ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ: ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ

ಈ ಸಾಧನೆ ಭಾರತದ ಪಾಲಿಗೆ ಹೆಮ್ಮೆ ಎಂದೆನ್ನಬಹುದು. ಏಕೆಂದರೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್‌ ಚೋಪ್ರಾ ಭಾಜನರಾಗಿದ್ದಾರೆ. 

Written by - Bhavishya Shetty | Last Updated : Jul 24, 2022, 09:10 AM IST
  • ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನೀರಜ್ ಚೋಪ್ರಾ ಸಾಧನೆ
  • ಜಾವೆಲಿನ್‌ ಥ್ರೋನಲ್ಲಿ ಬೆಳ್ಳಿ ಗೆದ್ದ ಭಾರತದ ಕುವರ
  • ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ
ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ: ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ title=
Neeraj Chopra

World Athletics Championships 2022: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನೀರಜ್ ಚೋಪ್ರಾ ಅದ್ಭುತ ಪ್ರದರ್ಶನ ನೀಡಿದ್ದು, ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಸಾಧನೆ ಭಾರತದ ಪಾಲಿಗೆ ಹೆಮ್ಮೆ ಎಂದೆನ್ನಬಹುದು. ಏಕೆಂದರೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್‌ ಚೋಪ್ರಾ ಭಾಜನರಾಗಿದ್ದಾರೆ.

ಇದನ್ನೂ ಓದಿ: ನಿಮ್ ಬಾಸ್ ಗೊತ್ತಿಲ್ಲ‌ ಎಂದಿದ್ದಕ್ಕೆ ಕೊಂದೇಬಿಟ್ರು : ಕೊಲೆ ಹಿಂದೆ ನಟೋರಿಯಸ್ ರೌಡಿಶೀಟರ್ ಶಿಷ್ಯರು

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನೀರಜ್ ಚೋಪ್ರಾ ಅವರ ಚೊಚ್ಚಲ ಪಂದ್ಯ ಉತ್ತಮವಾಗಿರಲಿಲ್ಲ. ನೀರಜ್ ಚೋಪ್ರಾ ಅವರ ಮೊದಲ ಎಸೆತವು ಫೌಲ್ ಎಂದು ಸಾಬೀತಾಯಿತು. ಮೊದಲ ಪ್ರಯತ್ನದಲ್ಲಿಯೇ ವಿಫಲರಾದ ಚೋಪ್ರಾ, ಎರಡನೇ ಸುತ್ತಿನಲ್ಲಿ ಜಾವೆಲಿನ್ ಅನ್ನು 82.39 ಮೀಟರ್ ದೂರಕ್ಕೆ ಎಸೆದರು. ಇನ್ನು ಮೂರನೇ ಸುತ್ತಿನಲ್ಲಿ ತಮ್ಮ ಪ್ರದರ್ಶನವನ್ನು ಸುಧಾರಿಸಿದ್ದರು. ಈ ಸುತ್ತಿನಲ್ಲಿ 86.37 ಮೀಟರ್ ದೂರಕ್ಕೆ ಜಾವೆಲಿನ್‌ ಎಸೆದು ಪದಕ ಗೆಲ್ಲುವ ಭರವಸೆ ಮೂಡಿಸಿದರು. ಇನ್ನು ನಾಲ್ಕನೇ ಪ್ರಯತ್ನದಲ್ಲಿ, ನೀರಜ್ ಶ್ರಮವನ್ನೆಲ್ಲಾ ಒಗ್ಗೂಡಿಸಿ ಬರೋಬ್ಬರಿ 88.13 ಮೀ ದೂರಕ್ಕೆ ಜಾವೆಲಿನ್‌ ಎಸೆಯುವ ಮೂಲಕ ಪದಕ ಗೆಲ್ಲುವ ರೇಸ್‌ಗೆ ಪ್ರವೇಶಿಸಿದರು. ಆ ಬಳಿಕ ನಡೆದ ಐದು ಮತ್ತು ಆರನೇ ಸುತ್ತಿನಲ್ಲಿ ಚೋಪ್ರಾ ಎಸೆದ ಜಾವೆಲಿನ್‌ ಫೌಲ್‌ ಆಗಿತ್ತು. ಹೀಗಾಗಿ ಬೆಳ್ಳಿ ಪದಕಕ್ಕೆ ಸಂತೃಪ್ತಿ ಪಡೆಯುವಂತಾಯಿತು.

ಪದಕ ಗೆದ್ದ ಮೊದಲ ಭಾರತೀಯ: 

18 ವರ್ಷಗಳ ಹಿಂದೆ ಭಾರತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿತ್ತು. 2003ರಲ್ಲಿ ಅನುಭವಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಲಾಂಗ್ ಜಂಪ್ ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಅನ್ನು ಮೊದಲು 1983 ರಲ್ಲಿ ಆಯೋಜಿಸಲಾಯಿತು. ಅಂದಿನಿಂದ ಭಾರತಕ್ಕೆ ಈ ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಕ್ವಾಲಿಫೈಯರ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಮೊದಲ ಥ್ರೋನಲ್ಲಿ 88.39 ಮೀಟರ್‌ಗಳನ್ನು ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಫೈನಲ್‌ಗೆ ಲಗ್ಗೆ ಇಟ್ಟರು. ಇದೀಗ ಈ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಪುರುಷ ಆಟಗಾರ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪಿಎಸ್ಐ ಹಗರಣ ಕಾಂಗ್ರೆಸ್ ಪಕ್ಷದ ಕೂಸು : ಬಿವೈ  ವಿಜಯೇಂದ್ರ

ನೀರಜ್-ಆ್ಯಂಡರ್ಸನ್ ನಡುವೆ ರೋಚಕ ಹೋರಾಟ: 

ವಿಶ್ವದ ನಂಬರ್ ಒನ್ ಗ್ರೆನಡಾದ ಜಾವೆಲಿನ್ ಎಸೆತಗಾರ ಆ್ಯಂಡರ್ಸನ್ ಪೀಟರ್ಸ್ ಮತ್ತು ವಿಶ್ವದ ನಾಲ್ಕನೇ ಶ್ರೇಯಾಂಕದ ನೀರಜ್ ಚೋಪ್ರಾ ನಡುವೆ ರೋಚಕ ಸ್ಪರ್ಧೆ ಏರ್ಪಟ್ಟಿತ್ತು. ಪ್ರಸಕ್ತ ಋತುವಿನ ಕಳೆದ ಕೆಲವು ಪಂದ್ಯಗಳಲ್ಲಿ ಇಬ್ಬರ ನಡುವೆ ಪ್ರಚಂಡ ಪೈಪೋಟಿ ಏರ್ಪಟ್ಟಿತ್ತು. ಗ್ರೆನಡಾದ ಆಂಡರ್ಸನ್ ಪೀಟರ್ಸ್ ಚಿನ್ನದ ಪದಕ ಗೆದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News