Mann ki Baat : ಚಂಡೀಗಢ ಏರ್ಪೋರ್ಟ್ಗೆ `ಭಗತ್ ಸಿಂಗ್` ಹೆಸರು : ಪಿಎಂ ಮೋದಿ
ಈ ದಿನ ನಾವು ಭಾರತಮಾತೆಯ ವೀರ ಪುತ್ರ ಭಗತ್ ಸಿಂಗ್ ಅವರ ಜನ್ಮದಿನವನ್ನು ಆಚರಿಸುತ್ತೇವೆ. ಭಗತ್ ಸಿಂಗ್ ಅವರ ಜನ್ಮದಿನದ ಮುನ್ನವೇ ಅವರಿಗೆ ಗೌರವ ಸಲ್ಲಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದೀಗ ಚಂಡೀಗಢ ವಿಮಾನ ನಿಲ್ದಾಣಕ್ಕೆ ವೀರ ಭಗತ್ ಸಿಂಗ್ ಹೆಸರಿಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
PM Modi Mann Ki Baat : ಪ್ರಧಾನಿ ನರೇಂದ್ರ ಮೋದಿ ಅವರು ಇಂದು 93ನೇ ಸಂಚಿಕೆ 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸೆ.28ರಂದು ಅಮೃತ ಮಹೋತ್ಸವದ ವಿಶೇಷ ದಿನ ಬರಲಿದೆ. ಈ ದಿನ ನಾವು ಭಾರತಮಾತೆಯ ವೀರ ಪುತ್ರ ಭಗತ್ ಸಿಂಗ್ ಅವರ ಜನ್ಮದಿನವನ್ನು ಆಚರಿಸುತ್ತೇವೆ. ಭಗತ್ ಸಿಂಗ್ ಅವರ ಜನ್ಮದಿನದ ಮುನ್ನವೇ ಅವರಿಗೆ ಗೌರವ ಸಲ್ಲಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದೀಗ ಚಂಡೀಗಢ ವಿಮಾನ ನಿಲ್ದಾಣಕ್ಕೆ ವೀರ ಭಗತ್ ಸಿಂಗ್ ಹೆಸರಿಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
Sign Language ಬಗ್ಗೆ ಪ್ರಧಾನಿ ಮಾತು
Sign Language ಕುರಿತು ಮಾತನಾಡಿದ ಪ್ರಧಾನಿ ಮೋದಿ, 'ಕಿವುಡರು ಅಥವಾ ಮೂಗರು ಇದ್ದಾರೆ. ಇವರಿಗೆ ದೊಡ್ಡ ಬೆಂಬಲವೆಂದರೆ ಸಂಕೇತ ಭಾಷೆ ಅಥವಾ Sign Language. ಆದರೆ ದೇಶದಲ್ಲಿ ಬಹಳ ವರ್ಷಗಳಿಂದ ಇದು ಒಂದು ದೊಡ್ಡ ಸಮಸ್ಯೆಯಾಗಿದೆ, ಯಾಕಂದರೆ, ಯಾವುದೇ ಸ್ಪಷ್ಟವಾದ ಸನ್ನೆಗಳಿಲ್ಲ, ಸಂಕೇತ ಭಾಷೆಗೆ ಯಾವುದೇ ಮಾನದಂಡಗಳಿಲ್ಲ. ಈ ತೊಂದರೆಗಳನ್ನು ನಿವಾರಿಸಲು, 2015 ರಲ್ಲಿ ಭಾರತೀಯ ಸಂಕೇತ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರ(Indian Sign Language Research and Training Center)ವನ್ನು ಸ್ಥಾಪಿಸಲಾಯಿತು. ಎರಡು ದಿನಗಳ ಹಿಂದೆ ಅಂದರೆ ಸೆಪ್ಟೆಂಬರ್ 23 ರಂದು ಸಂಕೇತ ಭಾಷೆಯ ದಿನದಂದು, ಅನೇಕ ಶಾಲಾ ಕೋರ್ಸ್‌ಗಳನ್ನು ಸಹ ಸಂಕೇತ ಭಾಷೆಯಲ್ಲಿ ಪ್ರಾರಂಭಿಸಲಾಗಿದೆ. ಸಂಕೇತ ಭಾಷೆಯ ಸ್ಥಿರ ಗುಣಮಟ್ಟವನ್ನು ಕಾಯ್ದುಕೊಳ್ಳಲು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : PM Kisan: ನವರಾತ್ರಿಯಲ್ಲಿ ಸರ್ಕಾರದಿಂದ ರೈತರಿಗೆ ಸಿಹಿಸುದ್ದಿ, ಖಾತೆಗೆ 2 ಸಾವಿರ ರೂ. ಬರಲಿದೆ
ಪ್ಯಾರಾ ಸ್ಪೋರ್ಟ್ಸ್ ಬಗ್ಗೆ ಹೇಳಿದ್ದು ಹೀಗೆ
ಇದರ ಬಗ್ಗೆ ಮಾತನಾಡಿದ ಪಿಎಂ ಮೋದಿ, 'ಇಂದು ಭಾರತವೂ ಪ್ಯಾರಾ ಸ್ಪೋರ್ಟ್ಸ್‌ನಲ್ಲಿ ಯಶಸ್ಸಿನ ಪತಾಕೆಯನ್ನು ಹಾರಿಸುತ್ತಿದೆ. ಅನೇಕ ಟೂರ್ನಿಗಳಲ್ಲಿ ನಾವೆಲ್ಲರೂ ಇದಕ್ಕೆ ಸಾಕ್ಷಿಯಾಗಿದ್ದೇವೆ. ಇಂದು ತಳಮಟ್ಟದಲ್ಲಿ ಅಂಗವಿಕಲರಲ್ಲಿ ಫಿಟ್ನೆಸ್ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ತೊಡಗಿರುವ ಅನೇಕ ಜನರಿದ್ದಾರೆ. ಇದು ವಿಕಲಚೇತನರ ಆತ್ಮಸ್ಥೈರ್ಯಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ ಎಂದರು.
ರಾಷ್ಟ್ರೀಯ ಆಟಗಳ ಉಲ್ಲೇಖ
ರಾಷ್ಟ್ರೀಯ ಕ್ರೀಡಾಕೂಟವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, 'ಗುಜರಾತ್ ನಲ್ಲಿ ಸೆಪ್ಟೆಂಬರ್ 29 ರಿಂದ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ' ಎಂದರು. ಇದು ಬಹಳ ವಿಶೇಷವಾದ ಸಂದರ್ಭ, ಏಕೆಂದರೆ ಹಲವು ವರ್ಷಗಳ ನಂತರ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಹಿಂದಿನ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕಾಯಿತು. ಈ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಆಟಗಾರರಿಗೂ ನನ್ನ ಶುಭಾಶಯಗಳು. ಈ ದಿನ ಆಟಗಾರರನ್ನು ಪ್ರೋತ್ಸಾಹಿಸಲು ಅವರ ಮಧ್ಯೆ ನಾನಿದ್ದೇನೆ.
ಇದನ್ನೂ ಓದಿ : IAS-IPS ಅಧಿಕಾರಿಗಳಿಗೆ ಈ ಸೌಲಭ್ಯಕ್ಕೆ ‘ಬ್ರೇಕ್’ ಹಾಕಿದ ಕೇಂದ್ರ ಸರ್ಕಾರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.