CBSE Class 12th Result 2024 OUT:  ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು CBSE 12 ನೇ ತರಗತಿಯ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ cbseresults.nic.in ಅಥವಾ cbse.gov.in ಮತ್ತು ಡಿಜಿಲಾಕರ್ ಸೇರಿದಂತೆ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ವೆಬ್‌ಸೈಟ್ - digilocker.gov.in ಮತ್ತು UMANG ಅಪ್ಲಿಕೇಶನ್‌ನಲ್ಲಿಯೂ  ಪರಿಶೀಲಿಸಬಹುದು. 


COMMERCIAL BREAK
SCROLL TO CONTINUE READING

ಕಳೆದ ಬಾರಿಗಿಂತ ಫಲಿತಾಂಶದಲ್ಲಿ ಹೆಚ್ಚಳ :


ಕಳೆದ ವರ್ಷ ಶೇ.87.33 ರಷ್ಟಿದ್ದ ಬೋರ್ಡ್ ಪರೀಕ್ಷೆಯಲ್ಲಿ ಈ ವರ್ಷ ಶೇ.87.98 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಅಂದರೆ ಕಳೆದ ವರ್ಷಕ್ಕಿಂತ 0.65ರಷ್ಟು ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ 12ನೇ ತರಗತಿ ಪರೀಕ್ಷೆಯಲ್ಲಿ ಬಾಲಕಿಯರದ್ದೇ ಮೇಲು ಗೈ. 


ಇದನ್ನೂ ಓದಿ : Loksabha Election 4 Phase : ಇಂದು 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 96 ಕ್ಷೇತ್ರಗಳಲ್ಲಿ ಮತದಾನ


ಈ ವರ್ಷ 16,33,730 ವಿದ್ಯಾರ್ಥಿಗಳು ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ 16,21,224 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 14,26,420 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 
ಕಳೆದ ವರ್ಷ, ಮಂಡಳಿಯು ಫೆಬ್ರವರಿ 14 ರಿಂದ ಮಾರ್ಚ್ 21 ರವರೆಗೆ 10 ನೇ ತರಗತಿ ಪರೀಕ್ಷೆಯನ್ನು ಮತ್ತು ಫೆಬ್ರವರಿ 14 ರಿಂದ ಏಪ್ರಿಲ್ 5 ರವರೆಗೆ 12 ನೇ ತರಗತಿ ಪರೀಕ್ಷೆಯನ್ನು ನಡೆಸಿತ್ತು. ಎರಡೂ ತರಗತಿಗಳ ಫಲಿತಾಂಶಗಳನ್ನು ಮೇ 12 ರಂದು ಪ್ರಕಟಿಸಲಾಗಿತ್ತು.  


CBSE ಫಲಿತಾಂಶವನ್ನು results.nic.in 2024 ರಲ್ಲಿ ಪರಿಶೀಲಿಸುವುದು ಹೇಗೆ? :
ಹಂತ 1: ಅಧಿಕೃತ CBSE ತರಗತಿ 12 ಫಲಿತಾಂಶದ ವೆಬ್‌ಸೈಟ್‌cbse.gov.in, cbseresults.nic.inಗೆ ಹೋಗಿ.
ಹಂತ 2: designated result link ಮೇಲೆ ಕ್ಲಿಕ್ ಮಾಡಿ
ಹಂತ 3: ರೋಲ್ ನಂಬರ್, ಶಾಲಾ ನಂಬರ್, ಪ್ರವೇಶ ಕಾರ್ಡ್ ID ಯನ್ನು  ನಮೂದಿಸಿ. 
ಹಂತ 4: ಇಷ್ಟಾದ ಮೇಲೆ ಸಬ್ಮಿಟ್ ಬಟನ್ ಪ್ರೆಸ್ ಮಾಡುವ ಮೂಲಕ  ಮಾರ್ಕ್ಸ್ ಶೀಟ್ ಡೌನ್ಲೋಡ್ ಮಾಡಿಕೊಳ್ಳಿ. 


CBSE 12ನೇ ತರಗತಿಯ ಫಲಿತಾಂಶ 2024 ಅನ್ನು SMS ಮೂಲಕ ಪರಿಶೀಲಿಸುವುದು ಹೇಗೆ ?: 


SMS ಕಳುಹಿಸುವ ಮೂಲಕವೂ CBSE 12 ನೇ ತರಗತಿಯ ಫಲಿತಾಂಶವನ್ನು ಪಡೆಯುವ ಅವಕಾಶವಿದೆ. SMS “cbse12 (ರೋಲ್ ಸಂಖ್ಯೆ) (ಹುಟ್ಟಿದ ದಿನಾಂಕ) (ಶಾಲಾ ಸಂಖ್ಯೆ) (ಕೇಂದ್ರ ಸಂಖ್ಯೆ)ಯನ್ನು 7738299899 ನಂಬರ್ ಗೆ ಕಳುಹಿಸಬೇಕು. 


ಜನ್ಮ ದಿನಾಂಕದ ಸ್ವರೂಪವು DDMMYYYY ಆಗಿರಬೇಕು. ಇಷ್ಟಾದ ಮೇಲೆ   ವಿಷಯವಾರು ಪಟ್ಟಿಯೊಂದಿಗೆ SMS ಮೂಲಕವೇ ಅಂಕವನ್ನು ಸ್ವೀಕರಿಸಬಹುದು.


CBSE ತರಗತಿ 12 ಫಲಿತಾಂಶ 2024: ಉತ್ತೀರ್ಣ ಮಾನದಂಡ : 
ವಿದ್ಯಾರ್ಥಿಗಳು ಕನಿಷ್ಠ 33 ಶೇಕಡಾ ಅಂಕಗಳನ್ನು ಪಡೆದುಕೊಳ್ಳಬೇಕು. ಈ ವರ್ಷ, CBSE ಯಿಂದ ಹೊಸದಾಗಿ ಪರಿಚಯಿಸಲಾದ ನಿಯಂತ್ರಣದ ಅಡಿಯಲ್ಲಿ, CBSE ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತೆ ಥಿಯರಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರು ಪ್ರಾಯೋಗಿಕ ಪರೀಕ್ಷೆಯಲ್ಲಿ ಮಾತ್ರ ಉತ್ತೀರ್ಣರಾಗಬೇಕಾಗುತ್ತದೆ.  ಅದನ್ನು ಶಾಲಾ ಹಂತದಲ್ಲಿಯೇ ನಡೆಸಲಾಗುವುದು.


ಇದನ್ನೂ ಓದಿ : ದೆಹಲಿಯ ಎರಡು ಸರ್ಕಾರಿ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆಯ ಮೇಲ್


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.