ನವದೆಹಲಿ: ಚಂದ್ರಯಾನ್-2 ಉಪಗ್ರಹ ಚಂದ್ರನ ಕೆಲ ಭಾವಚಿತ್ರಗಳ ಜೊತೆಗೆ ಒಂದು ಕ್ರೆಟರ್ ಅನ್ನು ಕೂಡ ತನ್ನ ಕಣ್ಣಲ್ಲಿ ಸೆರೆ ಹಿಡಿದಿದೆ. ಈ ಕ್ರೆಟರ್ ಗೆ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳ ಜನಕ ವಿಕ್ರಂ ಸಾರಾಭಾಯಿ ಅವರ ಹೆಸರನ್ನು ಇಡಲಾಗಿದೆ.  ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯಮಂತ್ರಿ ಜಿತೇಂದ್ರ ಸಿಂಗ್ ಅವರು ಶುಕ್ರವಾರ ಈ ಕುರಿತು ಮಾಹಿತಿ ನೀಡಿ, ಆಗಸ್ಟ್ 12ಕ್ಕೆ ಸಾರಾಭಾಯಿ ಅವರ ಜನ್ಮ ಶತಾಬ್ದಿ ವರ್ಷ ಪೂರ್ಣಗೊಂಡಿದೆ ಹಾಗೂ ಇದು ಅವರಿಗೆ ನೀಡುತ್ತಿರುವ ಗೌರವವಾಗಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇಸ್ರೋ (ISRO)ನ ಇತ್ತೀಚಿನ ಸಾಧನೆಗಳು ಸರಭಾಯ್ ಅವರ ದೃಷ್ಟಿಯನ್ನು ನನಸಾಗಿಸುತ್ತಿವೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ. ಇಸ್ರೋ ಭಾರತವನ್ನು ವಿಶ್ವದ ಮುಂಚೂಣಿ ದೇಶಗಳಲ್ಲಿ ಇರಿಸಿದೆ. ವಿಶೇಷವೆಂದರೆ, ಬಾಹ್ಯಾಕಾಶ ಇಲಾಖೆ ಪ್ರಧಾನ ಮಂತ್ರಿ ಕಚೇರಿಯ ಅಡಿಯಲ್ಲಿ ಬರುತ್ತದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಕ್ರಮ್ ಸಾರಾಭಾಯ್ ಅವರಿಗೆ ಒಂದು ರೀತಿಯಲ್ಲಿ ವಿಶೇಷ ಗೌರವ ಸಲ್ಲಿಸಿದ್ದು, ಚಂದ್ರಯಾನ್ -2 ಆರ್ಬಿಟರ್ ಸಾರಾಭಾಯಿ ಕುಳಿಯ ಚಿತ್ರವನ್ನು ಸೆರೆಹಿಡಿದಿದೆ ಎಂದು ಘೋಷಿಸಿದೆ. ಅಪೊಲೊ 17 ಮತ್ತು ಲೂನಾ 21 ಕಾರ್ಯಾಚರಣೆಗಳು ಇಳಿದ ಸ್ಥಳದಿಂದ ಪೂರ್ವಕೆ ಸುಮಾರು  250 ರಿಂದ 300 ಕಿ.ಮೀ ದೂರದಲ್ಲಿ ಈ ಸಾರಾಭಾಯಿ ಕುಳಿ ಇದೆ ಎಂದು ಅವರು ಹೇಳಿದ್ದಾರೆ.


ಈ ಕುರಿತು ಇಸ್ರೋ ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ಸಾರಾಭಾಯಿ ಕ್ರೇಟರ್ ನ 3D ಭಾವಚಿತ್ರಗಳ ಪತ್ತೆ ಹಚ್ಚಲಾಗಿದೆ. ಈ ಸಂಶೋಧನೆಯಿಂದ ಖಗೋಳ ಶಾಸ್ತ್ರಜ್ಞರಿಗೆ ಚಂದ್ರನಲ್ಲಿರುವ ಲಾವಾ ಕ್ಷೇತ್ರದ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ.  ವಿನ್ಯಾಸದ ಪ್ರಕಾರ ಚಂದ್ರಯಾನ್ -2 ಕಾರ್ಯನಿರ್ವಹಿಸುತ್ತಿದ್ದು, ಅದರಿಂದ ಪ್ರಮುಖ ವೈಜ್ಞಾನಿಕ ದತ್ತಾಂಶಗಳನ್ನು ಪಡೆಯಲಾಗುತ್ತಿದೆ. ಚಂದ್ರಯಾನ್ -2 ಜಾಗತಿಕ ಬಳಕೆಗಾಗಿ ಈ ವರ್ಷದ ಅಕ್ಟೋಬರ್‌ನಿಂದ ವೈಜ್ಞಾನಿಕ ಡೇಟಾವನ್ನು ಬಿಡುಗಡೆ ಮಾಡಲು ಆರಂಭಿಸಲಿದೆ.


ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿಯುವ ಉದ್ದೇಶದಿಂದ ಚಂದ್ರಯಾನ್ -2 ಅನ್ನು ಜುಲೈ 22, 2019 ರಂದು ಉಡಾಯಿಸಲಾಗಿತ್ತು ಎಂಬುದು ಉಲ್ಲೇಖನೀಯ. ಆದರೆ ಅದರ ಲ್ಯಾಂಡರ್ ವಿಕ್ರಮ್ ಸೆಪ್ಟೆಂಬರ್ 7 ರಂದು ಚಂದ್ರನ ಮೇಲ್ಮೈ ಮೇಲೆ ಹಾರ್ಡ್ ಲ್ಯಾಂಡಿಂಗ್ ನಡೆಸಿತ್ತು. ಇದರಿಂದ ಮೊದಲ ಪ್ರಯತ್ನದಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡುವ ಮೊದಲ ದೇಶವಾಗುವ ಭಾರತದ ಕನಸು ಮುರಿದಿತ್ತು.