Chandrayaan-3 Launch: ಚಂದ್ರಯಾಣ-3 ಉಡಾವಣೆ ಸಕ್ಸಸ್, ವಿಜ್ಞಾನಿಗಳ ಮೊಗದಲ್ಲಿ ಸಂತಸ
Chandrayaan-3 mission: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಇಂದು ಮಧ್ಯಾಹ್ನ(ಜುಲೈ 14) 2.35ಕ್ಕೆ LVM-3 ರಾಕೆಟ್ ಉಡಾವಣೆಗೊಂಡಿದೆ. ಲ್ಯಾಂಡರ್(ವಿಕ್ರಮ್) ಹಾಗೂ ರೋವರ್ (ಪ್ರಜ್ಞಾನ) ಹೊತ್ತ ರಾಕಟ್ ನಭಕ್ಕೆ ಚಿಮ್ಮಿದೆ.
ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯ(ISRO) ಮಹತ್ವಾಕಾಂಕ್ಷೆಯ 3ನೇ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗಿದೆ. ಇಸ್ರೋ ಶುಕ್ರವಾರ ಮಧ್ಯಾಹ್ನ ಚಂದ್ರನ ಮೇಲೆ ರೋವರ್ ಇಳಿಸುವ ಉದ್ದೇಶದಿಂದ ಯಶಸ್ವಿಯಾಗಿ ರಾಕೆಟ್ ಉಡಾವಣೆಗೊಳಿಸಿದ್ದು, ವಿಜ್ಞಾನಿಗಳ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಇಂದು ಮಧ್ಯಾಹ್ನ(ಜುಲೈ 14) 2.35ಕ್ಕೆ LVM-3 ರಾಕೆಟ್ ಉಡಾವಣೆಗೊಂಡಿದೆ. ಲ್ಯಾಂಡರ್(ವಿಕ್ರಮ್) ಹಾಗೂ ರೋವರ್ (ಪ್ರಜ್ಞಾನ) ಹೊತ್ತ ರಾಕಟ್ ನಭಕ್ಕೆ ಚಿಮ್ಮಿದೆ.
ಇದನ್ನೂ ಓದಿ: Vyapam Scam 2.0 : ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
ಚಂದ್ರಯಾನ-3 ಯೋಜನೆಯನ್ನು ಅಂದಾಜು 75 ಮಿಲಿಯನ್ ಡಾಲರ್ ಮೊತ್ತದಲ್ಲಿ (615 ಕೋಟಿ) ಅಭಿವೃದ್ಧಿಪಡಿಸಲಾಗಿದೆ. ಯಶಸ್ವಿ ಉಡಾವಣೆಯಾಗಿರುವ 43.5 ಮೀಟರ್ ಉದ್ದದ (143 ಅಡಿ) LVM-3 ಉಡಾವಣಾ ರಾಕೆಟ್ ಸ್ಪೇಸ್‌ಕ್ರಾಫ್ಟ್ ಅನ್ನು ದೀರ್ಘವೃತ್ತಾಕಾರದ ಭೂಮಿಯ ಕಕ್ಷೆಗೆ ಒಯ್ಯಲಿದೆ. ಅಲ್ಲಿಂದ ಸ್ಪೇಸ್‌ಕ್ರಾಫ್ಟ್ ಚಂದ್ರನೆಡೆಗಿನ ಪಥವನ್ನು ಅನುಸರಿಸಿ ಚಲಿಸುತ್ತಾ, ಆಗಸ್ಟ್ 23ರ ಆಸುಪಾಸಿನಲ್ಲಿ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಗಳಿವೆ.
ಚಂದ್ರಯಾನ-3 ಯಶಸ್ಸಿನ ಹಿಂದಿದೆ 54 ನಾರಿಯರ ಶಕ್ತಿ: ದೇಶದ ಕನಸು ನನಸಾಗಿದ ಮಹಿಳೆಯರು ಇವರೇ…
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.