ನವದೆಹಲಿ: ಮ್ಯಾಂಗನೀಸ್ ಓರ್ ಇಂಡಿಯಾ ಲಿಮಿಟೆಡ್ (MOIL) ನ ಎಲ್ಲಾ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಅಕ್ಟೋಬರ್ 31 ರ ಭಾನುವಾರದಂದು ದೀಪಾವಳಿ ಬೋನಸ್ 28,000 ರೂ.ಜೊತೆಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಉದ್ಯೋಗಿಗಳಿಗೆ ವೇತನದ ಪರಿಷ್ಕರಣೆಯನ್ನು ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಈ ಕ್ರಮದಿಂದಾಗಿ ಕಂಪನಿಯ ಮೇಲೆ ವಾರ್ಷಿಕ ಸುಮಾರು 87 ಕೋಟಿ ರೂಪಾಯಿಗಳ ಆರ್ಥಿಕ ಪರಿಣಾಮ ಬೀರುತ್ತದೆ ಎನ್ನಲಾಗಿದೆ.ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಉಕ್ಕು ಸಚಿವ ರಾಮಚಂದ್ರ ಪ್ರಸಾದ್ ಸಿಂಗ್ ಅವರು ನಾಗ್ಪುರದಲ್ಲಿ ಎಂಒಐಎಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಿದ್ದಾರೆ ಎಂದು ಉಕ್ಕು ಸಚಿವಾಲಯದ ಪ್ರಕಟಣೆ ತಿಳಿಸಿದೆ.


ವೇತನ ಪರಿಷ್ಕರಣೆ 10 ವರ್ಷಗಳ ಅವಧಿಗೆ ಎಂದು ಹೇಳಿಕೆಯಲ್ಲಿ ಸೂಚಿಸಲಾಗಿದೆ.ಪರಿಣಾಮಕಾರಿ ದಿನಾಂಕವನ್ನು ಆಗಸ್ಟ್ 1, 2017 ರಿಂದ ಜುಲೈ 31, 2027 ರವರೆಗೆ ಲೆಕ್ಕಹಾಕಲಾಗಿದೆ.ಈ ನಡೆಯಿಂದಾಗಿ ಒಟ್ಟು 5,800 ಕಂಪನಿ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.


ಸಚಿವಾಲಯದ ಪ್ರಕಾರ, MOIL ಒಂದೇ ಬಾರಿಗೆ ಬಾಕಿ ಪಾವತಿಯನ್ನು ಮಾಡುವುದಾಗಿ ಘೋಷಿಸಿತು, ಇದು ಆಗಸ್ಟ್ 1, 2017 ರಿಂದ ಸೆಪ್ಟೆಂಬರ್ 30, 2021 ರ ಅವಧಿಗೆ ಸುಮಾರು 218 ಕೋಟಿ ರೂಪಾಯಿಗಳ ಆರ್ಥಿಕ ಪರಿಣಾಮವನ್ನು ಬೀರುತ್ತದೆ.


2020-21ನೇ ಸಾಲಿನ ಎಲ್ಲಾ ಉದ್ಯೋಗಿಗಳಿಗೆ ಪ್ರೊಡಕ್ಷನ್ ಲಿಂಕ್ಡ್ ಬೋನಸ್ ಅನ್ನು ದೀಪಾವಳಿಯ ಮೊದಲು ಪಾವತಿಸಲಾಗುವುದು ಎಂದು MOIL ಸಿಎಂಡಿ ಎಂ ಪಿ ಚೌಧರಿ ಹೇಳಿದ್ದಾರೆ.ಏತನ್ಮಧ್ಯೆ, ಉಕ್ಕು ಸಚಿವರು ತಮ್ಮ ಭೇಟಿಯ ಸಮಯದಲ್ಲಿ ಚಿಕ್ಲಾ ಗಣಿಯಲ್ಲಿ ಎರಡನೇ ವರ್ಟಿಕಲ್ ಶಾಫ್ಟ್ ಮತ್ತು ಅದರ ಐದು ಗಣಿ ಸ್ಥಳಗಳಲ್ಲಿ ಆಸ್ಪತ್ರೆಗಳಂತಹ ವಿವಿಧ MOIL ಸೌಲಭ್ಯಗಳನ್ನು ಉದ್ಘಾಟಿಸಿದರು.


ಉಕ್ಕು ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುತ್ತಿರುವ MOIL ದೇಶದಲ್ಲಿ ಮ್ಯಾಂಗನೀಸ್ ಅದಿರಿನ ಅತಿ ದೊಡ್ಡ ಉತ್ಪಾದಕವಾಗಿದೆ.ಸರ್ಕಾರಿ ಸ್ವಾಮ್ಯದ ಸಂಸ್ಥೆಯು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ 11 ಗಣಿಗಳನ್ನು ನಿರ್ವಹಿಸುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