

Single Sign On Service - ಕೇಂದ್ರ (Central Government Schemes) ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ (State Government Schemes) ಲಾಭ ಪಡೆಯಲು ಇನ್ನು ಮುಂದೆ ಬಹು ಲಾಗಿನ್ ಐಡಿ-ಪಾಸ್‌ವರ್ಡ್‌ಗಳನ್ನು (Multiple Login ID-Password) ನೆನಪಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ.ಏಕೆಂದರೆ ಇನ್ಮುಂದೆ ನಿಮಗೆ ಕೇವಲ ಒಂದೇ ಒಂದು ಐಡಿ ಬಳಸಿ ಎಲ್ಲಾ ಸರ್ಕಾರಿ ಯೋಜನೆಗಳ (Government Schemes) ಲಾಭವನ್ನು ಪಡೆಯಲು ಸಾಧ್ಯವಾಗಲಿದೆ. ಈ ಎಲ್ಲಾ ಯೋಜನೆಗಳಿಗೆ ಒಂದೇ ಡಿಜಿಟಲ್ ಪ್ರೊಫೈಲ್ ಇರುತ್ತದೆ. ಈ ವ್ಯವಸ್ಥೆಯನ್ನು 'Single Sign On Service ' ಎಂದು ಕರೆಯಲಾಗುತ್ತದೆ. ಆಗಸ್ಟ್‌ನಿಂದ ಈ ಹೊಸ ವ್ಯವಸ್ಥೆ ಆರಂಭವಾಗಲಿದೆ.

ಜೀವನ ಪೂರ್ತಿ ನೀವು ಒಂದೇ ಐಡಿಯನ್ನು ಬಳಸಬಹುದು
>> ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳು ಮತ್ತು ಸೌಲಭ್ಯಗಳ ಏಕೀಕರಣಕ್ಕಾಗಿ ಪೋರ್ಟಲ್/ಆ್ಯಪ್ ಸಿದ್ಧಪಡಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.
>> ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪೋರ್ಟಲ್/ಆ್ಯಪ್ ಸಿದ್ಧಪಡಿಸುವ ಈ ಪ್ರಕ್ರಿಯೆಯನ್ನು ಆರಂಭಿಸಿದೆ.
>> ಒಬ್ಬರು ಈ ಪೋರ್ಟಲ್‌ನಲ್ಲಿ ಸೈನ್ ಇನ್ ಮಾಡಬೇಕಾಗುತ್ತದೆ ಮತ್ತು ನಂತರ ಬಳಕೆದಾರರ ದೃಢೀಕರಣವಿರುತ್ತದೆ. ಇದರ ನಂತರ, ಈ ಒಂದು ಐಡಿಯನ್ನು ಜೀವನದುದ್ದಕ್ಕೂ ಪ್ರತಿಯೊಂದು ರೀತಿಯ ಸರ್ಕಾರಿ ಯೋಜನೆಗಳಿಗೆ ನೀವು ಬಳಸಬಹುದು.
>> ಈ ಸೌಲಭ್ಯಗಳು ಸಿಂಗಲ್ ಸೈನ್ ಆನ್ ಪೋರ್ಟಲ್‌ನಲ್ಲಿ ಲಭ್ಯವಿರುತ್ತವೆ

ಶಾಲಾ, ಕಾಲೇಜು ಪ್ರವೇಶ, ಶೈಕ್ಷಣಿಕ ಪ್ರಮಾಣ ಪತ್ರ, ವಿದ್ಯುತ್-ನೀರಿನ ಬಿಲ್ ಸಲ್ಲಿಕೆ, ರೈಲ್ವೇ-ವಿಮಾನ ಟಿಕೆಟ್, ಮನೆ ತೆರಿಗೆ ಪಾವತಿ, ಆದಾಯ ತೆರಿಗೆ ರಿಟರ್ನ್, ಜಿಎಸ್‌ಟಿ ರಿಟರ್ನ್ ಫೈಲಿಂಗ್, ವ್ಯವಹಾರ ಅನುಮತಿಗೆ ಸಂಬಂಧಿಸಿದ ಸೌಲಭ್ಯಗಳೂ ಇದರಲ್ಲಿ ಲಭ್ಯವಿರುತ್ತವೆ. ವಿದ್ಯಾರ್ಥಿವೇತನ ಅರ್ಜಿ, ವ್ಯಾಪಾರ ಅನುಮೋದನೆ, ಆರಂಭಿಕ ನೋಂದಣಿ ಸೌಲಭ್ಯ ಒಂದೇ ವೇದಿಕೆಯಲ್ಲಿ ಲಭ್ಯವಿರಲಿವೆ. ಪಾಸ್‌ಪೋರ್ಟ್, ಆಧಾರ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಗ್ಯಾಸ್ ಸಂಪರ್ಕ, ಡ್ರೈವಿಂಗ್ ಲೈಸೆನ್ಸ್, ರೇಷನ್ ಕಾರ್ಡ್, ಮದುವೆ-ಜನನ-ಮರಣ ಪ್ರಮಾಣ ಪತ್ರ, ಪಿಎಫ್, ಆರ್ಮ್ ಲೈಸೆನ್ಸ್, ಟ್ರೇಡ್ ಲೈಸೆನ್ಸ್ ಮುಂತಾದ ಕೆಲಸಗಳಿಗೆ ಇನ್ನು ಮುಂದೆ ಬೇರೆ ಬೇರೆ ವೆಬ್‌ಸೈಟ್‌ಗಳಿಗೆ ನೀವು ಭೇಟಿ ನೀಡಬೇಕಾಗಿಲ್ಲ.

