ನವದೆಹಲಿ: ಆಸ್ಪತ್ರೆಗಳಿಗೆ ಜನರು ದಿನೆ ದಿನೆ ದಾಖಲಾಗುವ ಪ್ರಮಾಣವು ವಿಪರೀತವಾಗುತ್ತಿದೆ. ಇದನ್ನು ತಪ್ಪಿಸಲು ಕೋವಿಡ್-19 ಸೋಂಕು ನನಗೆ ತಗುಲಿದೆಯಾ ಅಥವಾ ಇಲ್ಲವೇ ಎಂಬುದನ್ನು  ಜನರು ಮನೆಯಲ್ಲಿಯೇ ಪರೀಕ್ಷೆ ಮಾಡಬಹುದು. ರಕ್ತದ ಆಮ್ಲಜನಕದ ಮಟ್ಟವನ್ನು ಹೇಗೆ ಟೆಸ್ಟ್ ಮಾಡಿಕೊಳ್ಳಬೇಕು ಎಂಬುದರ ಕುರಿತು ಕೇಂದ್ರ ಸರ್ಕಾರ ಮಾಹಿತಿ ಹಂಚಿಕೊಂಡಿದ್ದೆ.


COMMERCIAL BREAK
SCROLL TO CONTINUE READING

ದೇಶಾದ್ಯಂತ ಹಲವಾರು ಆಸ್ಪತ್ರೆಗಳಲ್ಲಿ ಆಮ್ಲಜನಕ(Oxygen)ದ ಕೊರತೆಯಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ -19 ರೋಗಿಗಳಿಗೆ ವೈದ್ಯರು ಮತ್ತು ತಜ್ಞರು ಸಲಹೆ ನೀಡಿದ್ದಾರೆ.


ಇದನ್ನೂ ಓದಿ : ಫೇಕ್ ನ್ಯೂಸ್ ನಿಯಂತ್ರಣಕ್ಕೆ 'cyber patrol' ನೇಮಿಸಿದ ಈ ರಾಜ್ಯ


ನಿಮ್ಮ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಲು ಕೇಂದ್ರದ ಮಾರ್ಗ ಸೂಚಿಗಳು: 


Maharashtra: 18 ವರ್ಷ ಮೇಲ್ಪಟ್ಟವರಿಗೂ ಕೂಡ ಉಚಿತ ವ್ಯಾಕ್ಸಿನ್


* ಟೆಸ್ಟ್ (Test)ತೆಗೆದುಕೊಳ್ಳುವ ಮೊದಲು, ಕನಿಷ್ಠ ಐದು ನಿಮಿಷಗಳ ಕಾಲ ವಿಶ್ರಾಂತಿ ಪಡೆಯಬೇಕು.


* ಟೆಸ್ಟ್ ಮಾಡುವ ಮೊದಲು ನಿಮ್ಮ ಎದೆಯ ಮೇಲೆ ಕೈ ಇಟ್ಟು ಹೃದಯ(Heart)ದ ಬಡಿತ ಗಮನಿಸಿ.


* ನಂತರ ಆಕ್ಸಿಮೀಟರ್(Oximeter) ನಲ್ಲಿ ನಿಮ್ಮ  ಮಧ್ಯದ ಅಥವಾ ತೋರು ಬೆರಳನ್ನು ಇರಿಸಿ.


ಇದನ್ನೂ ಓದಿ : ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ಹೇಳಿದ ಮಹಾರಾಷ್ಟ್ರ ಸರ್ಕಾರ


* ಬೆರಳಿಟ್ಟ ತಕ್ಷಣ ಏರಿಳಿತವಾಗಬಹುದು, ಅದು ಸ್ಥಿರವಾಗಿರಲು ಕಾಯಿರಿ. ಅದು ಸ್ಥಿರವಾಗಿಲ್ಲದಿದ್ದರೆ ಆಕ್ಸಿಮೀಟರ್ ಅನ್ನು ಕನಿಷ್ಠ ಒಂದು ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಇರಿಸಿ.


