Imran Khan On Modi Government: 'ಮೋದಿ ಜಾಗದಲ್ಲಿ ಬೇರೆ ಯಾರಿದ್ದರೂ ಕೂಡ ಭಾರತದ ಜೊತೆಗೆ ಸಂಬಂಧ ಸರಿಯಾಗಿರುತ್ತಿತ್ತು'

Imran Khan On Modi Government - ಭಾರತದಲ್ಲಿ ನರೇಂದ್ರ ಮೋದಿಯವರ ಜಾಗದಲ್ಲಿ ಬೇರೊಬ್ಬರು ಇದ್ದಿದ್ದರೆ ಬಹುಶಃ ನಮ್ಮ ಸಂಬಂಧಗಳು ಉತ್ತಮವಾಗುತ್ತಿದ್ದವು ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ. ಇಮ್ರಾನ್ ಖಾನ್ ಇತ್ತೀಚೆಗಷ್ಟೇ 'ದಿ ನ್ಯೂಯಾರ್ಕ್ ಟೈಮ್ಸ್' (New York Times)ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. 

Written by - Nitin Tabib | Last Updated : Jun 26, 2021, 07:59 PM IST
  • ಮೋದಿ ಇಲ್ದಿದ್ರೆ ಭಾರತದ ಜೊತೆಗೆ ಸಂಬಂಧ ಸರಿಯಾಗಿರುತ್ತಿತ್ತು.
  • ನ್ಯೂಯಾರ್ಕ್ ಟೈಮ್ಸ್ ಸಂದರ್ಶನದಲ್ಲಿ ಇಮ್ರಾನ್ ಹೇಳಿದ್ದೇನು?
  • ಪಾಕಿಸ್ತಾನ ವಾಶಿಂಗ್ಟನ್ ಜೊತೆಗೆ ಬ್ರಿಟನ್, ಭಾರತದಂತೆ ನ್ಯಾಯಸಮ್ಮತ ಸಂಬಂಧ ಬಯಸುತ್ತದೆ ಎಂದ ಇಮ್ರಾನ್.
Imran Khan On Modi Government: 'ಮೋದಿ ಜಾಗದಲ್ಲಿ ಬೇರೆ ಯಾರಿದ್ದರೂ ಕೂಡ ಭಾರತದ ಜೊತೆಗೆ ಸಂಬಂಧ ಸರಿಯಾಗಿರುತ್ತಿತ್ತು' title=
Imran Khan On Modi Government (File Photo)

ನವದೆಹಲಿ: Imran Khan On Modi Government - ಭಾರತದಲ್ಲಿ ನರೇಂದ್ರ ಮೋದಿಯವರ (Narendra Modi) ಜಾಗದಲ್ಲಿ ಬೇರೊಬ್ಬರು ಇದ್ದಿದ್ದರೆ ಬಹುಶಃ ನಮ್ಮ ಸಂಬಂಧಗಳು (India-Pakistan Relations) ಉತ್ತಮವಾಗುತ್ತಿದ್ದವು ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ (Imran Khan) ಹೇಳಿದ್ದಾರೆ. ಇಮ್ರಾನ್ ಖಾನ್ ಇತ್ತೀಚೆಗಷ್ಟೇ 'ದಿ ನ್ಯೂಯಾರ್ಕ್ ಟೈಮ್ಸ್' ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. 'ಇದು ಆರ್‌ಎಸ್‌ಎಸ್‌ನ ವಿಚಿತ್ರ ಚಿಂತನೆ ಎಂದು ನಾನು ಭಾವಿಸುತ್ತೇನೆ ಮತ್ತು ಅದು ನರೇಂದ್ರ ಮೋದಿಯವರ ಜೊತೆಗೆ ನೇರ ಸಂಬಂಧಿಸಿದೆ. ನರೇಂದ್ರ ಮೋದಿಯವರ ಸ್ಥಾನದಲ್ಲಿ ಭಾರತವು ಇತರ ನಾಯಕರನ್ನು ಹೊಂದಿದ್ದರೆ, ಪಾಕಿಸ್ತಾನವು (Pakistan)ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಬಹುದಿತ್ತು ಮತ್ತು ಹೌದು, ನಾವು ನಮ್ಮ ಎಲ್ಲಾ ವಿಭಿನ್ನ ಸಮಸ್ಯೆಗಳನ್ನು ಪರಿಹರಿಸಬಹುದಿತ್ತು' ಎಂದು ಇಮ್ರಾನ್ ಹೇಳಿದ್ದಾರೆ.

