ನವದೆಹಲಿ: CBSE Latest News -  10 ಮತ್ತು 12 ನೇ CBSE ಪರೀಕ್ಷೆಗೆ ಮಂಡಳಿಯ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಬೋರ್ಡ್ ಪರೀಕ್ಷೆಗಳ ಮೊದಲ ಹಂತದ ಪರೀಕ್ಷೆಗಳು ಈ ತಿಂಗಳ 16 ಮತ್ತು 17 ರಿಂದ ಆರಂಭಗೊಳ್ಳಲಿವೆ. 12 ನೇ ತರಗತಿಯ ಪರೀಕ್ಷೆಗಳು, 16 ಮತ್ತು 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ನವೆಂಬರ್ 17 ರಿಂದ ಪ್ರಾರಂಭವಾವಾಗಲಿವೆ. ಮಂಡಳಿಯು ಈ ಬಾರಿಯ ಪರೀಕ್ಷೆಯ ಮಾದರಿಯನ್ನೂ ಸಹ ಬದಲಾಯಿಸಿದೆ.


COMMERCIAL BREAK
SCROLL TO CONTINUE READING

ಪರೀಕ್ಷೆಯು MCQ ಮಾದರಿಯಲ್ಲಿರುತ್ತದೆ
CBSE ತನ್ನ ಪರೀಕ್ಷಾ ನೀತಿಯನ್ನು ಬದಲಾಯಿಸಿದೆ. ಇದರ ಅಡಿಯಲ್ಲಿ, ಇದೀಗ ಸಿಬಿಎಸ್‌ಇ ಬೋರ್ಡ್ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ದೇಶಾದ್ಯಂತ ಎರಡು ಬಾರಿ ನಡೆಸಲಾಗುತ್ತಿದೆ.  ಮುಂದಿನ ವರ್ಷದ ಮಾರ್ಚ್-ಏಪ್ರಿಲ್‌ನಲ್ಲಿ ಎರಡನೇ ಹಂತದ ಬೋರ್ಡ್ ಪರೀಕ್ಷೆಗಳು ಪೂರ್ಣಗೊಳ್ಳಲಿವೆ. CBSE ಪ್ರಕಾರ, ಈ ಬಾರಿ ಬೋರ್ಡ್ ಪರೀಕ್ಷೆಯ ವಿದ್ಯಾರ್ಥಿಗಳಿಗೆ 20 ನಿಮಿಷಗಳ ಓದುವ ಸಮಯವನ್ನು ನೀಡಲಾಗುತ್ತದೆ. ಮೊದಲು ಈ ಸಮಯ 15 ನಿಮಿಷವಾಗಿತ್ತು. ಮೊದಲ ಹಂತದ ಬೋರ್ಡ್ ಪರೀಕ್ಷೆಗಳಲ್ಲಿ ಬಹು ಆಯ್ಕೆಯ ಪ್ರಶ್ನೆಗಳನ್ನು (MCQ) ಮಾತ್ರ ಕೇಳಲಾಗುವುದು ಎನ್ನಲಾಗಿದೆ. ಈ MCQ ಪರೀಕ್ಷೆಯು 90 ನಿಮಿಷಗಳದ್ದಾಗಿರುತ್ತದೆ.


ಎಲ್ಲಾ ಸರ್ಕಲ್ ತುಂಬಬೇಕು
ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನಾಲ್ಕು ಆಯ್ಕೆಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ನೀಡಲಾದ ಆಯ್ಕೆಗಳಲ್ಲಿ ಅವರ ಸರಿಯಾದ ಉತ್ತರವನ್ನು ಆಯ್ಕೆ ಮಾಡುತ್ತಾರೆ. ವಿದ್ಯಾರ್ಥಿಗಳು ಪ್ರಶ್ನೆಗೆ ಉತ್ತರಿಸಲು ಬಯಸದಿದ್ದರೂ ಕೂಡ ಆವರು ಸರ್ಕಲ್ ತುಂಬಲೆ ಬೇಕು. ಇದಕ್ಕಾಗಿ, ಪ್ರಶ್ನೆಯನ್ನು ಖಾಲಿ ಬಿಡಲು ಮತ್ತೊಂದು ಆಯ್ಕೆಯನ್ನು ನೀಡಲಾಗುವುದು, ಅದನ್ನು ವಿದ್ಯಾರ್ಥಿಗಳು ಭರ್ತಿ ಮಾಡಬೇಕು. ಖ್ಯಾತ ಶಿಕ್ಷಣತಜ್ಞ ಪಿ.ಎಸ್.ಕಂಡ್ಪಾಲ್ ಅವರ ಪ್ರಕಾರ, ಈ ವ್ಯವಸ್ಥೆಯನ್ನು ಇತರ ಹಲವು ಪರೀಕ್ಷೆಗಳಲ್ಲಿಯೂ ಮಾಡಲಾಗಿದೆ. ವಾಸ್ತವವಾಗಿ ಎಲ್ಲಾ ಉತ್ತರ ಸೀಟುಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಯಾವುದೇ ಪ್ರಶ್ನೆಗೆ ಉತ್ತರವನ್ನು ಖಾಲಿ ಬಿಡಲಾಗುವುದಿಲ್ಲ. ಖಾಲಿ ಬಿಡುವ ಆಯ್ಕೆಯನ್ನು ಸಹ ವಿದ್ಯಾರ್ಥಿಗಳು ವೃತ್ತದ ಮೂಲಕ ನಮೂದಿಸಬೇಕು


