Cheetah Daksha Died: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚಿರತೆ ಸಾವು!
Cheetah Daksha Died: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚಿರತೆ ಸಾವನ್ನಪ್ಪಿದೆ. ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ದಕ್ಷ ಎಂಬ ಹೆಣ್ಣು ಚಿರತೆ ಮೃತಪಟ್ಟಿರುವುದಾಗಿ ಮಧ್ಯಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್.ಚೌಹ್ಹಾಣ್ ತಿಳಿಸಿದ್ದಾರೆ.
ಮಧ್ಯಪ್ರದೇಶ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಿಂದ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಹೆಣ್ಣು ಚಿರತೆ ದಕ್ಷ ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಗಾಯಗೊಂಡ ಸ್ಥಿತಿಯಲ್ಲಿದ್ದ ಹೆಣ್ಣು ಚಿರತೆ ದಕ್ಷಗೆ ಕುನೋ ರಾಷ್ಟ್ರೀಯ ಉದ್ಯಾನವನದ ನಿಗಾ ತಂಡವು ಚಿಕಿತ್ಸೆ ನೀಡುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ ಎಂದು ಮಧ್ಯಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್.ಚೌಹ್ಹಾಣ್ ತಿಳಿಸಿದ್ದಾರೆ.
ಹೆಣ್ಣು ಚಿರತೆ ದಕ್ಷ ಹೇಗೆ ಸಾವನ್ನಪ್ಪಿತ್ತು?
ಹೆಣ್ಣು ಚಿರತೆ ದಕ್ಷ ದೇಹದ ಮೇಲೆ ಗಾಯಗಳ ಗುರುತುಗಳು ಕಂಡುಬಂದಿದ್ದವು. ಪ್ರಾಥಮಿಕವಾಗಿ ಇದು ಇನ್ನುಳಿದ ಚಿರತೆಗಳ ಕಾದಾಟದಿಂದ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ. ಮಿಲನದ ಸಮಯದಲ್ಲಿ ಹೆಣ್ಣು ಚಿರತೆ ದಕ್ಷ ಮೇಲೆ ಗಂಡು ಚಿರತೆ ದಾಳಿ ಮಾಡಿರಬಹುದು. ಇದರಿಂದ ಆಕೆಗೆ ಗಂಭೀರ ಗಾಯಗಳಾಗಿರಬಹುದು ಎಂದು ಅರಣ್ಯ ಸಿಬ್ಬಂದಿ ಹೇಳಿದ್ದಾರೆ.
ಇದನ್ನೂ ಓದಿ: ದೀದಿ ವಿರುದ್ಧ ಕೇಸ್ ದಾಖಲಿಸಲು ಮುಂದಾದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
ಮಧ್ಯಪ್ರದೇಶದಲ್ಲಿ 2 ತಿಂಗಳಲ್ಲಿ 3ನೇ ಚಿರತೆ ಸಾವು
ಮಧ್ಯಪ್ರದೇಶದಲ್ಲಿ 2 ತಿಂಗಳಲ್ಲಿ 3ನೇ ಚಿರತೆ ಸಾವನ್ನಪ್ಪಿದೆ ಎಂದು ಜೆ.ಎಸ್.ಚೌಹಾಣ್ ಹೇಳಿದ್ದಾರೆ. ಈ ಹಿಂದೆ ಮಾರ್ಚ್ 27ರಂದು ತಾಯಿ ಚೀತಾ ಸಾಶಾ ಸಾವನ್ನಪ್ಪಿತ್ತು. ಇದನ್ನು2022ರ ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ಭಾರತಕ್ಕೆ ತರಲಾಗಿತ್ತು. ಸಾಯುವ ಸಮಯದಲ್ಲಿ ಸಾಶಾ ಕೂಡ ಗರ್ಭಿಣಿಯಾಗಿತ್ತು. ಇದರ ನಂತರ ಏಪ್ರಿಲ್ 23ರಂದು ದಕ್ಷಿಣ ಆಫ್ರಿಕಾದಿಂದ ತರಲಾದ ಉದಯ್ ಎಂಬ ಚಿರತೆಯು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸಾವನ್ನಪ್ಪಿತು. ನಂತರ ಉದಯ್ ಸಾವಿಗೆ ಅನಾರೋಗ್ಯ ಕಾರಣ ಎಂಬುದು ತಿಳಿದುಬಂದಿತ್ತು.
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 17 ಚಿರತೆ
ಮಧ್ಯಪ್ರದೇಶದ ಶಿಯೋಪುರದಲ್ಲಿರುವ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಈಗ 17 ಚಿರತೆಗಳು ಉಳಿದಿವೆ. ನಮೀಬಿಯಾದಿಂದ 8 ಚಿರತೆಗಳನ್ನು ಭಾರತಕ್ಕೆ ತರಲಾಯಿತು. ಪ್ರಧಾನಿ ಮೋದಿಯವರು ತಮ್ಮ ಜನ್ಮದಿನದ ಸಂದರ್ಭದಲ್ಲಿ 2022ರ ಸೆಪ್ಟೆಂಬರ್ 17ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದ್ದರು. ಇದರ ನಂತರ ಫೆಬ್ರವರಿ 18ರಂದು ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳನ್ನು ಭಾರತಕ್ಕೆ ತರಲಾಯಿತು. ಇದಲ್ಲದೇ 4 ಚಿರತೆಯ ಮರಿಗಳಿವೆ, ಇವುಗಳಿಗೆ ಇತ್ತೀಚೆಗೆ ನಮೀಬಿಯಾದಿಂದ ತರಲಾಗಿದ್ದ ಜ್ವಾಲಾ ಜನ್ಮ ನೀಡಿದೆ.
ಇದನ್ನೂ ಓದಿ: Viral News: ತಂಗಿ ಜೊತೆ ಹಾರ ಬದಲಾಯಿಸಿಕೊಂಡು ಅಕ್ಕನಿಗೆ ತಾಳಿ ಕಟ್ಟಿದ ಭೂಪ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.