PM Kisan : ರೈತರ ಖಾತೆಗೆ  ₹ 2000 ಜಮಾ! ನಿಮಗೂ ಬರುತ್ತಾ ಇಲ್ಲವೋ ಇಲ್ಲಿ ಪರಿಶೀಲಿಸಿ

ಈ ಯೋಜನೆಯ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ 

Last Updated : Apr 25, 2021, 10:30 AM IST
  • ನೀವು ಸಹ ಕೃಷಿಕರಾಗಿದ್ದರೆ ಮತ್ತು ಈ ಪಿಎಂ ರೈತ ಯೋಜನೆ
  • ನಿಮಗೆ ಈ ಯೋಜನೆಯ 2021 ಮೊದಲ ಕಂತು 2000 ರೂ. ಸಹ ಸಿಗುತ್ತದೆ.
  • ಈ ಯೋಜನೆಯ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ
PM Kisan : ರೈತರ ಖಾತೆಗೆ  ₹ 2000 ಜಮಾ! ನಿಮಗೂ ಬರುತ್ತಾ ಇಲ್ಲವೋ ಇಲ್ಲಿ ಪರಿಶೀಲಿಸಿ title=

ನವದೆಹಲಿ: ನೀವು ಸಹ ಕೃಷಿಕರಾಗಿದ್ದರೆ ಮತ್ತು ಈ ಪಿಎಂ ರೈತ ಯೋಜನೆಗೆ ನೋಂದಾಯಿಸಿಕೊಂಡಿದ್ದರೆ, ನಿಮಗೆ ಈ ಯೋಜನೆಯ 2021 ಮೊದಲ ಕಂತು 2000 ರೂ. ಸಹ ಸಿಗುತ್ತದೆ. ಈ ಯೋಜನೆಯ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿರುವ ರೈತರಿಗೆ ಈ ಕಂತಿನ ಹಣ ಖಾತೆಗೆ ಜಮಾ ಆಗಲಿದೆ ನೀಡಲಾಗುತ್ತದೆ. ಈ ಯೋಜನೆಯ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ 

ಶೀಘ್ರದಲ್ಲೇ ನಿಮ್ಮ ಹಣ ಖಾತೆಗೆ ಜಮಾ!

ಇದನ್ನೂ ಓದಿ : ದೇಶದ ರಾಜಧಾನಿ ದೆಹಲಿಯಲ್ಲಿ ಲಾಕ್ ಡೌನ್ ವಿಸ್ತರಣೆ ಸಾಧ್ಯತೆ

ಈವರೆಗೆ 11.74 ಕೋಟಿ ರೈತರನ್ನು ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜ(PM Kisan Samman Scheme)ನೆಗೆ ನೊಂದಾಯಿಸಿಕೊಂಡಿದ್ದಾರೆ. ಅವರು ನಿಯಮಿತವಾಗಿ ಈ ಮೊತ್ತವನ್ನು ಪಡೆಯಲ್ಲಿದ್ದಾರೆ. ನೀವೂ ಸಹ ಏಪ್ರಿಲ್-ಜುಲೈಗೆ 2000 ರೂಪಾಯಿಗಾಗಿ ಕಾಯುತ್ತಿದ್ದರೆ, ಈ ತಿಂಗಳ ಕೊನೆಯಲ್ಲಿ ಅಥವಾ ಮೇ 2 ರ ನಂತರ ಯಾವುದೇ ಸಮಯದಲ್ಲಿ ರೈತರ ಖಾತೆಗೆ ಹಣ ಬರಬಹುದು. ನಿಮ್ಮ ಹಳ್ಳಿಯಲ್ಲಿ ಯಾರಿಗೆ ಹಣ ಬರುತ್ತದೆ, ನೀವು ಅದನ್ನು ಬಹಳ ಸುಲಭವಾಗಿ ನೋಡಬಹುದು. ಅದಕ್ಕಾಗಿ ಈ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ.

