Big News: ನಿಗದಿತ ಸಮಯಕ್ಕೆ ನಡೆಯಲಿವೆ 10 ಮತ್ತು 12ನೆ ತರಗತಿಯ ಪರೀಕ್ಷೆಗಳು-CBSE
ಈ ಕುರಿತು ಹೇಳಿಕೆ ನೀಡಿರುವ CBSE ಮಂಡಳಿಯ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ, ನಿಗದಿತ ಕಾರ್ಯಕ್ರಮದಂತೆಯೇ 10ನೇ ಮತ್ತು 12ನೇ ತರಗತಿಗಾಗಿ ಪರೀಕ್ಷೆಗಳು ನಡೆಯಲಿದ್ದು, ಶೀಘ್ರದಲ್ಲಿಯೇ ವೇಳಾಪಟ್ಟಿ ಘೋಷಣೆ ಮಾಡಲಾಗುವುದು ಎಂದಿದ್ದಾರೆ.
CBSE Board Exams 2021: ಈ ವರ್ಷದ CBSE ಪರೀಕ್ಷೆಗಳು ನಿಗದಿತ ಸಮಯಕ್ಕೆ ನಡೆಯಲಿದ್ದು, ಪರೀಕ್ಷೆಗಳ ವೇಳಾಪಟ್ಟಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಮಂಡಳಿಯ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ಸ್ಪಷ್ಟಪಡಿಸಿದ್ದಾರೆ. ಕಳೆದ ಹಲವಾರು ದಿನಗಳಿಂದ ಈ ಕುರಿತಾದ ಊಹಾಪೋಹಗಳು ಕೇಳಿಬಂದಿದ್ದವು. ಇದುವರೆಗೆ ಮಂಡಳಿ ವೆಳಾಪಟ್ಟಿ ಬಿಡುಗಡೆ ಮಾಡದೆ ಇರುವದೆ ಇದಕ್ಕೆ ಕಾರಣ ಎನ್ನಲಾಗಿದೆ. ಆದರೆ, ಅನುರಾಗ್ ಅವರ ಹೇಳಿಕೆಯಿಂದ ಈ ಕುರಿತಾಗಿರುವ ವದಂತಿಗಳಿಗೆ ತೆರೆಬಿದ್ದಂತಾಗಿದೆ.
ಪರೀಕ್ಷಾ ವೇಳಾಪಟ್ಟಿ ಮಂಡಳಿಯ ಅಧಿಕೃತ ವೆಬ್ ಸೈಟ್ ಮೇಲೆ ನೋಡಬಹುದಾಗಿದೆ. ವಿದ್ಯಾರ್ಥಿಗಳು CBSE ಅಧಿಕೃತ ವೆಬ್ ಸೈಟ್ cbse.nic.inಗೆ ಭೇಟಿ ನೀಡಬಹುದಾಗಿದೆ. ಮಹಾಮಾರಿ ಹಾಗೂ ಎಲ್ಲ ಬದಲಾವಣೆಗಳ ಹೊರತಾಗಿಯೂ ಕೂಡ ಸಿಬಿಎಸ್ಇ ಮಂಡಳಿ 10ನೆ ಹಾಗೂ 12ನೆ ತರಗತಿಯೇ ಪರೀಕ್ಷೆಗಳು ಆಯೋಜನೆಗೊಳ್ಳಲಿವೆ.
ಇದನ್ನು ಓದಿ- CBSE ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ, ತಪ್ಪದೆ ಓದಿ
ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಅಸ್ಸೋಚಮ್ ಆಯೋಜಿಸಿದ್ದ ವೆಬ್‌ನಾರ್‌ನಲ್ಲಿ ಮಾತನಾಡಿದ ಸಿಬಿಎಸ್‌ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪರೀಕ್ಷೆಗಳು ನಡೆಯಲಿದ್ದು, ಅವರ ವೇಳಾಪಟ್ಟಿಯನ್ನು ಕೂಡ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದರು. ಪರೀಕ್ಷೆಗಳನ್ನು ಹೇಗೆ ನಡೆಸುವುದು ಎಂಬುದರ ಕುರಿತು ಸಿಬಿಎಸ್‌ಇ ವಿಚಾರ ವಿಮರ್ಶೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
ಆದರೆ ಪರೀಕ್ಷೆಗಳು ಮೊದಲಿನ ಸ್ವರೂಪದಲ್ಲಿ ನಡೆಯುತ್ತವೆಯೇ ಅಥವಾ ಇತರ ಸ್ವರೂಪಗಳಲ್ಲಿ ಪರೀಕ್ಷೆಗಳು ನಡೆಯುತ್ತವೆಯೇ ಎಂಬುದರ ಬಗ್ಗೆ ಅವರು ಏನನ್ನೂ ಹೇಳಿಲ್ಲ. ಮಾರ್ಚ್-ಏಪ್ರಿಲ್ನಲ್ಲಿ ಪ್ರತಿಯೊಬ್ಬರೂ ತರಗತಿಗಳನ್ನು ಹೇಗೆ ನಡೆಸುವುದು ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ಶಿಕ್ಷಕರು ಮತ್ತು ಶಾಲೆಗಳು ಅವಕಾಶ ಮತ್ತು ತುರ್ತು ದೃಷ್ಟಿಯಿಂದ ಕೆಲಸ ಮಾಡಿ ತಮ್ಮನ್ನು ಹೊಸ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಿ ಕೆಲವು ತಿಂಗಳುಗಳಲ್ಲಿ ಆನ್‌ಲೈನ್ ತರಗತಿಗಳನ್ನು ನಡೆಸಲು ಪ್ರಾರಂಭಿಸಿರುವುದು ಒಂದು ಶ್ಲಾಘನೀಯ ಸಂಗತಿ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- CBSE ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ, ತಪ್ಪದೆ ಓದಿ
ಕರೋನಾದಿಂದಾಗಿ ಮಾರ್ಚ್‌ನಿಂದ ಭೌತಿಕ ತರಗತಿಗಳನ್ನು ಮುಚ್ಚಲಾಗಿದೆ. ಬೋರ್ಡ್ ಪರೀಕ್ಷೆಗಳಲ್ಲಿ ಸಹ, ಅನೇಕ ರೀತಿಯ ಬದಲಾವಣೆಗಳನ್ನು ಮಾಡಲಾಗಿದೆ. ಮೊದಲ ಪರೀಕ್ಷೆಗಳನ್ನು ಮುಂದೂಡಲಾಯಿತು ಮತ್ತು ಹದಗೆಡುತ್ತಿರುವ ವಾತಾವರಣದಿಂದಾಗಿ ಅಂತಿಮವಾಗಿ ಕೆಲವು ವಿಷಯಗಳನ್ನು ರದ್ದುಗೊಳಿಸಬೇಕಾಯಿತು. ಈ ಕಾರಣಗಳಿಂದಾಗಿ, ಈ ಬಾರಿ ಬೋರ್ಡ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹಲವು ರೀತಿಯ ಅನುಮಾನಗಳು ಮೂಡಿದ್ದವು. ಇದು ಈ ಕುರಿತಾದ ವದಂತಿಗಳಿಗೆ ವಿರಾಮ ಸಿಕ್ಕಂತಾಗಿದೆ.