ಕೇಂದ್ರದ ಮೋದಿ ಸರ್ಕಾರ ಭಾರತದ ಧ್ವಜ ಸಂಹಿತೆಯಲ್ಲಿ ಬದಲಾವಣೆ ಮಾಡಿದೆ. ಈ ಹೊಸ ನೀತಿಯಡಿ ಈಗ ದೇಶದ ರಾಷ್ಟ್ರಧ್ವಜ, ತ್ರಿವರ್ಣ ಧ್ವಜವನ್ನು ಹಗಲು ರಾತ್ರಿ ಎರಡು ಬಾರಿ ಹಾರಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಈಗ ಪಾಲಿಯೆಸ್ಟರ್ ಮತ್ತು ಯಂತ್ರ ನಿರ್ಮಿತ ರಾಷ್ಟ್ರಧ್ವಜವನ್ನು ಸಹ ಬಳಸಬಹುದಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮತ್ತೆ ತರಕಾರಿ ಬೆಲೆಯಲ್ಲಿ ಭಾರೀ ವ್ಯತ್ಯಯ: ಹೀಗಿದೆ ನೋಡಿ ಈರುಳ್ಳಿ, ಟೊಮ್ಯಾಟೋ ಬೆಲೆ


‘ಹರ್ ಘರ್ ತಿರಂಗ’ ಕಾರ್ಯಕ್ರಮದ ಅಡಿಯಲ್ಲಿ ಈ ಹೆಜ್ಜೆ: 
ಆಜಾದಿ ಕಾ ಅಮೃತ್ ಮಹೋತ್ಸವ’ದಡಿ ಆಗಸ್ಟ್ 13 ರಿಂದ 15 ರವರೆಗೆ ‘ಹರ್ ಘರ್ ತಿರಂಗ’ ಕಾರ್ಯಕ್ರಮವನ್ನು ಸರ್ಕಾರ ಆರಂಭಿಸಲಿದ್ದು, ಈ ಹಿನ್ನೆಲೆಯಲ್ಲಿ ಈ ಹೆಜ್ಜೆ ಮುನ್ನೆಲೆಗೆ ಬಂದಿದೆ. ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಭಾರತೀಯ ರಾಷ್ಟ್ರಧ್ವಜದ ಪ್ರದರ್ಶನ, ಹಾರಾಟ ಮತ್ತು ಬಳಕೆಯು ಭಾರತೀಯ ಧ್ವಜ ಸಂಹಿತೆ-2002 ಮತ್ತು ಪ್ರಿವೆಂನ್ಶನ್‌ ಆಫ್‌ ಇನ್‌ಸಲ್ಟ್‌ ಟು ನ್ಯಾಷನಲ್‌ ಪ್ರೈಡ್‌ ಆಕ್ಟ್‌ (Prevention of Insults to National Pride Act 1971) ಅಡಿಯಲ್ಲಿ ಬರುತ್ತದೆ ಎಂದಿದ್ದಾರೆ. 


ಜುಲೈ 20 ರಂದು ಹೊರಡಿಸಿದ ಆದೇಶ: 
ಪತ್ರದ ಪ್ರಕಾರ, ಭಾರತದ ಧ್ವಜ ಸಂಹಿತೆ 2002 ಅನ್ನು ಜುಲೈ 20, 2022 ದಿನಾಂಕದ ಆದೇಶದ ಮೂಲಕ ತಿದ್ದುಪಡಿ ಮಾಡಲಾಗಿದೆ. ಈಗ ಭಾರತದ ಧ್ವಜ ಸಂಹಿತೆ 2002 ರ ಭಾಗ II ರ ಪ್ಯಾರಾ 2.2 ರ ಷರತ್ತು (11) ಅನ್ನು ಈಗ ಈ ಕೆಳಗಿನಂತೆ ಓದಬೇಕು: ಎಲ್ಲಿ ಧ್ವಜವನ್ನು ತೆರೆದ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತದೆ ಅಥವಾ ನಾಗರಿಕರ ಮನೆಯಲ್ಲಿ ಪ್ರದರ್ಶಿಸಲಾಗುತ್ತದೆ. ಅದನ್ನು ಹಗಲು-ರಾತ್ರಿ ಹಾರಿಸಬಹುದು. ಮೊದಲು, ತ್ರಿವರ್ಣ ಧ್ವಜವನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಹಾರಿಸಲು ಅನುಮತಿಸಲಾಗಿತ್ತು. ಈಗ ಈ ವಿಚಾರದಲ್ಲಿ ಬದಲಾವಣೆ ಮಾಡಲಾಗಿದೆ. 


ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ: ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ


ಪಾಲಿಯೆಸ್ಟರ್‌ನಿಂದ ಮಾಡಿದ ತ್ರಿವರ್ಣ: 
ಧ್ವಜ ಸಂಹಿತೆಯ ಮತ್ತೊಂದು ನಿಬಂಧನೆಯನ್ನು ತಿದ್ದುಪಡಿ ಮಾಡಲಾಗಿದ್ದು, "ರಾಷ್ಟ್ರಧ್ವಜವನ್ನು ಕೈಯಿಂದ ಅಥವಾ ಯಂತ್ರದ ಸಹಾಯದಿಂದ ತಯಾರಿಸಲಾಗುತ್ತದೆ. ಇದನ್ನು ಹತ್ತಿ, ಪಾಲಿಯೆಸ್ಟರ್, ಉಣ್ಣೆ, ರೇಷ್ಮೆ ಖಾದಿಯಿಂದ ಮಾಡಲಾಗುವುದು. ಈ ಹಿಂದೆ ಯಂತ್ರದಿಂದ ತಯಾರಿಸಿದ ಮತ್ತು ಪಾಲಿಯೆಸ್ಟರ್ ತಯಾರಿಸಿದ ರಾಷ್ಟ್ರಧ್ವಜ ಬಳಕೆಗೆ ಅವಕಾಶವಿರಲಿಲ್ಲ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.