ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಸಲ್ಲಿಸಿದ ಪರಿಷ್ಕೃತ ಮೌಲ್ಯಮಾಪನ ಯೋಜನೆ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ (ಜೂನ್ 26) ಅಂಗೀಕರಿಸಿದೆ. ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಕರಡು ಅಧಿಸೂಚನೆಯನ್ನು ಪರಿಶೀಲಿಸಿದ ನಂತರ ನಾವು ಸಿಬಿಎಸ್ಇ (CBSE) ಗೆ ಅಧಿಸೂಚನೆಯನ್ನು ಹೊರಡಿಸಲು ಅನುಮತಿ ನೀಡುತ್ತೇವೆ, ಜುಲೈ 1-15ರಂದು ನಿಗದಿಯಾಗಿದ್ದ ಸಿಬಿಎಸ್ಇಯ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಈ ಆದೇಶದಿಂದ ನಿಯಂತ್ರಿಸಲಾಗುತ್ತದೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಈಗಾಗಲೇ ನಡೆಸಿದ ಪರೀಕ್ಷೆಗಳು ಮತ್ತು ಆಂತರಿಕ ಮೌಲ್ಯಮಾಪನ ಕಾರ್ಯಕ್ಷಮತೆಯ ಆಧಾರದ ಮೇಲೆ ಬಾಕಿ ಇರುವ ವಿಷಯಗಳಿಗೆ ಮಂಡಳಿಯು ಫಲಿತಾಂಶವನ್ನು ಸಿದ್ಧಪಡಿಸುತ್ತದೆ. ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಜುಲೈ 15 ರೊಳಗೆ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.


ಸಿಬಿಎಸ್‌ಇ ಮತ್ತು ಐಸಿಎಸ್‌ಇ (ICSE) ಯ 10 ನೇ ತರಗತಿ ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶವನ್ನು ಜುಲೈ ಮಧ್ಯದೊಳಗೆ ಘೋಷಿಸಬಹುದು ಎಂದು ಉನ್ನತ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ.


ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ (Coronavirus) ಪ್ರಕರಣಗಳ ದೃಷ್ಟಿಯಿಂದ ಜುಲೈ 1-15 ರಿಂದ ನಿಗದಿಯಾದ 12 ನೇ ತರಗತಿಯ ಉಳಿದ ಪರೀಕ್ಷೆಗಳನ್ನು ರದ್ದುಗೊಳಿಸುವುದು ಸೇರಿದಂತೆ ಪರಿಹಾರ ಕೋರಿ ಮೇಲ್ಮನವಿ ಮೇಲ್ಮನವಿ ವಿಚಾರಣೆ ನಡೆಸಿತು. ಐಸಿಎಸ್‌ಇ ಮಂಡಳಿಯೂ ಇದೇ ರೀತಿಯ ಪರಿಹಾರವನ್ನು ಕೋರಿತು.


ಕೋವಿಡ್-19 (COVID-19) ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಬಾಕಿ ಉಳಿದಿದ್ದ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಎಂದು ಪರೀಕ್ಷಾ ನಿಯಂತ್ರಕ ಸನ್ಯಂ ಭರದ್ವಾಜ್ ತಿಳಿಸಿದ್ದಾರೆ. ಪರ್ಯಾಯ ಮೌಲ್ಯಮಾಪನ ಯೋಜನೆಯ ನಂತರ ಫಲಿತಾಂಶಗಳನ್ನು ಈಗ ಘೋಷಿಸಲಾಗುವುದು. 12 ನೇ ತರಗತಿಯ ವಿದ್ಯಾರ್ಥಿಗಳು ನಂತರ ತಮ್ಮ ಸ್ಕೋರ್ ಸುಧಾರಿಸಲು ಪರೀಕ್ಷೆಗಳಿಗೆ ಹಾಜರಾಗಲು ಆಯ್ಕೆಯನ್ನು ಪಡೆಯುತ್ತಾರೆ. ಆದಾಗ್ಯೂ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ, ಪರೀಕ್ಷೆಗಳಲ್ಲಿ ಅವರ ಅಂಕಗಳನ್ನು ಪರಿಗಣಿಸಲಾಗುತ್ತದೆ. ಅದು ಅವರ ಅಂತಿಮ ಸ್ಕೋರ್ ಆಗಿರುತ್ತದೆ ಎಂದು ಭರದ್ವಾಜ್ ಹೇಳಿದರು.


COVID-19 ಹಿನ್ನೆಲೆಯಲ್ಲಿ CBSEಯ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳು ರದ್ದು


10 ನೇ ತರಗತಿ ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ಪರೀಕ್ಷೆಗೆ ಹಾಜರಾಗಲು ಅವಕಾಶ ಸಿಗುವುದಿಲ್ಲ. ಮಂಡಳಿಯು ಘೋಷಿಸಿದ ಫಲಿತಾಂಶವನ್ನು ಅಂತಿಮವೆಂದು ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದರು.


ಸಿಬಿಎಸ್‌ಇ ಮಂಡಳಿಯ 12 ನೇ ತರಗತಿಯ ವಿದ್ಯಾರ್ಥಿಗಳು ನಂತರ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅಥವಾ ಕೊನೆಯ ಮೂರು ಆಂತರಿಕ ಪರೀಕ್ಷೆಗಳಲ್ಲಿ ಅವರ ಸಾಧನೆಯ ಆಧಾರದ ಮೇಲೆ ಮೌಲ್ಯಮಾಪನದೊಂದಿಗೆ ಮುಂದುವರಿಯುವ ಆಯ್ಕೆಯನ್ನು ಹೊಂದಿರುತ್ತಾರೆ. ಮರು ಪರೀಕ್ಷೆಯ ಆಯ್ಕೆ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಲಭ್ಯವಿರುವುದಿಲ್ಲ. ಮರು ಪರೀಕ್ಷೆಯ ಆಯ್ಕೆಯು ಐಸಿಎಸ್ಇ ಮಂಡಳಿಯ  12 ನೇ ತರಗತಿ ಅಥವಾ 10 ನೇ ತರಗತಿ ವಿದ್ಯಾರ್ಥಿಗಳಿಗೆ ಲಭ್ಯವಿರುವುದಿಲ್ಲ.


ಡಿಗ್ರಿ, ಪಿ.ಜಿ. ಅಂತಿಮ ವರ್ಷದ ಪರೀಕ್ಷೆ ರದ್ದಾಗುವ ಸಾಧ್ಯತೆ


ಸಿಬಿಎಸ್‌ಇ ಪರೀಕ್ಷೆಗಳ ಕುರಿತು ಸರ್ಕಾರದ ನಿರ್ಧಾರವನ್ನುಪಾಲಿಸುವುದಾಗಿ ಐಸಿಎಸ್‌ಇ ಮಂಡಳಿ ಈ ಹಿಂದೆ ತಿಳಿಸಿತ್ತು.


ಸಿಬಿಎಸ್‌ಇ ಹನ್ನೆರಡನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 15 ರಂದು ಪ್ರಾರಂಭವಾಗಿದ್ದವು ಮತ್ತು ಏಪ್ರಿಲ್ 3 ರಂದು ಮುಕ್ತಾಯಗೊಳ್ಳಬೇಕಿತ್ತು. ಹತ್ತನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 21 ರಂದು ಪ್ರಾರಂಭವಾಗಿದ್ದವು ಮತ್ತು ಮಾರ್ಚ್ 29 ರಂದು ಕೊನೆಗೊಳ್ಳಬೇಕಿತ್ತು. ಆದಾಗ್ಯೂ ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 25 ರಿಂದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಯಿತು.