CBSE Launches DADS Portal: CBSE ವಿದ್ಯಾರ್ಥಿಗಳಿಗೊಂದು ನೆಮ್ಮದಿಯ ಸುದ್ದಿ, DADS Portal ಬಿಡುಗಡೆಗೊಳಿಸಿದ CBSE
CBSE Launches DADS Portal - ಒಂದು ವೇಳೆ ವಿದ್ಯಾರ್ಥಿಯ ಮಾರ್ಕ್ ಶೀಟ್ ಕಳೆದು ಹೋಗಿದ್ದರೆ ಅಥವಾ ಹರಿದು ಹೋಗಿದ್ದರೆ, ಆ ವಿದ್ಯಾರ್ಥಿ ಇನ್-ಹೌಸ್ ಪೋರ್ಟಲ್ ಆಗಿರುವ ದಿ ನ್ಯೂ ಡೂಪ್ಲಿಕೇಟ್ ಅಕಾಡೆಮಿಕ್ ಡಾಕ್ಯುಮೆಂಟ್ ಸಿಸ್ಟಂ (DADS) ಸಹಾಯದಿಂದ ಡೂಪ್ಲಿಕೇಟ್ ಕಾಪಿ (Duplicate Academic Documents) ಪಡೆಯಬಹುದಾಗಿದೆ.
ನವದೆಹಲಿ: CBSE Launches DADS Portal - CBSE ವಿದ್ಯಾರ್ಥಿಗಳು ಇದೀಗ ತಮ್ಮ ನಕಲಿ ಮಾರ್ಕ್ ಶೀಟ್, ಮೈಗ್ರೇಶನ್ ಸರ್ಟಿಫಿಕೇಟ್ (Duplicate Migration Certificate) ಗಳಂತಹ ಶೈಕ್ಷಣಿಕ ದಾಖಲೆಗಳನ್ನು ಇನ್-ಹೌಸ್ ಪೋರ್ಟಲ್ ಆಗಿರುವ 'DADS' ಮೂಲಕ ಪಡೆದುಕೊಳ್ಳಬಹುದು. ಇಂತಹ ದಾಖಲೆಗಳನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಇನ್ಮುಂದೆ ಕ್ಷೇತ್ರೀಯ ಕಾರ್ಯಾಲಯಗಳಿಗೆ ಅರ್ಜಿಸಲ್ಲಿಸಬೇಕಾದ ಅವಶ್ಯಕತೆ ಇಲ್ಲ ಹಾಗೂ ಅದಕ್ಕಾಗಿ ಯಾವುದೇ ರೀತಿಯ ಡಿಮಾಂಡ್ ಡ್ರಾಫ್ಟ್ ಕಳುಹಿಸಬೇಕಾಗಿಲ್ಲ. ಒಂದು ವೇಳೆ ಯಾವುದೇ ವಿದ್ಯಾರ್ಥಿಯ ಮಾರ್ಕ್ ಶೀಟ್ (Duplicate Mark Sheet) ಹರಿದುಹೋಗಿದ್ದರೆ, ಅಥವಾ ಕಳೆದು ಹೋಗಿದ್ದರೆ, ಅಂತಹ ವಿದ್ಯಾರ್ಥಿ ಇನ್-ಹೌಸ್ ಪೋರ್ಟಲ್ ಆಗಿರುವ ದಿ ನ್ಯೂ ಡೂಪ್ಲಿಕೇಟ್ ಅಕಾಡೆಮಿಕ್ ಡಾಕ್ಯುಮೆಂಟ್ ಸಿಸ್ಟಂ (The New Duplicate Academic Document System) ಸಹಾಯದಿಂದ ಮಾರ್ಕ್ ಶೀಟ್ ಹಾಗೂ ಇತರೆ ಶೈಕ್ಷಣಿಕ ದಾಖಲೆಗಳ ಡೂಪ್ಲಿಕೇಟ್ ಕಾಪಿ ಪಡೆದುಕೊಳ್ಳಬಹುದು.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ CBSE, ಕೊವಿಡ್ 19 ಕಾರಣದಿಂದ ಎದುರಾಗುತ್ತಿರುವ ತೊಂದರೆಗಳ ಹಿನ್ನೆಲೆ, ವಿದ್ಯಾರ್ಥಿಗಳಿಗೆ DADS ಮೂಲಕ ಸೌಕರ್ಯಗಳನ್ನು ಒದಗಿಸುವ ಪ್ರಯತ್ನ ಇದಾಗಿದೆ ಎಂದಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪೋಸ್ಟ್ ಮೂಲಕ ದಾಖಲೆಗಳನ್ನು ಒದಗಿಸುವುದು ಹಾಗೂ ಅರ್ಜಿ ಸಲ್ಲಿಸುವಲ್ಲಿ ತೊಂದರೆ ಎದುರಾಗುತ್ತಿದೆ. ಹೀಗಾಗಿ ಇನ್ಮುಂದೆ ವಿದ್ಯಾರ್ಥಿಗಳು ಈ ದಾಖಲೆಗಳಿಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಶೈಕ್ಷಣಿಕ ದಾಖಲೆಗಳಿಗಾಗಿ ಹೀಗೆ ಅರ್ಜಿ ಸಲ್ಲಿಸಿ
>> https://cbseit.in/cbse/web/dads/home.aspx ಮೊಲಕ ಲಾಗಿನ್ ಆಗಿ.
