ರಾಯಪುರ: ಛತ್ತೀಸ್‌ಗಢದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಪೊಲೀಸರಿಗೆ ಡಬಲ್ ದಂಡ ವಿಧಿಸಲಾಗುವುದು ಎಂದು ವಿಶೇಷ ಪೊಲೀಸ್ ಮಹಾನಿರ್ದೇಶಕ ಆರ್. ಕೆ. ವಿಜ್ ತಿಳಿಸಿದ್ದಾರೆ. ಪೊಲೀಸರು ತಿದ್ದುಪಡಿ ಮಾಡಿದ ಮೋಟಾರು ವಾಹನ ನಿಯಮಗಳನ್ನು ಉಲ್ಲಂಘಿಸಿದರೆ, ನಿಯಮಗಳ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿಜ್ ಆದೇಶ ಹೊರಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಟ್ರಾಫಿಕ್ ನಿಯಮಗಳ ಅನುಸರಣೆಯನ್ನು ಖಾತರಿಪಡಿಸುವ ಜವಾಬ್ದಾರಿಯನ್ನು ಹೊಂದಿರುವ ಯಾವುದೇ ಅಧಿಕಾರಿ ಮತ್ತು ಉದ್ಯೋಗಿ, ಈ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ, ಹೊಸ ಮೋಟಾರು ವಾಹನ ಕಾಯ್ದೆಯ ದುಪ್ಪಟ್ಟು ಮೊತ್ತವನ್ನು ವಿಧಿಸಲಾಗುವುದು ಎಂದು ವಿಜ್ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.


ಹೊಸ ನಿಯಮಗಳ ಪ್ರಕಾರ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕರಿಂದ ಹಲವಾರು ಪಟ್ಟು ಹೆಚ್ಚು ದಂಡ ವಿಧಿಸುವ ಅವಕಾಶವಿದೆ. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವಾಗ ಹಿಡಿದರೆ 25 ಸಾವಿರ ರೂಪಾಯಿ ದಂಡ ಮತ್ತು ವಾಹನದ ಮಾಲೀಕರಿಗೆ ಮೂರು ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ ಆ ವಾಹನದ ನೋಂದಣಿಯೂ ರದ್ದುಗೊಳ್ಳುತ್ತದೆ. ಈ ಹಿಂದೆ ಅಪ್ರಾಪ್ತ ವಯಸ್ಕರು ವಾಹನವನ್ನು ಓಡಿಸಿದರೆ ಯಾವುದೇ ದಂಡವಿರಲಿಲ್ಲ.


ಇದಲ್ಲದೆ, ತುರ್ತು ವಾಹನಕ್ಕೆ ದಾರಿ ನೀಡದಿದ್ದರೆ ಇದುವರೆಗೆ ಯಾವುದೇ ದಂಡ ವಿಧಿಸುತ್ತಿರಲಿಲ್ಲ. ಆದರೆ ಈಗ 10,000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ. ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡಿದರೆ ಈ ಹಿಂದೆ ವಿಧಿಸಲಾಗುತ್ತಿದ್ದ 1000 ರೂ. ದಂಡವನ್ನು ಐದು ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ.