CBSE ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ, ತಪ್ಪದೆ ಓದಿ

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(CBSE) ಈ ಬಾರಿ ಅವಧಿಗೂ ಮುನ್ನವೇ 10ನೆ ಹಾಗೂ 12ನೆ ತರಗತಿಯ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆ ಇದೆ. NEET, JEEಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಜಿಸಲು ಮಂಡಳಿ ಈ ರೀತಿಯ ನಿರ್ಣಯ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.  

Last Updated : Nov 10, 2020, 12:20 PM IST
  • ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(CBSE) ಈ ಬಾರಿ ಅವಧಿಗೂ ಮುನ್ನವೇ 10ನೆ ಹಾಗೂ 12ನೆ ತರಗತಿಯ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆ ಇದೆ.
  • NEET, JEEಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಜಿಸಲು ಮಂಡಳಿ ಈ ರೀತಿಯ ನಿರ್ಣಯ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
  • ಆದರೆ, ಇದುವರೆಗೆ ಮಂಡಳಿಯ ವತಿಯಿಂದ ಈ ಕುರಿತು ಯಾವುದೇ ಅಧಿಕೃತ ಘೋಷಣೆಯನ್ನು ಮಾಡಲಾಗಿಲ್ಲ.
CBSE ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ, ತಪ್ಪದೆ ಓದಿ title=

ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(CBSE) ಈ ಬಾರಿ ಅವಧಿಗೂ ಮುನ್ನವೇ 10ನೆ ಹಾಗೂ 12ನೆ ತರಗತಿಯ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆ ಇದೆ.  NEET, JEEಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಜಿಸಲು ಮಂಡಳಿ ಈ ರೀತಿಯ ನಿರ್ಣಯ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಇದುವರೆಗೆ ಮಂಡಳಿಯ ವತಿಯಿಂದ ಈ ಕುರಿತು ಯಾವುದೇ ಅಧಿಕೃತ ಘೋಷಣೆಯನ್ನು ಮಾಡಲಾಗಿಲ್ಲ.

ಇದನ್ನು ಓದಿ- ಇನ್ನು ಮುಂದೆ ಸಿಟಿಇಟಿ ಪರೀಕ್ಷೆ 20 ಭಾಷೆಗಳಲ್ಲಿ ನಡೆಯಲಿದೆ- ಜಾವಡೆಕರ್

ಶಾಲೆಗಳಲ್ಲಿ ವೇಗವಾಗಿ ಪೂರ್ಣಗೊಳಿಸಲಾಗುತ್ತಿದೆ ಸಿಲೆಬಸ್
ವರದಿಗಳ ಪ್ರಕಾರ CBSE ವರ್ಷ 2021ರಲ್ಲಿ ಅವಧಿಗೂ ಮುನ್ನವೇ 10ನೆ ಹಾಗೂ 12ನೆ ತರಗತಿಯ ಪರೀಕ್ಷೆಗಳನ್ನು ಪ್ರಕ್ರಿಯೆಯನ್ನು ಆರಂಭಿಸಿದೆ ಎನ್ನಲಾಗಿದೆ. ಮಂಡಳಿಯ ವತಿಯಿಂದ ಪರೀಕ್ಷಾರ್ಥಿಗಳ ಲಿಸ್ಟ್ ಹಾಗೂ ಏಕ್ಸಾಮಿನೆಶನ್ ಫಾರ್ಮ್ ತುಂಬಿಸಿಕೊಳ್ಳುವ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ ಎನ್ನಲಾಗಿದೆ. CBSE ಯಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಕೋರ್ಸ್ ಅನ್ನು ಸಮಯವಿರುವಂತೆಯೇ ಪೂರ್ಣಗೊಳಿಸಲು ತಯಾರಿಗಳು ಆರಂಭಗೊಂಡಿವೆ. ಎಲ್ಲ ಶಿಕ್ಷಕರು ಮಂಡಳಿಯ ನಿರ್ದೇಶನದಂತೆ ತಮ್ಮ ತಮ್ಮ ವಿಷಯಗಳ ಸಿಲೆಬಸ್ ಅನ್ನು ಸಮಯ ಇರುವಂತೆಯೇ ಪೂರ್ಣಗೊಳಿಸುವ ಯತ್ನದಲ್ಲಿ ತೊಡಗಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬುದರ ಕುರಿತು ಹೆಚ್ಚಿನ ಗಮನ ಹರಿಸಿದ್ದಾರೆ ಎನ್ನಲಾಗಿದೆ.