* ಐದು ಸೆಕೆಂಡುಗಳ ನಂತರ ಅದನ್ನು ಬಳಸಿ ಟೆಸ್ಟ್ ಮಾಡಿಕೊಳ್ಳಿ.


* ಪ್ರತಿ ರೆಕಾರ್ಡಿಂಗ್ ಅನ್ನು ಎಚ್ಚರಿಕೆಯಿಂದ ಗುರುತಿಸಿ.


ಇದನ್ನೂ ಓದಿ : BIG Announcement: ಮೋದಿ ಸರ್ಕಾರದ ದೊಡ್ಡ ಘೋಷಣೆ, PM CARES Fundನಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ 551 ಆಕ್ಸಿಜನ್ ಪ್ಲಾಂಟ್


* ಬೇಸ್‌ಲೈನ್‌ನಿಂದ ರೆಕಾರ್ಡಿಂಗ್ ಪ್ರಾರಂಭಿಸಿ ಮತ್ತು ದಿನಕ್ಕೆ ಮೂರು ಬಾರಿ ಒಂದೇ ಸಮಯದಲ್ಲಿ ರೆಕಾರ್ಡ್ ಮಾಡಿ.


ಮನೆಯಲ್ಲಿ ಉತ್ತಮ ಆಕ್ಸಿಜನ್ ಗಾಗಿ 4-5 ದಿಂಬುಗಳ ಮೇಲೆ ನಿಮ್ಮ ಮುಖ ಇಟ್ಟು ಮಲಗಬೇಕು ಎಂದು ಕೋವಿಡ್ -19(Covid-19) ರೋಗಿಗಳಿಗೆ ಹೇಳಲಾಗಿದೆ.


ಕೋವಿಡ್-19 ರೋಗಿಗಳಿಗೆ ಆಮ್ಲಜನಕದ ಮಟ್ಟವನ್ನು ಗಮನಿಸುವುದು ನಿರ್ಣಾಯಕವಾಗಿದೆ ಏಕೆಂದರೆ ಬೇಸ್‌ಲೈನ್ ಸ್ಯಾಚುರೇಶನ್ ಶೇ. 94 ಕ್ಕಿಂತ ಕಡಿಮೆಯಾಗಬಾರದು.


ಇದನ್ನೂ ಓದಿ : ನಿಲ್ಲುತ್ತಿಲ್ಲ ಕರೋನಾಸುರ ಆರ್ಭಟ..! ಕಳೆದ 24 ಗಂಟೆಗಳಲ್ಲಿ 3.5 ಲಕ್ಷ ಜನರಿಗೆ ಸೋಂಕು


ಕೋವಿಡ್-19 ರೋಗಿಗೆ 6 ನಿಮಿಷಗಳ ವಾಕ್ ಟೆಸ್ಟ್ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ, ಇದರಲ್ಲಿ ಕೋಣೆಯ ಒಳಗೆ ಆರು ನಿಮಿಷಗಳ ವಾಕ್ ಟೆಸ್ಟ್(Walk Test) ಮೊದಲು ಮತ್ತು ನಂತರ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಬೇಕು. ಶೇಕಡಾ 4 ಅಥವಾ ಅದಕ್ಕಿಂತ ಹೆಚ್ಚಿನ ಏರಿಳಿತವಿದ್ದರೆ, ಆಸ್ಪತ್ರೆಗೆ ದಾಖಲಾಗಬೇಕು. ಇದು ಶೇ. 94 ಕ್ಕಿಂತ ಕಡಿಮೆಯಿದ್ದರೆ, ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿ ಎಂದು ತಜ್ಞರು ತಿಳಿಸಿದ್ದಾರೆ.


ಇದನ್ನೂ ಓದಿ : PM Kisan : ರೈತರ ಖಾತೆಗೆ  ₹ 2000 ಜಮಾ! ನಿಮಗೂ ಬರುತ್ತಾ ಇಲ್ಲವೋ ಇಲ್ಲಿ ಪರಿಶೀಲಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.