ನವದೆಹಲಿ: ಆಧಾರ್ ಮತ್ತು ಪ್ಯಾನ್ ಕಾರ್ಡ್ಗಳನ್ನು ನಿಮ್ಮ ವಿವಿಧ ಸೇವೆಗಳಿಗೆ ಲಿಂಕ್ ಮಾಡಲು ಈ ಹಿಂದೆ ಕೇಂದ್ರ ಸರ್ಕಾರ ನೀಡಿದ್ದ ಗಡುವನ್ನು ವಿಸ್ತರಣೆ ಮಾಡಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಶನಿವಾರ ತಡರಾತ್ರಿ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ, ವ್ಯಕ್ತಿಗಳು ತಮ್ಮ ಆಧಾರ್ ಗೆ ಸ್ಥಿರ ಖಾತೆ ಸಂಖ್ಯೆ(PAN)ಯನ್ನು ಲಿಂಕ್ ಮಾಡಲು ಐದನೇ ಬಾರಿ ಗಡುವು ವಿಸ್ತರಿಸಿದ್ದು, ಇದುವರೆಗೂ ಆಧಾರ್ ಜೊತೆ ಪ್ಯಾನ್ ಸಂಖ್ಯೆ ಲಿಂಕ್ ಮಾಡದೇ ಇರುವವರು 2019ರ ಮಾರ್ಚ್ 31ರೊಳಗೆ ಲಿಂಕ್ ಮಾಡಲು ಅವಕಾಶ ನೀಡಿದೆ. ಈ ಹಿಂದೆ 2018ರ ಜೂನ್ 30ರಂದು ಆಧಾರ್ ಲಿಂಕ್ ಮಾಡಲು ಅಂತಿಮ ಗಡುವು ನೀಡಲಾಗಿತು. ಆ ಗಡುವು ಪೂರ್ಣಗೊಂಡ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಕಾಯಿದೆ ಸೆಕ್ಷನ್ 119ರ ಅಡಿಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಬಿಡಿಟಿ(ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್) ಸುಪ್ರೀಂ ಕೋರ್ಟ್ ಆದೇಶದಂತೆ ಅಂತಿಮ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದೆ. ಇನ್ನು ಈ ಹಿಂದೆ ಆಧಾರ್ ಕಾರ್ಡ್ ಅಸ್ತಿತ್ವವನ್ನೇ ಪ್ರಶ್ನಿಸಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮಾಡಿದ್ದ ಸುಪ್ರೀಂ ಕೋರ್ಟ್ ಆಧಾರ್-ಪ್ಯಾನ್ ಜೋಡಣೆಗೆ ನೀಡಲಾಗಿದ್ದ ಅಂತಿಮ ಗಡುವನ್ನು ವಿಸ್ತರಣೆ ಮಾಡುವಂತೆ ಕೇಂದ್ರೀಯ ನೇರತೆರಿಗೆಗಳ ಇಲಾಖೆಗೆ ಸೂಚನೆ ನೀಡಿತ್ತು. 


ಆದಾಯ ತೆರಿಗೆ ಕಾಯಿದೆಯ ವಿಭಾಗ 139 ಎಎ (2) ಪ್ರಕಾರ, ಪ್ಯಾನ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಜುಲೈ 1, 2017 ರಂತೆ ಮತ್ತು ಆಧಾರ್ ಅನ್ನು ಪಡೆಯಲು ಅರ್ಹತೆ ಹೊಂದಿದ್ದಾನೆ ಹಾಗೂ ಆತ ತನ್ನ ಆಧಾರ್ ಸಂಖ್ಯೆಯನ್ನು ತೆರಿಗೆ ಅಧಿಕಾರಿಗಳಿಗೆ ನೀಡಲೇಬೇಕು. ಮಾರ್ಚ್ ವರೆಗೆ ದೊರೆತಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ ಇದುವರೆಗೆ ಸುಮಾರು 16.65 ಕೋಟಿ ಪ್ಯಾನ್ ಕಾರ್ಡ್ಗಳಲ್ಲಿ ಒಟ್ಟು 33 ಕೋಟಿ ಪ್ಯಾನ್ ಸಂಖ್ಯೆಗಳು ಆಧಾರ್ ಜೊತೆ ಸಂಪರ್ಕ ಹೊಂದಿವೆ.