ಇದನ್ನೂ ಓದಿ : ಕೋವಾಕ್ಸಿನ್ ಬೆಲೆ ಪ್ರಕಟಿಸಿದ Bharat Biotech; ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಬೇರೆ ಬೇರೆ ದರ ನಿಗದಿ

ಈ ರೀತಿ ಪರಿಶೀಲಿಸಿ:

ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು, ಮೊದಲು ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಭೇಟಿ ನೀಡಬೇಕು. ಇಲ್ಲಿ ನೀವು ಫಾರ್ಮರ್ಸ್ ಕಾರ್ನರ್(Farmers Corner) ಆಯ್ಕೆಯನ್ನು ನೋಡುತ್ತೀರಿ. ಫಾರ್ಮರ್ಸ್ ಕಾರ್ನರ್ ವಿಭಾಗದಲ್ಲಿ, ಫಲಾನುಭವಿಗಳ ಪಟ್ಟಿ(Beneficiaries List)ಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ನೀವು ಪಟ್ಟಿಯಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಮಾಹಿತಿಯನ್ನು ಆರಿಸಬೇಕಾಗುತ್ತದೆ. ಗೆಟ್ ರಿಪೋರ್ಟ್ ಕ್ಲಿಕ್ ಮಾಡಬೇಕು. ಇದರ ನಂತರ, ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನು ತೆರೆದುಕೊಳ್ಳುತ್ತದೆ.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 67 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲು

ನಿಮ್ಮ ಖಾತೆಗೆ ಹಣ ಬರುತ್ತದೆಯೇ ಎಂಬಹುದನ್ನು ಪರಿಶೀಲಿಸಲು: 

ಮೊದಲು ನೀವು ಪಿಎಂ ಕಿಸಾನ್ ಯೋಜನೆಯ ಪೋರ್ಟಲ್‌ಗೆ https://pmkisan.gov.in/  ಹೋಗಿ ಅಲ್ಲಿ  Payment Success ಕೆಳಗೆ ಭಾರತದ ನಕ್ಷೆ(India Map)ಯ ಟ್ಯಾಬ್ ಅಡಿಯಲ್ಲಿ ಕಾಣಿಸುತ್ತದೆ, ಡ್ಯಾಶ್‌ಬೋರ್ಡ್ ಸಿಗುತ್ತೆ ಅದರ ಕ್ಲಿಕ್ ಮಾಡಿ  ಹೊಸ ಪುಟ ಒಂದು ತೆರೆದು ಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಆಗ Village Dashboard ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ನಿಮ್ಮ ಹಳ್ಳಿಯ ಸಂಪೂರ್ಣ ವಿವರಗಳನ್ನು ತೆಗೆದುಕೊಳ್ಳಬಹುದು, ಮೊದಲು ರಾಜ್ಯವನ್ನು ಆಯ್ಕೆ ಮಾಡಿ, ನಂತರ ನಿಮ್ಮ ಜಿಲ್ಲೆ, ನಂತರ ತಾಲೂಕು, ಹೋಬಳಿ  ನಂತರ ನಿಮ್ಮ ಗ್ರಾಮ  ಆಯ್ಕೆ ಮಾಡಿಕೊಳ್ಳಿ. ನಂತರ ಪ್ರದರ್ಶನ ಬಟನ್ ಕ್ಲಿಕ್ ಮಾಡಿ ಮತ್ತು ನೀವು ತಿಳಿದುಕೊಳ್ಳಲು ಬಯಸುವ ವ್ಯಕ್ತಿಯ ಹೆಸರಿನ ಮೇಲೆ ಕ್ಲಿಕ್ ಮಾಡಿ, ಸಂಪೂರ್ಣ ವಿವರವು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ, ವಿಲೇಜ್ ಡ್ಯಾಶ್‌ಬೋರ್ಡ್ ಅಡಿಯಲ್ಲಿ ನಾಲ್ಕು ಗುಂಡಿಗಳು ಇರುತ್ತವೆ, ಎಷ್ಟು ರೈತರ ಡೇಟಾವನ್ನು ನೀವು ತಿಳಿಯಬೇಕಾದರೆ ತಲುಪಿದೆ, ನಂತರ ಸ್ವೀಕರಿಸಿದ ಡೇಟಾ ಬಾಕಿ ಇರುವವರ ಮೇಲೆ ಕ್ಲಿಕ್ ಮಾಡಿ, ಎರಡನೇ ಬಟನ್ ಕ್ಲಿಕ್ ಮಾಡಿ, ನೀವು ಯೋಜನೆಯಡಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರೆ ಅಲ್ಲಿ ನಿಮ್ಮ ಹೆಸರು ಕಂಡು ಬರುತ್ತದೆ. ಹೀಗೆ ನೀವು ಮನೆಯಲ್ಲಿ ಕುಳಿತು ಪಿಎಂ ಕಿಸಾನ್ ಸಮ್ಮನ್ ನಿಧಿಯ ಇತ್ತೀಚಿನ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News