Chhattisgarh: ನಕ್ಷಲರು ಹಾಗೂ ಭದ್ರತಾಪಡೆಗಳ ನಡುವೆ ಘರ್ಷಣೆ, 5 ಜವಾನರು ಹುತಾತ್ಮ

Chattisgarh: Encounter - ಛತ್ತಿಸ್ಗಡ್ ದಲ್ಲಿ ಮತ್ತೊಮ್ಮೆ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ಎನ್ಕೌಂಟರ್ ಸಂಭವಿಸಿದೆ. ಬಿಜಾಪುರ್ ಜಿಲ್ಲೆಯಲ್ಲಿ ನಡೆದ ಈ ಎನ್ಕೌಂಟರ್ ನಲ್ಲಿ ಐವರು ಜವಾನರು ಹುತಾತ್ಮರಾಗಿದ್ದಾರೆ.

Written by - Nitin Tabib | Last Updated : Apr 3, 2021, 09:37 PM IST
  • ತರರೆಮ್ ಅರಣ್ಯ ಪ್ರದೇಶದಲ್ಲಿ ಮುಂದುವರೆದ ಎನ್ಕೌಂಟರ್
  • ನಕ್ಸಲರ ಶೋಧ ಕಾರ್ಯ ಮುಂದುವರೆದಿದೆ.
  • ಅರಣ್ಯದಲ್ಲಿ ಇನ್ನೂ ಘರ್ಷಣೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ SP.
Chhattisgarh: ನಕ್ಷಲರು ಹಾಗೂ ಭದ್ರತಾಪಡೆಗಳ ನಡುವೆ ಘರ್ಷಣೆ, 5 ಜವಾನರು ಹುತಾತ್ಮ title=
Chhattisgarh Encounter(File Photo)

ರಾಯಪುರ್: Chattisgarh: Encounter - ಛತ್ತಿಸ್ಗಡ್ ದ ಬಿಜಾಪುರ್ ಜಿಲ್ಲೆಯಲ್ಲಿ ಶನಿವಾರ ಭದ್ರತಾಪಡೆಗಳು ಹಾಗೂ ನಕ್ಸಲರ ನಡುವೆ ಘರ್ಷಣೆ ನಡೆದಿದೆ. ಈ ಎನ್ಕೌಂಟರ್ ನಲ್ಲಿ ಐವರು ಭದ್ರತಾ ಪಡೆ ಯೋಧರು ಹುತಾತ್ಮರಾಗಿದ್ದಾರೆ ಹಾಗೂ 10 ಯೋಧರು ಗಾಯಗೊಂಡಿದ್ದಾರೆ. 

ತರರೆಮ್ ಕಾಡಿನಲ್ಲಿ ಈ ಎನ್ಕೌಂಟರ್ ನಡೆದಿದೆ
ಈ ಕುರಿತು ಮಾಹಿತಿ ನೀಡಿರುವ DGP ಡಿಎಂ ಅವಸ್ಥಿ, ಬಿಜಾಪುರ್(Bijapur) ನ ತರೆರೆಮ್(Tarrem) ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆ ಜವಾನರು ಗಸ್ತು ತಿರುಗುತ್ತಿದ್ದ ವೇಳೆ ನಕ್ಸಲರ(Naxals) ಜೊತೆಗೆ ಮುಖಾಮುಖಿಯಾಗಿದ್ದಾರೆ. ಈ ವೇಳೆ ಎರಡೂ ಕಡೆಗಳಿಂದ ನಡೆದ ಗುಂಡಿನ ದಾಳಿಯಲ್ಲಿ ಭದ್ರತಾ ಪಡೆ ಸಿಬ್ಬಂದಿಗಳ ಐವರು ಜವಾನರು ಹುತಾತ್ಮರಾಗಿದ್ದು, 10 ಜವಾನರು ಗಾಯಗೊಂಡಿದ್ದಾರೆ.

