ನವದೆಹಲಿ : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಶುಕ್ರವಾರ 10 ಮತ್ತು 12 ನೇ ಬೋರ್ಡ್ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಿದೆ.  ಸಿಬಿಎಸ್‌ಇ 10 ಮತ್ತು 12 ನೇ ತರಗತಿಗಳ ಪರೀಕ್ಷೆಯನ್ನು  ಮೇ 4 ರಿಂದ ಜೂನ್ 14 ರವರೆಗೆ ನಡೆಸಲು ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಇದರ ಮಾಹಿತಿಯನ್ನು  cbse.nic.in ನ ಅಧಿಕೃತ websiteನಲ್ಲಿ ನೀಡಲಾಗಿದೆ. ಹಳೆಯ ಡೇಟ್‌ಶೀಟ್ ಬದಲು ವಿದ್ಯಾರ್ಥಿಗಳು ಪರಿಷ್ಕೃತ ಡೇಟ್‌ಶೀಟ್ ನ ಪ್ರಕಾರ ಪರೀಕ್ಷೆಗೆ ತಯಾರಿ ನಡೆಸುವಂತೆ ಸೂಚಿಸಲಾಗಿದೆ.


ಇದನ್ನೂ ಓದಿ : Indian Railways: ದುಬಾರಿಯಾದ ರೈಲ್ವೆ ಪ್ಲಾಟ್ ಫಾರಂ ಶುಲ್ಕ...!


ಮಂಡಳಿಯ ಪರಿಷ್ಕೃತ ದಿನಾಂಕಗಳಲ್ಲಿ (Revised Date Sheet) ಹಲವು ಬದಲಾವಣೆಗಳನ್ನು ಪ್ರಕಟಿಸಿದೆ.  ಈ ಬದಲಾವಣೆಯ ಅನ್ವಯ ಜಿಯೋಗ್ರಾಫಿ ವಿಷಯದ ಪರೀಕ್ಷೆಯು ಜೂನ್ 3 ರಂದು ನಡೆಯಲಿದೆ.  ಮತ್ತು Physics ಮೇ 13ರ ಬದಲು ಜೂನ್ 8 ರಂದು ನಡೆಯಲಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಮೇ 13 ಮತ್ತು 14 ರಂದು 12 ನೇ ತರಗತಿಗೆ ಯಾವುದೇ ಪರೀಕ್ಷೆಗಳು ಇರುವುದಿಲ್ಲ.  


10 ನೇ ತರಗತಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ  ಸ್ವಲ್ಪ ಬದಲಾವಣೆಯಾಗಿದೆ. ಮಂಡಳಿಯ ಹೊಸ ಡೇಟ್‌ಶೀಟ್ ಪ್ರಕಾರ, ವಿಜ್ಞಾನ (Science) ಪರೀಕ್ಷೆಯು ಮೆ 21ರಂದು ನಡೆಯಲಿದೆ, ಮತ್ತು ಗಣಿತ (Mathes) ಪರೀಕ್ಷೆಯು ಜೂನ್ 2 ರಂದು ನಡೆಯಲಿದೆ.


ಇದನ್ನೂ ಓದಿ : EPF ಗ್ರಾಹಕರಿಗೆ ಶುಭ ಸುದ್ದಿ: EPF 'ಬಡ್ಡಿದರ ಶೇ.8.5'ರಷ್ಟು ಮುಂದುವರಿಕೆ!


12 ನೇ ತರಗತಿಯ ಪರೀಕ್ಷೆಯನ್ನು ಎರಡು ಪಾಳಿಯಲ್ಲಿ ನಡೆಸಲಾಗುವುದು :
ಸಿಬಿಎಸ್‌ಇ ಬಿಡುಗಡೆ ಮಾಡಿದ ಹೊಸ ಡೇಟ್‌ಶೀಟ್‌ನ (Date sheet)ಪ್ರಕಾರ, 12 ನೇ ತರಗತಿಯ ಪರೀಕ್ಷೆಯನ್ನು ಎರಡು ಪಾಳಿಯಲ್ಲಿ 4 ದಿನಗಳವರೆಗೆ ನಡೆಸಲಾಗುವುದು. ಮೊದಲ ಪಾಲಿ  ಬೆಳಿಗ್ಗೆ 10.30 ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1.30 ರವರೆಗೆ ಮುಂದುವರಿಯಲಿದೆ. ಎಲ್ಲಾ ಅಭ್ಯರ್ಥಿಗಳಿಗೆ ಬೆಳಿಗ್ಗೆ 10-10.15 ರ ನಡುವೆ ಬುಕ್ ಲೆಟ್ ನೀಡಲಾಗುವುದು.  ಎರಡನೇ ಶಿಫ್ಟ್ ನ ಪರೀಕ್ಷೆಯು ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ ಪ್ರಾರಂಭವಾಗುತ್ತದೆ. ಈ ಶಿಫ್ಟ್‌ನ ಅಭ್ಯರ್ಥಿಗಳಿಗೆ ಮಧ್ಯಾಹ್ನ 2-2.15 ರ ನಡುವೆ ಬುಕ್ ಲೆಟ್ ನೀಡಲಾಗುವುದು.


10 ನೇ ತರಗತಿಯ ವಿದ್ಯಾರ್ಥಿಗಳಿಗೆ ಜೂನ್ 7 ರಂದು ಕೊನೆಗೊಳ್ಳುತ್ತವೆ.  12 ನೇ ತರಗತಿ ಪರೀಕ್ಷೆಯು ಜೂನ್ 11 ರವರೆಗೆ ನಡೆಯಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.