Chhattisgarh: Bijapur-Sukma Naxal Encounter Updates - ಛತ್ತಿಸ್ಗಡ್ ದ ನಕ್ಸಲ್ ಪ್ರಭಾವಿತ ಬಿಜಾಪುರ್ ಹಾಗೂ ಸುಕ್ಮಾ ಜಿಲ್ಲೆಗಳ ಗಡಿಭಾಗದಲ್ಲಿ ನಕ್ಸಲರ ವಿರುದ್ಧ ನಡೆದ ಎನ್ಕೌಂಟರ್ ನಲ್ಲಿ ಇಂದು ಅಂದರೆ ಭಾನುವಾರ ಮತ್ತೆ 17 ಜನ ಭದ್ರತಾಪಡೆ ಯೋಧರ ಮೃತದೇಹಗಳು ಪತ್ತೆಯಾಗಿವೆ. ಶನಿವಾರ ನಕ್ಸಲರ ವಿರುದ್ಧ ನಡೆದ ಎನ್ಕೌಂಟರ್ ಬಳಿಕ 21 ಜನ ಯೋಧರು ನಾಪತ್ತೆಯಾಗಿದ್ದರು. ಆದರೆ ಇಂದು ನಡೆಸಲಾಗಿರುವ ಸರ್ಚ್ ಆಪರೇಶನ್ ವೇಳೆ ಘರ್ಷಣೆ ನಡೆದ ಸ್ಥಳದಲ್ಲಿ 17 ಯೋಧರ ಶವಗಳು ಪತ್ತೆಯಾಗಿವೆ. ನಿನ್ನೆ ರಾತ್ರಿ ನಡೆಸಲಾಗಿದ್ದ ಸರ್ಚ್ ಆಪರೇಶನ್ ನಲ್ಲಿ ಐವರು ಯೋಧರ ಶವ ಪತ್ತೆಯಾಗಿದ್ದು, ಎನ್ಕೌಂಟರ್(Chhattisgarh Encounter) ನಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 22 ಕ್ಕೆ ತಲುಪಿದ್ದು, ಗಾಯಗೊಂಡ ಯೋಧರ ಸಂಖ್ಯೆ 30ಕ್ಕೆ ತಲುಪಿದೆ.


Chhattisgarh: ನಕ್ಷಲರು ಹಾಗೂ ಭದ್ರತಾಪಡೆಗಳ ನಡುವೆ ಘರ್ಷಣೆ, 5 ಜವಾನರು ಹುತಾತ್ಮ


COMMERCIAL BREAK
SCROLL TO CONTINUE READING

ಸುದ್ದಿ ಸಂಸ್ಥೆ ANIನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಬಿಜಾಪುರ್ ಜಿಲ್ಲೆಯ SP ಕಮಲೋಚನ್ ಕಶ್ಯಪ್ ಈ ಸುದ್ದಿಯನ್ನು ಪುಷ್ಟೀಕರಿಸಿದ್ದಾರೆ (Sukma Encounter Latest Updates) ಎನ್ನಲಾಗಿದೆ.  ಇದೆ ವೇಳೆ ಘಟನಾ ಸ್ಥಳದಲ್ಲಿ ಓರ್ವ ಮಹಿಳಾ ನಕ್ಸಲ್ ಶವ ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಹಲವು ನಕ್ಸಲರು ಕೂಡ ಈ ಮುಖಾಮುಖಿಯ (Chhattisgarh Naxal Attack) ವೇಳೆ ಮೃತಪಟ್ಟಿದ್ದು, ಕೆಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ- Corona ನಿಯಂತ್ರಣ ಹೇಗೆ? ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ


ಶನಿವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಜೋನಾಗುಡಾ ಗ್ರಾಮದ ಬಳಿ ನಕ್ಸಲರು ಹಾಗೂ ಪೀಪಲ್ಸ್ ಲಿಬರೇಶನ್ ಗುರಿಲ್ಲಾ ಆರ್ಮಿ ಬಟಾಲಿಯನ್ ಹಾಗೂ ತರರೆಮ್ ನ ಭದ್ರತಾಪಡೆಗಳ ನಡುವೆ ಮುಖಾಮುಖಿ (Sukma Encounter) ಸಂಭವಿಸಿತ್ತು. ಈ ಎನ್ಕೌಂಟರ್ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ನಡೆದಿದೆ. ಈ ಎನ್ಕೌಂಟರ್ ನಲ್ಲಿ ಓರ್ವ ಕೋಬ್ರಾ ಬಟಾಲಿಯನ್ ನ ಓರ್ವ ಜವಾನ ಹುತಾತ್ನನಾಗಿದ್ದರೆ, ಬಸ್ತರಿಯಾ ಬಟಾಲಿಯನ್ ನ ಎರಡು DRGಗೆ ಸೇರಿದ ಇಬ್ಬರು ಜವಾನರು (ಒಟ್ಟು ಐವರು) ಹುತಾತ್ಮರಾಗಿದ್ದರು. ಈ ಮುಖಾಮುಖಿಯಲ್ಲಿ ಒಟ್ಟು 30 ಯೋಧರು ಗಾಯಗೊಂಡಿದ್ದು, ಅವರಲ್ಲಿ 7 ಯೋಧರನ್ನು ರಾಯಪುರ್ ಹಾಗೂ 23 ಯೋಧರನ್ನು ಬಿಜಾಪುರ್ ಆಸ್ಪತ್ರೆಗೆ ದಾಖಲಿಸಲಾಗಿದೆ. 


ಇದನ್ನೂ ಓದಿ-Cronavirus Update : ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು COVID-19 ಪ್ರಕರಣಗಳು ದಾಖಲು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.