ನಕ್ಸಲರ ಶೋಧಕಾರ್ಯ ಮುಂದುವರೆದಿದೆ
ಈ ಕುರಿತು ಮಾಹಿತಿ ನೀಡಿರುವ ಅವರು, ನಂತರ ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ನಕ್ಸಲರ ಹುಡುಕು ಕಾರ್ಯಾಚರಣೆ (Search Operation) ಮುಂದುವರೆದಿದ್ದು, ಘಟನೆಯಲ್ಲಿ ಶಾಮೀಲಾಗಿರುವ ನಕ್ಸಲರನ್ನು ಸುಮ್ಮನೆ ಬಿಡಲಾಗುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ- ಪರೀಕ್ಷೆಗಳನ್ನು ರದ್ದುಪಡಿಸಿದ ಮಹಾರಾಷ್ಟ್ರ,1-8 ನೇ ತರಗತಿ ವಿದ್ಯಾರ್ಥಿಗಳಿಗೆ ಬಡ್ತಿ

ಅರಣ್ಯದಲ್ಲಿ ಮುಂದುವರೆದ ಘರ್ಷಣೆ
ಘಟನೆಯ ಕುರಿತು ಮಾಹಿತಿ ನೀಡಿರುವ ಸ್ಥಳೀಯ ಗ್ರಾಮಸ್ಥರು, ಅರಣ್ಯದಿಂದ ಇದುವರೆಗೆ ಗುಂಡಿನ ಸದ್ದು ಕೇಳಿಬರುತ್ತಿದೆ ಎಂದಿದ್ದಾರೆ. ಕೆಲ ಹೊತ್ತಿಗೆ ಮೊದಲು ಘಟನಾ ಸ್ಥಳದಿಂದ ಒಂದೂವರೆ ಕಿ.ಮೀ ದೂರದಲ್ಲಿರುವ ತಿಮ್ಮಾಪುರಂ ಬಳಿಯಿಂದ ಗಾಯಾಳುಗಳನ್ನು ಹೊತ್ತು ಒಂದು ಹೆಲಿಕ್ಯಾಪ್ಟರ್ ರವಾನೆಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ- "ಭಾರತದಲ್ಲಿನ ಪರಿಸ್ಥಿತಿ ಬಗ್ಗೆ ಅಮೇರಿಕಾ ಮೌನ ತಾಳಿದೆ"

ಮಾಹಿತಿಗಳ ಪ್ರಕಾರ ತರರೆಮ್ ನ ಅರಣ್ಯ ಪ್ರದೇಶದಲ್ಲಿ ನಕ್ಸಲರು ಹಾಗೂ ಭದ್ರತಾಪಡೆಗಳ ನಡುವೆ ನಡೆಯುತ್ತಿರುವ ಈ ಜಬರ್ದಸ್ತ್ ಎನ್ಕೌಂಟರ್ (Encounter) ಇನ್ನೂ ಮುಂದುವರೆದಿದೆ ಎನ್ನಲಾಗಿದೆ. ಈ ಎನ್ಕೌಂಟರ್ ನಲ್ಲಿ DRG ಹಾಗೂ CRPF ನ ಒಟ್ಟು 10 ಜವಾನರು ಗಾಯಗೊಂಡಿರುವುದು ವರದಿಯಾಗಿದೆ. ಬಿಜಾಪುರ್ ಜಿಲ್ಲೆಯ SP ಕಮಲೋಚನ್ ಕಶ್ಯಪ್, ಈ ಎನ್ಕೌಂಟರ್ ನಲ್ಲಿ ಕೆಲ ಜವಾನರು ಗಾಯಗೊಂಡಿರುವುದನ್ನು ಪುಷ್ತೀಕರಿಸಿದ್ದಾರೆ.

ಇದನ್ನೂ ಓದಿ- Smartphone: ಕೇವಲ 3 ಸೆಕೆಂಡುಗಳಲ್ಲಿ ಸ್ಮಾರ್ಟ್‌ಫೋನ್ ತಯಾರಿಸುತ್ತಂತೆ ಈ ದೈತ್ಯ ಕಂಪನಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News