ಈ ಸಂದರ್ಶನದ ವೇಳೆ 'ಒಂದು ವೇಳೆ ನರೇಂದ್ರ ಮೋದಿ ಸರ್ಕಾರ (PM Narendra Modi Government) ಅಧಿಕಾರವನ್ನು ತೊರೆದರೆ ಭಾರತ-ಪಾಕ್ ಸಂಬಂಧಗಳು ಸುಧಾರಣೆಯಾಗಲಿವೆಯೇ?' ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಇಮ್ರಾನ್ ಖಾನ್, 'ನಾನು ಇತರ ಯಾವುದೇ ಪಾಕಿಸ್ತಾನಿ ಹೋಲಿಕೆಯಲ್ಲಿ ಭಾರತವನ್ನು (India) ಚೆನ್ನಾಗಿ ಅರಿತಿರುವೆ. ಎರಡು ದೇಶಗಳು ಒಟ್ಟಿಗೆ ಕ್ರಿಕೆಟ್ ಆಟ ಆಡುತ್ತವೆ. ಇದೆ ಕಾರಣದಿಂದ ನನಗೆ ಭಾರತದ ಪ್ರತಿ ಗೌರವ ಹಾಗೂ ಪ್ರೀತಿ ಇದೆ. ಹೀಗಾಗಿ ಇದರ ಯಾವುದೇ ವ್ಯಕ್ತಿಯ ಹೋಲಿಕೆಯಲ್ಲಿ ಭಾರತವನ್ನು ಹೆಚ್ಚಾಗಿ ಗೌರವಿಸುತ್ತೇನೆ ಹಾಗೂ ಪ್ರೀತಿಸುತ್ತೇನೆ. ಏಕೆಂದರೆ ಕ್ರಿಕೆಟ್ ಒಂದು ದೊಡ್ಡ ಆಟವಾಗಿದೆ ಮತ್ತು ಇದು ಎರಡು ದೇಶಗಳಲ್ಲಿ ಒಂದು ಧರ್ಮದಂತಿದೆ' ಎಂದಿದ್ದಾರೆ.

ಇದನ್ನೂ ಓದಿ- Big Blow To Pakistan: ಮತ್ತೊಮ್ಮೆ FATF ಬೂದು ಪಟ್ಟಿಯಲ್ಲಿಯೇ ಉಳಿದ ಪಾಕಿಸ್ತಾನ

'ಹಾಗಾಗಿ ನಾನು ಪಾಕಿಸ್ತಾನದ ಪ್ರಧಾನ ಮಂತ್ರಿ ಕಚೇರಿಗೆ ಸೇರಿದಾಗ, ನಾನು ಅಧಿಕಾರಕ್ಕೆ ಬಂದ ಮೊದಲ ಮತ್ತು ಪ್ರಮುಖ ಕಾರಣವೆಂದರೆ ನಾನು ಪಾಕಿಸ್ತಾನದಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು ಬಯಸುತ್ತೇನೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ವ್ಯಾಪಾರವನ್ನು ಸರಿಯಾಗಿ ನಡೆಸುವುದು ಇದಕ್ಕೆ ಉತ್ತಮ ಮಾರ್ಗವಾಗಿದೆ ಮತ್ತು ಇದರಿಂದ ಎರಡೂ ದೇಶಗಳಿಗೆ ಲಾಭವಾಗಲಿದೆ ಎಂದು ನಾನು ಮೊದಲು ಪ್ರಧಾನಿ ಮೋದಿ ಅವರಿಗೆ ಹೇಳಿದ್ದೆ' ಎಂದು ಇಮ್ರಾನ್ ಹೇಳಿದ್ದಾರೆ.

ಇದನ್ನೂ ಓದಿ-Nuclear Plant Leakage Alert! ಮತ್ತೆ ಸಂಚು ರೂಪಿಸುತ್ತಿದೆಯೇ China? Corona ಬಳಿಕ ಇದೀಗ Nuclear Disaster ಅಪಾಯ!

ಯುದ್ಧದಿಂದ ಹಾನಿಗೊಳಗಾದ ಅಫ್ಘಾನಿಸ್ತಾನವನ್ನು ಅಮೇರಿಕಾ ತೊರೆದ ನಂತರ ಪಾಕಿಸ್ತಾನವು ಅಲ್ಲಿ ಮತ್ತು ಈ ಪ್ರದೇಶದಲ್ಲಿ ವಹಿಸಬಹುದಾದ ಪಾತ್ರವನ್ನು ಒತ್ತಿ ಹೇಳಿರುವ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನ ವಾಷಿಂಗ್ಟನ್ ಜೊತೆಗೆ ಭಾರತ ಹಾಗೂ ಬ್ರಿಟನ್ ಜತೆಗೆ ಅಮೇರಿಕಾ  ಹೊಂದಿರುವ ನ್ಯಾಯಸಮ್ಮತವಾದ ಸಂಬಂಧವನ್ನು ಬಯಸುತ್ತದೆ ಎಂದು ಹೇಳಿದ್ದಾರೆ. ಆದರೆ, ಇಮ್ರಾನ್ ಅವರ ಈ ಹೇಳಿಕೆಯಿಂದ ಚೀನಾಗೆ ಭಾರಿ ಆಘಾತ ಉಂಟಾಗುವ ಸಾಧ್ಯತೆ ಇದೆ. ಏಕೆಂದರೆ, ಪ್ರಸ್ತುತ ಸಂದರ್ಭದಲ್ಲಿ ಚೀನಾ ಹಾಗೂ ಅಮೇರಿಕಾ ರಾಷ್ಟ್ರಗಳ ನಡುವೆ ಸಂಬಂಧಗಳು ಅಷ್ಟೊಂದು ಸರಿಯಾಗಿಲ್ಲ.

ಇದನ್ನೂ ಓದಿ-Research On Covid-19: ಕೊರೊನಾ ವೈರಸ್ ಹೊಸದಲ್ವಂತೆ ! ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News