50- 50% ಪಠ್ಯಕ್ರಮದ ವಿತರಣೆಯಿಂದಾಗಿ ಒತ್ತಡ ಕಡಿಮೆಯಾಗಿದೆ
10ನೇ ತರಗತಿ ವಿದ್ಯಾರ್ಥಿನಿ ದೀಪ್ತಿ ಶರ್ಮಾ ಹೇಳುವ ಪ್ರಕಾರ, ಪರೀಕ್ಷೆಗಳು ಎರಡು ಹಂತಗಳಲ್ಲಿ ನಡೆಯುತ್ತಿರುವುದು ಒಳ್ಳೆಯ ಸಂಗತಿಯಾಗಿದೆ. 50- 50ರಷ್ಟು ಹಂಚಿಕೆಯಿಂದಾಗಿ ಪಠ್ಯಕ್ರಮವೂ ಕಡಿಮೆಯಾಗಿದೆ. ಇದೇ ವೇಳೆ ಹೊಸ ಪರೀಕ್ಷೆಯ ಹೊಸ ವಿಧಾನದ ಬಗ್ಗೆಯೂ ಕುತೂಹಲ ಇದೆ ಎಂದಿದ್ದಾರೆ. ದೆಹಲಿಯಲ್ಲಿ ವಾಸಿಸುವ 12 ನೇ ತರಗತಿಯ ವಿದ್ಯಾರ್ಥಿ ಉಮಂಗ್ ಅಗರ್ವಾಲ್ ಪ್ರಕಾರ, ಬೋರ್ಡ್ ಪರೀಕ್ಷೆಗಳ ಈ ವಿಧಾನವು ಎಲ್ಲಾ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಹೊಸದು, ಆದ್ದರಿಂದ ಮನಸ್ಸಿನಲ್ಲಿ ಹಲವಾರು ರೀತಿಯ ಸಂದಿಗ್ಧತೆಗಳಿವೆ. ಆದರೆ ಈ ಪರೀಕ್ಷೆಗಳ ಬಗ್ಗೆ ಭಯವಿಲ್ಲ ಎಂದಿದ್ದಾರೆ.


ಅದರಂತೆ ಆಂತರಿಕ ಅಂಕಗಳನ್ನು ಕಂಡುಹಿಡಿಯಲಾಗುತ್ತದೆ
CBSE ಮಂಡಳಿಯ ಪ್ರಕಾರ, 10 ನೇ ತರಗತಿಯ 20 ಅಂಕಗಳ ಆಂತರಿಕ ಅಂಕಗಳನ್ನು ಸಹ 10-10 ಅಂಕಗಳಾಗಿ ವಿಭಜಿಸಲಾಗಿದೆ. ಆದರೆ 12 ಕ್ಕೆ ಇದನ್ನು 15-15 ಅಂಕಗಳಲ್ಲಿ ವಿಂಗಡಿಸಲಾಗಿದೆ. ಈ ಬಾರಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ನಗರದಲ್ಲಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶವನ್ನು ಕಲ್ಪಿಸಲಾಗಿದೆ. ವಾಸ್ತವವಾಗಿ, ಕರೋನಾದಿಂದಾಗಿ, ಸಾವಿರಾರು ವಿದ್ಯಾರ್ಥಿಗಳು ತಮ್ಮ ನಗರವನ್ನು ತೊರೆದು ಬೇರೆ ಸ್ಥಳಕ್ಕೆ ಹೋಗಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ ಅನೇಕರು ಇನ್ನೂ ತಮ್ಮ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ, ಅವರ ಶಾಲೆಯು ಬೇರೆ ಸ್ಥಳದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ವಿದ್ಯಾರ್ಥಿಗಳು ತಮ್ಮ ಹತ್ತಿರದ ಶಾಲೆಯಲ್ಲಿ ಪರೀಕ್ಷೆಗಳನ್ನು ನೀಡಲು ಸಾಧ್ಯವಾಗಲಿದೆ.