ಕೊವಿಡ್ ಹಿನ್ನೆಲೆಯಲ್ಲಿ ಪರೀಕ್ಷೆಗಳಲ್ಲಿ ವಿಳಂಬ 
ಆದರೆ ಕೆಲ ವರದಿಗಳ ಪ್ರಕಾರ CBSE ಕೋರ್ಸ್ ಅನ್ನು ಚಿಕ್ಕದಾಗಿಸಲು ಪ್ರಯತ್ನಗಳು ನಡೆದಿದ್ದು, ಈ ಬಾರಿಯ ಪರೀಕ್ಷೆಗಳು 45 ರಿಂದ 60 ದಿನಗಳು ತಡವಾಗಿ ನಡೆಯುವ ಸಾಧ್ಯತೆಯನ್ನು ವರ್ತಿಸಿದ್ದವು. ಕೊರೊನಾ ವೈರಸ್ ಮಹಾಮಾರಿ ಬೋರ್ಡ್ ನ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿತ್ತು. ಇದಾದ ಬಳಿಕ ಬೋರ್ಡ್ ತನ್ನ ಸಿಲೆಬಸ್ ಆಕಾರವನ್ನು ತಗ್ಗಿಸಿತ್ತು. ಇದಕ್ಕೂ ಮೊದಲು ಮಂಡಳಿ ಕೊವಿಡ್ 19 ಹಿನ್ನೆಲೆ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ(CTET) ಯನ್ನು ರದ್ದುಗೊಳಿಸಿತ್ತು. ಆದರೆ, ಸದ್ಯ ಈ ಪರೀಕ್ಷೆಯ ದಿನಾಂಕಗಳು ನಿಗದಿಯಾಗಿವೆ. CBSE ಬೋರ್ಡ್ ವತಿಯಿಂದ ಆಯೋಜಿಸಲಾಗುವ ಈ ಪರೀಕ್ಷೆಗಳು ಜನವರಿ 31, 2021ಗೆ ನಡೆಯಲಿವೆ. ಇದಕ್ಕೂ ಮೊದಲು ಈ ಪರೀಕ್ಷೆಯನ್ನು ಜುಲೈ 2020ರಲ್ಲಿ ನಡೆಸಲು ನಿರ್ಧರಿಸಲಾಗಿತ್ತು.

ಇದನ್ನು ಓದಿ- ವಿದ್ಯಾರ್ಥಿಗಳಿಗಾಗಿ CBSE ಕೈಗೊಂಡಿದೆ ಈ ಮಹತ್ವದ ನಿರ್ಧಾರ

PTIನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ರಾಷ್ಟ್ರರಾಜಧಾನಿ ಹಾಗೂ ಅಕ್ಕಪಕ್ಕದ ಪ್ರದೇಶಗಳ ಎಲ್ಲ ಶಾಲೆಗಳು ಹಾಗೂ ಪ್ರಾಂಶುಪಾಲರು CBSE ಬೋರ್ಡ್ ಪರೀಕ್ಷೆಗಳನ್ನು ಮುಂದೂಡುವ ಪಕ್ಷದಲ್ಲಿ ಇಲ್ಲ ಎನ್ನಲಾಗಿದೆ. ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸುವುದು ಸರಿಯಾದ ಕ್ರಮವಲ್ಲ. ಇದರಿಂದ ಉಚ್ಛಶಿಕ್ಷಣದ ಪ್ರವೇಶ ಪರೀಕ್ಷೆಗಳು ಹಾಗೂ ಪ್ರವೇಶ ಪ್ರಕ್ರಿಯೆಯ ಮೇಲೆ ಪರಿಣಾಮ ಉಂಟಾಗಲಿದ್ದು, ವಿದ್ಯಾರ್ಥಿಗಳೂ ಕೂಡ ತೊಂದರೆ ಎದುರಿಸುವ ಸಾಧ್ಯತೆ ಇದೆ ಎಂದು ಪ್ರಾಂಶುಪಾಲರು ತಮ್ಮ ಅಭಿಮತ ವ್ಯಕ್ತಪಡಿಸಿದ್ದರು.

Trending News