ಇದನ್ನೂ ಓದಿ-Coronavirus On Smartphone : ಮೊಬೈಲ್ ಬಳಕೆದಾರರೆ ಗಮನಿಸಿ : ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇರಬಹುದು ಕೋವಿಡ್-19 ವೈರಸ್!

KYC ಮತ್ತು ಡಿಜಿಲಾಕರ್
>> ಕೆಲವು ವ್ಯಾಪಾರ ಸಂಬಂಧಿತ ಸೇವೆಗಳಿಗಾಗಿ, ಅದೇ ಪೋರ್ಟಲ್ ಅಥವಾ ಅಪ್ಲಿಕೇಶನ್ ಮೂಲಕ ವಾರ್ಷಿಕ ನವೀಕರಣವನ್ನು 'ಸರಿ' ಬಟನ್ ಅನ್ನು ಟಿಕ್ ಮಾಡುವ ಮೂಲಕ ವರ್ಷದಲ್ಲಿ ಒಮ್ಮೆ ಮಾತ್ರ ದೃಢೀಕರಿಸಬೇಕು.
>> ಬ್ಯಾಂಕಿಂಗ್ ಸೇವೆಗಳಿಗೆ ಬಳಸುವ ಕೆವೈಸಿಯನ್ನು ಸಹ ಇದಕ್ಕೆ ಲಿಂಕ್ ಮಾಡಲಾಗುತ್ತದೆ. ಸರ್ಕಾರವು ಈ ಇದರೊಂದಿಗೆ ಡಿಜಿಲಾಕರ್ ಅನ್ನು ಸಹ ಸಂಯೋಜಿಸುತ್ತದೆ, ಆದ್ದರಿಂದ ಅರ್ಜಿಯ ಜೊತೆಗೆ ಅಗತ್ಯ ದಾಖಲೆಯ ನಕಲು ಸಹ ಅಲ್ಲಿ ಲಭ್ಯ ಇರಲಿವೆ.

ಇದನ್ನೂ ಓದಿ-Facebook ಬಳಕೆದಾರರಿಗೊಂದು ಎಚ್ಚರಿಕೆ! ಈ ರೀತಿಯ Comment ನಿಮ್ಮನ್ನು ಶಿಕ್ಷೆಗೆ ಗುರಿಯಾಗಿಸಬಹುದು

ಈ ವೈಶಿಷ್ಟ್ಯವು ಅತ್ಯಂತ ವಿಶೇಷವಾಗಿರುತ್ತದೆ
>> 'ಸಿಂಗಲ್ ಸೈನ್ ಆನ್ ಸರ್ವಿಸ್' ಸೌಲಭ್ಯದಲ್ಲಿನ ಪ್ರಮುಖ ವೈಶಿಷ್ಟ್ಯವೆಂದರೆ Pre-Filled ಫಾರ್ಮ್ ಆಗಿರುತ್ತದೆ.
>> ನೀವು ಯಾವುದೇ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ತಕ್ಷಣ, ಅರ್ಜಿದಾರರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಫಾರ್ಮ್ ತೆರೆದ ತಕ್ಷಣ ವಿವಿಧ ಕಾಲಂಗಳಲ್ಲಿ ಸ್ವಯಂಚಾಲಿತವಾಗಿ ಭರ್ತಿ ಮಾಡಲಾಗುತ್ತದೆ.
>> ನೀವು ಕೇವಲ 'ಸರಿ' ಬಟನ್ ಮೇಲೆ ಕ್ಲಿಕ್ ಮಾಡಬೇಕು ಅಷ್ಟೇ.

ಇದನ್ನೂ ಓದಿ-Golden Blood: ವಿಶ್ವದಲ್ಲಿ ಕೇವಲ 43 ಜನರಲ್ಲಿದೆ ಚಿನ್ನದ ರಕ್ತ! 'Golden Blood' ಸಿಗುವುದು ಅಪರೂಪ ಯಾಕೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News