Chandrayaan-3 Moon Mission: ಚಂದ್ರಯಾನ-3 ಚಂದ್ರನ ಮೇಲ್ಮೈಗೆ ಇಳಿಯಲು ಕೇವಲ 3 ದಿನಗಳು ಮಾತ್ರ ಬಾಕಿ ಉಳಿದಿವೆ. ವಿಕ್ರಮ್ ಲ್ಯಾಂಡರ್ ಈಗ ತನ್ನ ಎತ್ತರವನ್ನು ಕಡಿಮೆ ಮಾಡುವುದರ ಜೊತೆಗೆ ವೇಗವನ್ನು ಸಹ ಕಡಿಮೆ ಮಾಡುತ್ತಿದೆ. ಚಂದ್ರಯಾನ-3 ತಡರಾತ್ರಿ 1.50ಕ್ಕೆ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ದಾಟಿದೆ ಮತ್ತು ತನ್ನ ಗಮ್ಯಸ್ಥಾನದಿಂದ ಕೇವಲ 25 ಕಿಲೋಮೀಟರ್ ದೂರದಲ್ಲಿದೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಆದರೆ ಇದೆಲ್ಲದರ ನಡುವೆ ರಷ್ಯಾದ ಮಿಷನ್ ಮೂನ್ ಹಿನ್ನಡೆ ಅನುಭವಿಸಿದೆ. ಭಾರತದ ಮಿಷನ್ ಚಂದ್ರಯಾನ-3 ಒಂದರ ಹಿಂದೆ ಒಂದರಂತೆ ಪ್ರತಿಯೊಂದು ಕಷ್ಟ ಮತ್ತು ಸವಾಲುಗಳನ್ನು ಮೆಟ್ಟಿನಿಂತು ಯಶಸ್ಸಿನ ಮೆಟ್ಟಿಲುಗಳನ್ನು ಏರುವ ಮೂಲಕ ತನ್ನ ಗಮ್ಯಸ್ಥಾನ ಮತ್ತು ಗುರಿಯತ್ತ ಸಾಗುತ್ತಿದೆ.


ಇದನ್ನೂ ಓದಿ: ಪಂಚಮಿ ಮುನ್ನಾದಿನವೇ ಅನುಗ್ರಹ ನೀಡಿ ಇಂದು ಈ ರಾಶಿಗೆ ಸಕಲ ಸಂಪತ್ತು ಕರುಣಿಸಲಿದ್ದಾನೆ ನಾಗಪ್ಪ!


ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ‘ಆಗಸ್ಟ್ 23’:  


ಇಂದು ಬೆಳಗಿನ ಜಾವ 1.50ಕ್ಕೆ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಡಿ-ಬೂಸ್ಟ್ ಮಾಡಲಾಗಿದ್ದು, ಚಂದ್ರಯಾನ-3 ಅನ್ನು ನಿಧಾನಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ಮಾಹಿತಿಯನ್ನು ಸ್ವತಃ ಇಸ್ರೋ ನೀಡಿದೆ. ಮತ್ತೊಂದೆಡೆ ಅಂತಿಮ ಡೀಬೂಸ್ಟಿಂಗ್ ಕಾರ್ಯಾಚರಣೆಯು LM ಕಕ್ಷೆಯನ್ನು 25 km x 134 km ಗೆ ಯಶಸ್ವಿಯಾಗಿ ತಗ್ಗಿಸಿದೆ. ಮಾಡ್ಯೂಲ್ ಆಂತರಿಕ ತಪಾಸಣೆಗೆ ಒಳಗಾಗಬೇಕಾಗುತ್ತದೆ ಮತ್ತು ಲ್ಯಾಂಡಿಂಗ್ ಸೈಟ್‌’ನಲ್ಲಿ ಸೂರ್ಯೋದಯಕ್ಕಾಗಿ ಕಾಯಬೇಕಾಗುತ್ತದೆ. ಇದು ಆಗಸ್ಟ್ 23 ರಂದು ಸಂಜೆ ಸುಮಾರು 45 ನಿಮಿಷಗಳಲ್ಲಿ ಇಳಿಯುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.


