ನಿಮ್ಮ ಡ್ರೈವಿಂಗ್ ಲೈಸೆನ್ಸ್, ಪರ್ಮಿಟ್ ಕಾರ್ಡ್ ಅವಧಿ ಮುಗಿದಿದ್ದರೆ, ಉದ್ವೇಗಕ್ಕೆ ಒಳಗಾಗುವ ಆಗತ್ಯವಿಲ್ಲ
ಚಾಲನಾ ಪರವಾನಗಿ, ವಾಹನ ಪರವಾನಗಿ ಮತ್ತು ನೋಂದಣಿಯ ನವೀಕರಣ ಅವಧಿಯನ್ನು ಈ ವರ್ಷ ಡಿಸೆಂಬರ್ 31 ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ.
ನವದೆಹಲಿ: ಚಾಲನಾ ಪರವಾನಗಿ, ವಾಹನ ಪರವಾನಗಿ ಮತ್ತು ನೋಂದಣಿಯ ನವೀಕರಣ ಅವಧಿಯನ್ನು ಕೇಂದ್ರ ಸರ್ಕಾರ ಈ ವರ್ಷ ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ. ಇಲ್ಲಿಯವರೆಗೆ ತಮ್ಮ ಸಾರಿಗೆ ದಾಖಲೆಗಳನ್ನು ನವೀಕರಿಸಲಾಗಲಿಲ್ಲ ಎಂದಾದರೆ ಈ ವರ್ಷದ ಅಂತ್ಯದ ವೇಳೆಗೆ ಈ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ.
ಕರೋನಾ ಸೋಂಕಿನಿಂದಾಗಿ ದೇಶಾದ್ಯಂತ ಸಾರಿಗೆ ಕಚೇರಿಗಳನ್ನು ಸುಮಾರು 3 ತಿಂಗಳು ಮುಚ್ಚಲಾಗಿದೆ. ಅದರ ನಂತರ ಜೂನ್‌ನಿಂದ ಕಚೇರಿಗಳು ತೆರೆಯಲು ಪ್ರಾರಂಭಿಸಿದವು. ಆದರೆ ವಿವಿಧ ರಾಜ್ಯಗಳಲ್ಲಿ ನಿರಂತರ ಲಾಕ್‌ಡೌನ್‌ನಂತಹ ಸಂದರ್ಭಗಳಿಂದಾಗಿ ಜನರು ತಮ್ಮ ಪರವಾನಗಿ ಮತ್ತು ವಾಹನಗಳ ನವೀಕರಣಕ್ಕಾಗಿ ಹೊರಬರಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ದೇಶಾದ್ಯಂತದ ಸಾವಿರಾರು ಜನರ ಚಾಲನಾ ಪರವಾನಗಿ (Driving License), ವಾಹನ ಪರವಾನಗಿಗಳು, ಫಿಟ್‌ನೆಸ್‌ನಂತಹ ದಾಖಲೆಗಳ ಅವಧಿ ಮುಗಿದಿದೆ.
ಆನ್ಲೈನ್'ನಲ್ಲಿ ಡ್ರೈವಿಂಗ್ ಲೈಸೆನ್ಸ್-Aadhaar ಲಿಂಕ್ ಮಾಡಲು ಹೀಗೆ ಮಾಡಿ!
ಜನರ ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಾರಿಗೆ ಸಂಬಂಧಿತ ದಾಖಲೆಗಳ ಸಿಂಧುತ್ವವನ್ನು ಹೆಚ್ಚಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಈಗ ದಿನಾಂಕವನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಚಾಲನಾ ಪರವಾನಗಿ, ವಾಹನಗಳ ಫಿಟ್‌ನೆಸ್ ಮತ್ತು ಪರವಾನಗಿಗಳಂತಹ ದಾಖಲೆಗಳ ಸಿಂಧುತ್ವ ಈ ವರ್ಷದ ಫೆಬ್ರವರಿ ನಂತರ ಮುಕ್ತಾಯಗೊಂಡಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಅವರ ಸಿಂಧುತ್ವವನ್ನು ಈಗ ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ.
ಈ ಅವಧಿಯಲ್ಲಿ ಜನರು ತಮ್ಮ ದಾಖಲೆಗಳನ್ನು ನವೀಕರಿಸಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಹಾಗೆ ಮಾಡಲು ವಿಫಲವಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ. ಇದಕ್ಕೂ ಮೊದಲು ಮಾರ್ಚ್ 30 ಮತ್ತು ನಂತರ ಸೆಪ್ಟೆಂಬರ್ 30 ರಂದು ಎರಡನೇ ಬಾರಿಗೆ ಇದರ ಸಮಯವನ್ನು ವಿಸ್ತರಿಸಲಾಗಿತ್ತು.