>>ಅಲ್ಲಿ ನಿಮಗೆ ಒಟ್ಟು ನಾಲ್ಕು ಟ್ಯಾಬ್ ಗಳು ಸಿಗಲಿವೆ - Digital Document, Printed Document, Track Application ಹಾಗೂ Fee Circular.
ಇದನ್ನೂ ಓದಿ- Fact Check: ಜುಲೈ ತಿಂಗಳಿನಿಂದ DA-DR ಸಿಗಲಿದೆ! ಸರ್ಕಾರಿ ನೌಕರರು ಓದಲೇ ಬೇಕಾದ ಸುದ್ದಿ ಇದು
2017 ಅಥವಾ ಅದರ ನಂತರ ನಡೆದ CBSE ಪರೀಕ್ಷೆಗಳ ಡಿಜಿಟಲ್ ಸರ್ಟಿಫಿಕೆಟ್ ಡಿಜಿಲಾಕರ್ ನಲ್ಲಿ ಸಿಗಲಿದೆ. ವಿದ್ಯಾರ್ಥಿಗಳು ಈ ಆಪ್ ನಲ್ಲಿ ಲಾಗಿನ್ ಆಗುವ ಮೂಲಕ ತಮ್ಮ ಸರ್ಟಿಫಿಕೇಟ್ ಅನ್ನು ಪಡೆದುಕೊಳ್ಳಬಹುದು. 2016 ರಲ್ಲಿ ಅಥವಾ ಅದಕ್ಕಿಂತ ಮೊದಲು ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಸೆಶನ್, ಕ್ಲಾಸ್ ಹಾಗೂ ಅಡ್ಮಿಟ್ ಕಾರ್ಡ್ ನಲ್ಲಿರುವ ರೋಲ್ ನಂಬರ್, ಸ್ಕೂಲ್ ಕೋಡ್, ಇ-ಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಅನ್ನು ನಮೂದಿಸಿ ತಮ್ಮ ದಾಖಲೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಓರ್ವ ವಿದ್ಯಾರ್ಥಿಯಿಂದ ರೂ.100 ಶುಲ್ಕ ಪಡೆದುಕೊಳ್ಳಲಾಗುವುದು. ಸ್ಪೀಡ್ ಪೋಸ್ಟ್ ಮೂಲಕ ಈ ದಾಖಲೆಗಳನ್ನು ತರಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಈ ಶುಲ್ಕ ಪಾವತಿಸಬೇಕು. ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿದವರು ಅಪ್ಲಿಕೇಶನ್ ಪ್ರೋಸೆಸ್ ಹಾಗೂ ಡಿಸ್ಪ್ಯಾಚ್ ವಿವರಗಳನ್ನು ಲೈವ್ ಸ್ಟೇಟಸ್ ನಲ್ಲಿ ನೋಡಬಹುದು.
ಇದನ್ನೂ ಓದಿ-Delta Plus Variant ತಡೆಗಟ್ಟಲು ತಕ್ಷಣ ಕ್ರಮಕೈಗೊಳ್ಳಿ, ಕರ್ನಾಟಕಕ್ಕೆ ಕೇಂದ್ರ ಸೂಚನೆ
ವಿದ್ಯಾರ್ಥಿಗಳು ತಮ್ಮ ದಾಖಲೆಗಳ ಡಿಜಿಟಲ್ ಕಾಪಿ ಜೊತೆಗೆ ಪ್ರಿಂಟೆಡ್ ಕಾಪಿ ಕೂಡ ಪಡೆದುಕೊಳ್ಳಬಹುದು. ಐದು ವರ್ಷಗಳವರೆಗಿನ ದಾಖಲೆಗಳಿಗೆ 250 ರೂ. ಶುಲ್ಕ ಪಾವತಿಸಬೇಕು. ಐದರಿಂದ ಹತ್ತು ವರ್ಷಗಳವರೆಗಿನ ದಾಖಲೆಗಳಿಗೆ ರೂ.500 ಹಾಗೂ ಹತ್ತು ವರ್ಷಗಳಿಗಿಂತ ಮೇಲ್ಪಟ್ಟ ಅವಧಿಯ ದಾಖಲೆಗಳ ಕಾಪಿಗಳಿಗಾಗಿ ರೂ.1000 ಶುಲ್ಕ ಪಾವತಿಸಬೇಕು.
ಇದನ್ನೂ ಓದಿ-'ಮೋದಿ ಜಾಗದಲ್ಲಿ ಬೇರೆ ಯಾರಿದ್ದರೂ ಕೂಡ ಭಾರತದ ಜೊತೆಗೆ ಸಂಬಂಧ ಸರಿಯಾಗಿರುತ್ತಿತ್ತು'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.