ನವದೆಹಲಿ: ದೇಶದ ಯಾವುದೇ ಓರ್ವ ನಾಗರಿಕನಿಗೆ ಸಂಬಂಧಿಸಿದ ಅತಿ ಮುಖ್ಯ ದಾಖಲೆ ಎಂದರೆ ಅದು ಆಧಾರ್ ಕಾರ್ಡ್ ಎಂಬುದು ನಮ್ಮ ನಿಮ್ಮೆಲ್ಲರಿಗೂ ತಿಳಿದ ವಿಷಯವಾಗಿದೆ. ಎಲ್ಲ ರೀತಿಯ ಸರ್ಕಾರಿ ಲಾಭ ಪಡೆಯಲು ಆಧಾರ್ ಕಾರ್ಡ್ ಅವಶ್ಯಕವಾಗಿದೆ. ಆದರೆ, ಹಲವು ಬಾರಿ ಆಧಾರ್ ಕಾರ್ಡ್ ಮೇಲೆ ತಪ್ಪಾಗಿ ನಮೂದಾಗಿರುವ ಮಾಹಿತಿಯ ಹಿನ್ನೆಲೆ ಜನರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಈ ರೀತಿಯ ತೊಂದರೆಗಳಿಂದ ಪಾರಾಗಲು ಏನು ಮಾಡಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ವಿಳಾಸ ಸರಿಯಾಗಿ ನಮೂದಾಗಿಲ್ಲ ಹಾಗೂ ಅದನ್ನು ನೀವು ಬದಲಾಯಿಸಲು ಬಯಸುತ್ತಿದ್ದರೆ. ನೀವು ಮನೆಯಲ್ಲಿಯೇ ಕುಳಿತು ಅದನ್ನು ಸರಿಪಡಿಸಬಹುದು.


COMMERCIAL BREAK
SCROLL TO CONTINUE READING

ವಿಳಾಸ ಬದಲಾವಣೆ ಹೇಗೆ?
ಒಂದು ವೇಳೆ ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ವಿಳಾಸವನ್ನು ಬದಲಾಯಿಸಲು ಬಯಸುತ್ತಿದ್ದರೆ ಹೆದರಬೇಕಾದ ಅವಶ್ಯಕತೆ ಇಲ್ಲ. ಆಧಾರ್ ಕಾರ್ಡ್ ನಲ್ಲಿ ತಮ್ಮ ವಿಳಾಸ ಬದಲಾಯಿಸಲು ಬಯಸುವರಿಗಾಗಿ UIDAI ಒಂದು ಮಹತ್ವಪೂರ್ಣ ಸೌಕರ್ಯ ಒದಗಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಾಧಿಕಾರ ಈ ಕುರಿತು ಮಾಹಿತಿ ನೀಡಿದೆ.


ತನ್ನ ಟ್ವೀಟ್ ನಲ್ಲಿ ಮಾಹಿತಿ ನೀಡಿರುವ UIDAI, ಮೊದಲು ಜನರಿಗೆ ತಮ್ಮ ಆಧಾರ್ ಕಾರ್ಡ್ ಮೇಲೆ ನಮೂದಾಗಿರುವ ವಿಳಾಸ ಬದಲಾವಣೆ ಮಾಡಲು ಅಧಾರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಕ್ಯೂನಲ್ಲಿ ನಿಲ್ಲಬೇಕಾಗುತ್ತಿತ್ತು. ಆದರೆ, ಇದೀಗ ಜನರು ತಮ್ಮ ಮನೆಯಲ್ಲಿಯೇ ಕುಳಿತು ಆಧಾರ್ ಕಾರ್ಡ್ ವಿಳಾಸವನ್ನು ಬದಲಾಯಿಸಬಹುದಾಗಿದೆ.



ಇಲ್ಲಿದೆ ವಿಧಾನ
ಆಧಾರ್ ವಿಳಾಸ ಬದಲಾವಣೆಗೆ ಮೊದಲು ನೀವು UIDDAIನ ಅಧಿಕೃತ ವೆಬ್ ಸೈಟ್ ಆಗಿರುವ https://uidai.gov.in/ಗೆ ಭೇಟಿ ನೀಡಬೇಕು. ಬಳಿಕ My Aadhaar ಟ್ಯಾಬ್ ಮೇಲೆ ಕ್ಲಿಕ್ಕಿಸಿ, Update your aadhaar ಹಾಗೂ Update your address online ಮೇಲೆ ಕ್ಲಿಕ್ಕಿಸಬೇಕು. ಇದಾದ ಬಳಿಕ Proceed update address ಮೇಲೆ ಕ್ಲಿಕ್ಕಿಸಿ. ನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಿ, Send OTP ಮೇಲೆ ಕ್ಲಿಕ್ಕಿಸಿ. ಈಗ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಬರುವ OTP ನಮೂದಿಸಿ ಲಾಗಿನ್ ಮೇಲೆ ಕ್ಲಿಕ್ಕಿಸಿ.


ಇದಾದ ನಂತರ ಅಲ್ಲಿರುವ Update address via address proof ಮೇಲೆ ಕ್ಲಿಕ್ಕಿಸಿ ನಿಮ್ಮ ಸರಿಯಾದ ವಿಳಾಸವನ್ನು ಭರ್ತಿ ಮಾಡಿ. ಈಗ ನಿಮಗೆ ಹೇಳಲಾಗಿರುವ ದಾಖಲೆಯ ಕಲರ್ ಫೋಟೋ ಅನ್ನು ಮೊಬೈಲ್ ಮೂಲಕ ಕ್ಲಿಕ್ಕಿಸಿ ಅಪ್ಲೋಡ್ ಮಾಡಿ ಪ್ರಕ್ರಿಯಯನ್ನು ಪೂರ್ಣಗೊಳಿಸಿ. ಇದಾದ ಬಳಿಕ ವೆರಿಫಿಕೆಶನ್ ಪ್ರಕ್ರಿಯೆ ನಡೆದು ನೀವು ನಮೂದಿಸಿರುವ ಹೊಸ ವಿಳಾಸ ನಿಮ್ಮ ಆಧಾರ್ ಕಾರ್ಡ್ ಮೇಲೆ ಬರಲಿದೆ.