ಪರೀಕ್ಷಾ ಕೇಂದ್ರಗಳಲ್ಲಿ ಕರೋನಾ ಪ್ರೋಟೋಕಾಲ್ ಅನ್ನು ಅನುಸರಿಸುವುದು ಅವಶ್ಯಕ
ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ  ಕೊರೊನಾ ಸೋಂಕು ತಗುಲದಂತೆ ವಿಶೇಷ ವ್ಯವಸ್ಥೆಯನ್ನೂ ಮಾಡಲಾಗಿದೆ. CBSE ಪ್ರಕಾರ, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕರೋನಾ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಒಂದೇ ಕೇಂದ್ರದಲ್ಲಿ ಗರಿಷ್ಠ 350 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು. ವಿದ್ಯಾರ್ಥಿಗಳ ನಡುವೆ ಆರು ಅಡಿ ಅಂತರ ಕಾಯ್ದುಕೊಳ್ಳಲಾಗುವುದು. ಪರೀಕ್ಷಾ ಕೇಂದ್ರದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.


ಬೆಳಗ್ಗೆ 11ರಿಂದ ಪರೀಕ್ಷೆಗಳು ನಡೆಯಲಿವೆ
10 ಮತ್ತು 12 ನೇ ತರಗತಿಯ ಮೊದಲ ಹಂತದ ಬೋರ್ಡ್ ಪರೀಕ್ಷೆಗಳಿಗೆ CBSE ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಮೈನರ್ ಪರೀಕ್ಷೆಗಳು ನವೆಂಬರ್ 16 ಮತ್ತು 17 ರಿಂದ ಪ್ರಾರಂಭವಾಗುತ್ತವೆ. ಅದೇ ಸಮಯದಲ್ಲಿ, ಪ್ರಮುಖ ವಿಷಯಗಳ 12 ನೇ ತರಗತಿಯ ಬೋರ್ಡ್ ಪರೀಕ್ಷೆಯು ಡಿಸೆಂಬರ್ 1 ರಿಂದ ಪ್ರಾರಂಭವಾಗಲಿದೆ ಮತ್ತು ಡಿಸೆಂಬರ್ 22 ರವರೆಗೆ ನಡೆಯಲಿದೆ. 12 ನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲ ಪರೀಕ್ಷೆ ಸಮಾಜಶಾಸ್ತ್ರ ವಿಷಯದಾಗಿದ್ದರೆ,  ಕೊನೆಯ ಪರೀಕ್ಷೆ ಗೃಹ ವಿಜ್ಞಾನ ವಿಷಯದ್ದಾಗಿರಲಿದೆ. ಈ ಪರೀಕ್ಷೆಗಳು ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿವೆ. ಇದೇ ವೇಳೆ  10 ನೇ ತರಗತಿಯ ಪ್ರಮುಖ ವಿಷಯಗಳ ಬೋರ್ಡ್ ಪರೀಕ್ಷೆಗಳ ಮೊದಲ ಹಂತದ ಪರೀಕ್ಷೆಗಳು ನವೆಂಬರ್ 30 ರಿಂದ ಪ್ರಾರಂಭವಾಗಲಿವೆ. ಈ ಪರೀಕ್ಷೆಗಳು ಡಿಸೆಂಬರ್ 11 ರಂದು ಮುಕ್ತಾಯಗೊಳ್ಳಲಿವೆ. 10 ನೇ ತರಗತಿಗೆ, ಮೊದಲ ಪರೀಕ್ಷೆಯು ಸಮಾಜ ವಿಜ್ಞಾನ ವಿಷಯದ್ದಾಗಿದ್ದರೆ ಕೊನೆಯ ಪರೀಕ್ಷೆ ಇಂಗ್ಲಿಷ್ ವಿಷಯದ್ದಾಗಿರಲಿದೆ. 


ನವೆಂಬರ್ 17 ರಿಂದ ಮೈನರ್ ವಿಷಯಗಳ ಪರೀಕ್ಷೆಗಳು ಪ್ರಾರಂಭವಾಗುತ್ತವೆ
12ನೇ ಮೈನರ್ ವಿಷಯಗಳ ಪರೀಕ್ಷೆಗಳು ನವೆಂಬರ್ 16 ರಿಂದ ಪ್ರಾರಂಭವಾಗಲಿವೆ. ಆದರೆ CBSE 10 ನೇ ಅವಧಿ -1 ರ ಮೈನರ್ ವಿಷಯಗಳ ಪರೀಕ್ಷೆಗಳು ನವೆಂಬರ್ 17 ರಿಂದ ಪ್ರಾರಂಭವಾಗಲಿವೆ. ಇದೇ ವೇಳೆ, 10 ನೇ ಪ್ರಮುಖ ವಿಷಯಗಳ ಪತ್ರಿಕೆಗಳು ನವೆಂಬರ್ 30 ರಿಂದ ಪ್ರಾರಂಭವಾಗಲಿದ್ದು, ಡಿಸೆಂಬರ್ 11 ರವರೆಗೆ ನಡೆಯಲಿವೆ. 12 ನೇ ತರಗತಿಯ ಪ್ರಮುಖ ವಿಷಯಗಳ ಪರೀಕ್ಷೆಯು ಡಿಸೆಂಬರ್ 01 ರಿಂದ ಪ್ರಾರಂಭವಾಗುತ್ತದೆ ಮತ್ತು ಡಿಸೆಂಬರ್ 22, 2021 ಕ್ಕೆ ಮುಕ್ತಾಯಗೊಳ್ಳಲಿವೆ.


