CBSE Class 10, 12 Datesheet 2022: ಇಂದು ಸಿಬಿಎಸ್‌ಇ 10, 12ನೇ ತರಗತಿ ಡೇಟ್‌ಶೀಟ್ ಬಿಡುಗಡೆ, ಈ ರೀತಿ ಡೌನ್ಲೋಡ್ ಮಾಡಿ

CBSE Class 10, 12 Datesheet 2022: ಸಿಬಿಎಸ್‌ಇ ಡೇಟ್‌ಶೀಟ್ ಬಿಡುಗಡೆಗೂ ಮುನ್ನವೇ, ಕೆಲವು ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಮಾಡುವಂತೆ ಒತ್ತಾಯಿಸಿದರು.

Written by - Yashaswini V | Last Updated : Oct 18, 2021, 12:23 PM IST
  • ಸಿಬಿಎಸ್‌ಇ ಈ ಬಾರಿ ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸಲಿದೆ
  • ಟರ್ಮ್ -1 ಡೇಟ್‌ಶೀಟ್ ಅನ್ನು ಇಂದು ಬಿಡುಗಡೆ ಮಾಡಲಾಗುತ್ತದೆ
  • ಟರ್ಮ್ -1ರಲ್ಲಿ, 50% ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ
CBSE Class 10, 12 Datesheet 2022: ಇಂದು ಸಿಬಿಎಸ್‌ಇ 10, 12ನೇ ತರಗತಿ ಡೇಟ್‌ಶೀಟ್ ಬಿಡುಗಡೆ, ಈ ರೀತಿ ಡೌನ್ಲೋಡ್ ಮಾಡಿ title=
CBSE class 10, 12 Datesheet (Image courtesy: PTI)

ನವದೆಹಲಿ:  CBSE Class 10, 12 Datesheet 2022: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಇಂದು ಬಹುನಿರೀಕ್ಷಿತ  10 ನೇ ತರಗತಿ ಮತ್ತು 12 ನೇ ತರಗತಿಯ  ಡೇಟ್‌ಶೀಟ್ ಬಿಡುಗಡೆ ಮಾಡಲಿದೆ. ಇದೇ ಪ್ರಥಮ ಬಾರಿಗೆ ಈ ವರ್ಷ 10 ನೇ ತರಗತಿ ಮತ್ತು 12 ನೇ ತರಗತಿಯ ಪರೀಕ್ಷೆಯು ವರ್ಷದಲ್ಲಿ ಎರಡು ಬಾರಿ ನಡೆಯಲಿದೆ. CBSE ಯ ಅಧಿಕೃತ ವೆಬ್‌ಸೈಟ್ cbse.nic.in ಗೆ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳು ಡೇಟ್‌ಶೀಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಟರ್ಮ್ -1 ಡೇಟ್‌ಶೀಟ್ ಅನ್ನು ಇಂದು ಬಿಡುಗಡೆ ಮಾಡಲಾಗುತ್ತದೆ
ಇಂದು ಅಕ್ಟೋಬರ್ 18 ರಂದು ಸಿಬಿಎಸ್‌ಇ ಪರೀಕ್ಷೆಯ ಟರ್ಮ್ -1 (CBSE Term 1 Exam) ರ ಡೇಟ್‌ಶೀಟ್ ಅನ್ನು ಬಿಡುಗಡೆ ಮಾಡುತ್ತದೆ. 10 ನೇ ತರಗತಿ ಮತ್ತು 12 ನೇ ತರಗತಿಯ ಟರ್ಮ್ -1 ಪರೀಕ್ಷೆಯಲ್ಲಿ, 50 ಶೇಕಡಾ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- Mahindra: ಈ ಅದ್ಭುತ ವಾಹನಗಳ ಮೇಲೆ 81,500 ರೂ. ವರೆಗೆ ಡಿಸ್ಕೌಂಟ್ ಲಭ್ಯ, ಈ ಅವಕಾಶ ಕಳೆದುಕೊಳ್ಳಬೇಡಿ!

ಸಿಬಿಎಸ್‌ಇ 10 ಮತ್ತು 12 ನೇ ಡೇಟ್‌ಶೀಟ್ ಡೌನ್‌ಲೋಡ್ ಮಾಡುವುದು ಹೇಗೆ ?  (How To Download CBSE Class 10 And 12 Datehseet)
>> ವಿದ್ಯಾರ್ಥಿಗಳು, ಪೋಷಕರು ಸಿಬಿಎಸ್‌ಇ 10 (CBSE 10) ಮತ್ತು 12 ನೇ ತರಗತಿ ಪರೀಕ್ಷೆಗಳ ಡೇಟ್‌ಶೀಟ್ ಡೌನ್‌ಲೋಡ್ ಮಾಡಲು, ಅಧಿಕೃತ ವೆಬ್‌ಸೈಟ್ cbse.nic.in ಗೆ ಭೇಟಿ ನೀಡಿ.

>> ನಂತರ  ಡೇಟ್‌ಶೀಟ್  ಲಿಂಕ್ ಮೇಲೆ ಕ್ಲಿಕ್ ಮಾಡಿ.

>> ಇದರ ನಂತರ, 10 ನೇ ತರಗತಿ ಅಥವಾ 12 ನೇ ತರಗತಿ ಡೇಟ್‌ಶೀಟ್‌ಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ.

>> ನಂತರ ಡೇಟ್‌ಶೀಟ್‌ನ ಪಿಡಿಎಫ್ ತೆರೆಯುತ್ತದೆ, ಅದನ್ನು ನೀವು ಡೌನ್‌ಲೋಡ್ ಮಾಡಬಹುದು ಅಥವಾ ಪ್ರಿಂಟ್ ಔಟ್ ತೆಗೆಯಬಹುದು.

ಇದನ್ನೂ ಓದಿ- T20 World Cup 2021: ನೀವು ಈ ರೀತಿ T20 World Cup Live ಅನ್ನು ಫ್ರೀ ಆಗಿ ವೀಕ್ಷಿಸಬಹುದು

ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲು ಬೇಡಿಕೆ:
ಗಮನಿಸಬೇಕಾದ ಸಂಗತಿಯೆಂದರೆ ಸಿಬಿಎಸ್‌ಇ 10 ಮತ್ತು 12 ನೇ ತರಗತಿ ಡೇಟ್‌ಶೀಟ್ ಬಿಡುಗಡೆಗೂ ಮುನ್ನವೇ, ಕೆಲವು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಪ್ರಸ್ತುತ ಕರೋನಾವೈರಸ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಮಾಡುವಂತೆ ಒತ್ತಾಯಿಸಿದರು. ಕಳೆದ ವರ್ಷವೂ, ಕರೋನಾದಿಂದಾಗಿ, ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಮಾಡಲು ಬೇಡಿಕೆ ಇತ್ತು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News