ಸೂರ್ಯೋದಯಕ್ಕಾಗಿ ಏಕೆ ಕಾಯುತ್ತಿದೆ ಗೊತ್ತಾ ಚಂದ್ರಯಾನ-3?


ಈ ಡೀಬೂಸ್ಟಿಂಗ್‌’ನೊಂದಿಗೆ, ವಿಕ್ರಮ್ ಲ್ಯಾಂಡರ್ ಚಂದ್ರನ ಅತ್ಯಂತ ಕಡಿಮೆ ಕಕ್ಷೆಯನ್ನು ತಲುಪಿದೆ. ಅದರ ನಂತರ ಈಗ ಚಂದ್ರನಿಂದ ಅದರ ಕನಿಷ್ಠ ದೂರ ಕೇವಲ 25 ಮತ್ತು ಗರಿಷ್ಠ ದೂರ 134 ಕಿಲೋಮೀಟರ್, ಅಂದರೆ ನಮ್ಮ ಚಂದ್ರಯಾನ ಈಗ ಚಂದ್ರನ ಬಾಗಿಲನ್ನು ಬಡಿಯುತ್ತಿದೆ ಎನ್ನಬಹುದು. ಚಂದ್ರಯಾನ-3 ಈಗ ಸೂರ್ಯನು ಚಂದ್ರನ ಮೇಲ್ಮೈಯಲ್ಲಿ ಉದಯಿಸಲು ಕಾಯುತ್ತಿದೆ. ಇದೀಗ ಚಂದ್ರನಲ್ಲಿ ರಾತ್ರಿಯಾಗಿದ್ದು, 23ರಂದು ಸೂರ್ಯೋದಯವಾಗಲಿದೆ. ವಿಕ್ರಮ್ ಲ್ಯಾಂಡರ್ ಸೂರ್ಯನ ಬೆಳಕು ಮತ್ತು ಶಕ್ತಿಯನ್ನು ಬಳಸಿಕೊಂಡು ತನ್ನ ಕಾರ್ಯಾಚರಣೆಯನ್ನು ಮುಂದಕ್ಕೆ ತೆಗೆದುಕೊಳ್ಳುತ್ತದೆ. ಎರಡೂ ರೋವರ್‌ಗಳು ವಿದ್ಯುತ್ ಉತ್ಪಾದಿಸಲು ಸೌರ ಫಲಕಗಳನ್ನು ಬಳಸುತ್ತವೆ. ಈ ಕಾರ್ಯಾಚರಣೆಯಲ್ಲಿ, ಪ್ರಗ್ಯಾನ್ ರೋವರ್ ಮುಂದಿನ 14 ದಿನಗಳವರೆಗೆ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ.


ಈ ಎಲ್ಲಾ ವಿಷಯಗಳ ನಡುವೆ ಒಂದು ವಿಷಯವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಯಾವುದೇ ಬಾಹ್ಯಾಕಾಶ ನೌಕೆಗೆ, ಚಂದ್ರನ ಮೇಲ್ಮೈಯಲ್ಲಿ ಇಳಿಯುವುದು ಕಷ್ಟ ಮತ್ತು ಸಾವಿರಾರು ಸವಾಲುಗಳಿಂದ ತುಂಬಿರುತ್ತದೆ. ಚಂದ್ರನ ಮೇಲ್ಮೈ ಅಸಮವಾಗಿದೆ ಮತ್ತು ಹೊಂಡಗಳು, ಕಲ್ಲುಗಳಿಂದ ತುಂಬಿದೆ. ಅಂತಹ ಮೇಲ್ಮೈಯಲ್ಲಿ ಇಳಿಯುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಮತ್ತೊಂದೆಡೆ ಆ ಸಮಯದಲ್ಲಿ ಬಾಹ್ಯಾಕಾಶ ನೌಕೆಯ ಒತ್ತಡದಿಂದ ಅನಿಲವು ಹೊರಬರುತ್ತದೆ. ಈ ಅನಿಲಗಳಿಂದಾಗಿ ಚಂದ್ರನ ಮೇಲ್ಮೈಯಿಂದ ದೊಡ್ಡ ಪ್ರಮಾಣದ ಧೂಳು ಬೀಸಬಹುದು. ಇದು ಆನ್‌’ಬೋರ್ಡ್ ಕಂಪ್ಯೂಟರ್‌ಗಳು ಮತ್ತು ಸಂವೇದಕಗಳನ್ನು ಹಾನಿಗೊಳಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.