ಇದನ್ನೂ ಓದಿ-CBSE 10th-12th Exam Latest: Term-1 Examಗೆ ಈ ದಿನ ಬಿಡುಗಡೆಯಾಗಲಿದೆ Admit Card, ಈ ರೀತಿ ಡೌನ್ಲೋಡ್ ಮಾಡಿ


12 ನೇ ತರಗತಿ ವೇಳಾಪಟ್ಟಿ
ಡಿಸೆಂಬರ್ 3 - ಇಂಗ್ಲೀಷ್
ಡಿಸೆಂಬರ್ 6 - ಗಣಿತ
ಡಿಸೆಂಬರ್ 7 - ದೈಹಿಕ ಶಿಕ್ಷಣ
ಡಿಸೆಂಬರ್ 8 - ವ್ಯಾಪಾರ ಅಧ್ಯಯನಗಳು
ಡಿಸೆಂಬರ್ 9 - ಭೂಗೋಳ
ಡಿಸೆಂಬರ್ 10 - ಭೌತಶಾಸ್ತ್ರ
ಡಿಸೆಂಬರ್ 11 - ಸೈಕಾಲಜಿ
13 ಡಿಸೆಂಬರ್ - ಅಕೌಂಟೆನ್ಸಿ
14 ಡಿಸೆಂಬರ್ - ರಸಾಯನಶಾಸ್ತ್ರ
ಡಿಸೆಂಬರ್ 15- ಅರ್ಥಶಾಸ್ತ್ರ
16 ಡಿಸೆಂಬರ್ - ಹಿಂದಿ
ಡಿಸೆಂಬರ್ 17- ರಾಜ್ಯಶಾಸ್ತ್ರ
18 ಡಿಸೆಂಬರ್ - ಜೀವಶಾಸ್ತ್ರ
ಡಿಸೆಂಬರ್ 20 - ಇತಿಹಾಸ
21 ಡಿಸೆಂಬರ್ - ಕಂಪ್ಯೂಟರ್ ಸೈನ್ಸ್
22 ಡಿಸೆಂಬರ್ - ಗೃಹ ವಿಜ್ಞಾನ


ಇದನ್ನೂ ಓದಿ-CBSE Class 10, 12 Datesheet 2022: ಇಂದು ಸಿಬಿಎಸ್‌ಇ 10, 12ನೇ ತರಗತಿ ಡೇಟ್‌ಶೀಟ್ ಬಿಡುಗಡೆ, ಈ ರೀತಿ ಡೌನ್ಲೋಡ್ ಮಾಡಿ


10 ನೇ ತರಗತಿ ವೇಳಾಪಟ್ಟಿ
30 ನವೆಂಬರ್ - ಸಮಾಜ ವಿಜ್ಞಾನ
ಡಿಸೆಂಬರ್ 2 - ವಿಜ್ಞಾನ
ಡಿಸೆಂಬರ್ 3 - ಗೃಹ ವಿಜ್ಞಾನ
ಡಿಸೆಂಬರ್ 4 - ಗಣಿತ
ಡಿಸೆಂಬರ್ 8 - ಕಂಪ್ಯೂಟರ್ ಅಪ್ಲಿಕೇಶನ್
9 ಡಿಸೆಂಬರ್ - ಹಿಂದಿ
11 ಡಿಸೆಂಬರ್ - ಇಂಗ್ಲೀಷ್


ಸಿಬಿಎಸ್‌ಇ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, 10ನೇ ಪರೀಕ್ಷೆಗಳು ನವೆಂಬರ್ 30 ರಂದು ಬೆಳಗ್ಗೆ  11:30 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ.


ಇದನ್ನೂ ಓದಿ-CBSE Board Exams 2021: ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದಂತೆ CBSE ಪ್ರಮುಖ ನಿರ್ಧಾರ , exam pattern ನಲ್ಲಿ ಮಹತ್ವದ ಬದಲಾವಣೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.