ಕದನ ವಿರಾಮ ಉಲ್ಲಂಘನೆ: 3 ಭಾರತೀಯ ನಾಗರಿಕರ ಸಾವು, ಪಾಕ್ ರಾಜತಾಂತ್ರಿಕರಿಗೆ ಬುಲಾವ್ ಕಳುಹಿಸಿದ ಭಾರತ
ಪಾಕ್ ಹೈಕಮಿಷನ್ ನ ಉಸ್ತುವಾರಿಗೆ ಬುಲಾವ್ ಕಳುಹಿಸಿರುವ ಭಾರತ, ಪಾಕ್ ಪಡೆಗಳಿಂದ ನಡೆಸಲಾಗುತ್ತಿರುವ ಕದನ ವಿರಾಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನವದೆಹಲಿ:ಪಾಕ್ ಹೈಕಮಿಷನ್ ನ ಉಸ್ತುವಾರಿಗೆ ಬುಲಾವ್ ಕಳುಖಿಸಿದ ಭಾರತ ಪಾಕ್ ಪಡೆಗಳಿಂದ ನಡೆಸಲಾಗುತ್ತಿರುವ ಕದನ ವಿರಾಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕೃಷ್ಣಾ ಕಣಿವೆಯಲ್ಲಿ ಶುಕ್ರವಾರ ಯಾವುದೇ ಪ್ರಚೋದನೆ ಇಲ್ಲದ ಪಾಕ್ ನಡೆಸಿರುವ ಗುಂಡಿನ ದಾಳಿಯಲ್ಲಿ ಓರ್ವ ಬಾಲಕ ಸೇರಿದಂತೆ ಮೂವರು ಅಮಾಯಕರನ್ನು ಹತ್ಯಗೈಯಲಾಗಿದೆ.
ಶುಕ್ರವಾರ ರಾತ್ರಿ ನಡೆಸಲಾಗಿರುವ ಈ ಕೃತ್ಯವನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಮ್ರುತಪಟ್ಟವರೆಲ್ಲರು ಒಂದೇ ಕುಟುಂಬದ ಸದಸ್ಯರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಯಾವುದೇ ರೀತಿಯ ಪ್ರಚೋಚನೆ ಇಲ್ಲದೆ ನಡೆಸಲಾಗಿರುವ ಈ ದಾಳಿಯಲ್ಲಿ ಮತ್ತೋರ್ವ ಬಾಲಕ ಕೂಡ ಗಾಯಗೊಂಡಿದ್ದಾನೆ.
ಮುಗ್ಧ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ, ಪಾಕ್ ಪಡೆಗಳು ನಡೆಸಿರುವ ಈ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ವರ್ಷ, ಪಾಕ್ ಪಡೆಗಳು 2711 ಬಾರಿ ಪ್ರಚೋದನೆಯಿಲ್ಲದೆ ಕದನ ವಿರಾಮ ಉಲ್ಲಂಘಿಸಿದ ಕಾರಣ 21 ಭಾರತೀಯರು ಸಾವನ್ನಪ್ಪಿದ್ದಾರೆ ಮತ್ತು 94 ಮಂದಿ ಗಾಯಗೊಂಡಿದ್ದಾರೆ.
"ಗಡಿಯಾಚೆಗಿನ ಭಯೋತ್ಪಾದಕರು ಭಾರತದ ಗಡಿಯೊಳಗೆ ನುಸುಳಲು ಪಾಕಿಸ್ತಾನದ ನಿರಂತರ ಸಹಾಯ ಒದಗಿಸುತ್ತಿದ್ದು, ಭಯೋತ್ಪಾದಕರೊಳಗೆ ಒಳ ನುಸುಳಲು ಪಾಕಿಸ್ತಾನದ ಪಡೆಗಳು ನಡೆಸುತ್ತಿರುವ ಗುಂಡಿನ ದಾಳಿಯನ್ನು ಭಾರತ ವಿರೋಧಿಸುತ್ತದೆ" ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.
ವಿದೇಶಾಂಗ ಸಚಿವಾಲಯದ ಪ್ರಕಾರ, ಗಡಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಶಾಂತಿ ಕಾಪಾಡಲು 2003 ರ ಕದನ ವಿರಾಮ ಒಪ್ಪಂದಕ್ಕೆ ಪಾಕ್ ಬದ್ಧವಾಗಿರಬೇಕು ಎಂದು ಪಾಕಿಸ್ತಾನ ಹೈಕಮಿಷನ್ ನ ಉಸ್ತುವಾರಿ ಸೂಚಿಸಲಾಗಿದೆ.