ಇದಲ್ಲದೆ, ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಹೆಚ್ಚಿನ ಪ್ರಮಾಣದ ಇಂಧನದ ಅಗತ್ಯವಿರುತ್ತದೆ. ಅದರ ಮೂಲಕ ವಿರುದ್ಧ ದಿಕ್ಕಿನ ಬಲವನ್ನು ಅನ್ವಯಿಸಿ, ಇಳಿಯುವಿಕೆಯ ವೇಗವನ್ನು ಕಡಿಮೆ ಮಾಡುತ್ತದೆ. ಆದರೆ, ಹೆಚ್ಚು ಇಂಧನದೊಂದಿಗೆ ಹಾರಾಟವು ಅಪಾಯಕಾರಿ. ಚಂದ್ರನ ವಾತಾವರಣವು ಭೂಮಿಗಿಂತ 8 ಪಟ್ಟು ತೆಳ್ಳಗಿರುತ್ತದೆ.


ಇದೆಲ್ಲದರ ನಡುವೆ ಹಳೇ ತಪ್ಪುಗಳಿಂದ ಪಾಠ ಕಲಿಯುತ್ತಿರುವ ಇಸ್ರೋ ಅಪ್ಪಿತಪ್ಪಿಯೂ ತಪ್ಪಾಗದಂತೆ ಸಂಪೂರ್ಣ ವ್ಯವಸ್ಥೆ ಮಾಡಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ವಿಜ್ಞಾನಿಗಳು ಚಂದ್ರಯಾನ-3 ಮಿಷನ್‌’ನ ಯಶಸ್ಸಿಗಾಗಿ ಲ್ಯಾಂಡರ್‌’ನ ತಂತ್ರಜ್ಞಾನದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದಾರೆ.


ಇದನ್ನೂ ಓದಿ: 13 ವರ್ಷಗಳ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್!


ವಿಕ್ರಮ್ ಲ್ಯಾಂಡರ್‌’ನ ಕಾಲುಗಳನ್ನು ತುಂಬಾ ಬಲವಾಗಿ ಮಾಡಲಾಗಿದೆ. ಹೀಗಿದ್ದಾಗ ಲ್ಯಾಂಡಿಂಗ್ ಸಂದರ್ಭದಲ್ಲಿ ದೊಡ್ಡ ಹೊಂಡಗಳಿದ್ದರೂ ಸಹ ಸಮಸ್ಯೆ ಎದುರಾಗುವುದಿಲ್ಲ. ಇನ್ನು ಲ್ಯಾಂಡರ್ ಹೊರಗೆ ವಿಶೇಷ ಕ್ಯಾಮೆರಾ ಅಳವಡಿಸಲಾಗಿದೆ. ಇದನ್ನು ಲೇಸರ್ ಡಾಪ್ಲರ್ ವೆಲೋಸಿಮೀಟರ್ ಎಂದು ಕರೆಯಲಾಗುತ್ತದೆ. ಈ ಲೇಸರ್ ನ ಬೆಳಕು ನಿರಂತರವಾಗಿ ಚಂದ್ರನನ್ನು ಸ್ಪರ್ಶಿಸುತ್ತಿರುತ್ತದೆ. ಇಸ್ರೋದ ನಿಯಂತ್ರಣ ಕೊಠಡಿಯಲ್ಲಿ ಕುಳಿತಿರುವ ವಿಜ್ಞಾನಿ ಇದರ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.