Baal Aadhaar Card: 5 ವರ್ಷದೊಳಗಿನ ಮಕ್ಕಳಿಗಾಗಿ ಬರುತ್ತಿದೆ `ನೀಲಿ ಬಣ್ಣದ ಬಾಲ್ ಆಧಾರ್ ಕಾರ್ಡ್`!
ದೇಶದ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ನೀಡಲಾಗುತ್ತಿದೆ. ಸಧ್ಯ ನವಜಾತ ಶಿಶುಗಳಿಗೆ ಕೂಡ ವಿಶೇಷವಾದ ಆಧಾರ್ ಕಾರ್ಡ್ ನೀಡಲು ಸರ್ಕಾರ ಮುಂದಾಗಿದೆ. ಅದಕ್ಕೆ ಕೇಂದ್ರ ಸರ್ಕಾರ `ನೀಲಿ ಬಣ್ಣದ ಬಾಲ್ ಆಧಾರ್ ಕಾರ್ಡ್` ಎಂದು ಹೆಸರಿಟ್ಟಿದೆ.
ನವದೆಹಲಿ: ಸಧ್ಯ ಆಧಾರ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಹೊರಡಿಸಿದ 12-ಅಂಕಿಯ ವಿಶೇಷ ಗುರುತಿನ ಚೀಟಿಯಾಗಿದೆ. ಇದು ದೇಶದ ಅಲ್ಲ ಜನರಿಗೆ ವಿಶೇಷ ನಂಬರ್ ಮತ್ತು ಬಯೋಮೆಟ್ರಿಕ್ ಡೇಟಾವನ್ನು ಒಳಗೊಂಡಿರುವುದರಿಂದ ಪ್ರಮುಖ ಗುರುತಿನ ದಾಖಲೆಗಳಲ್ಲಿ ಒಂದಾಗಿದೆ.
ದೇಶದ ಪ್ರತಿಯೊಬ್ಬರೂ ಆಧಾರ್ ಕಾರ್ಡ್(Aadhar Card) ನೀಡಲಾಗುತ್ತಿದೆ. ಸಧ್ಯ ನವಜಾತ ಶಿಶುಗಳಿಗೆ ಕೂಡ ವಿಶೇಷವಾದ ಆಧಾರ್ ಕಾರ್ಡ್ ನೀಡಲು ಸರ್ಕಾರ ಮುಂದಾಗಿದೆ. ಅದಕ್ಕೆ ಕೇಂದ್ರ ಸರ್ಕಾರ 'ನೀಲಿ ಬಣ್ಣದ ಬಾಲ್ ಆಧಾರ್ ಕಾರ್ಡ್' ಎಂದು ಹೆಸರಿಟ್ಟಿದೆ.
ಇದನ್ನೂ ಓದಿ : "ಕೊರೊನಾ ತಡೆಗೆ ಮಿನಿ ಲಾಕ್‌ಡೌನ್, ತ್ವರಿತ ಪ್ರಕ್ರಿಯೆ ಅಗತ್ಯ"
ಬಾಲ್ ಆಧಾರ್ ಕಾರ್ಡ್(Baal Aadhaar Card) ನ 5 ಆಸಕ್ತಿದಾಯಕ ಸಂಗತಿಗಳು:
1. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ನೀಲಿ ಬಣ್ಣದ ಬಾಲ್ ಆಧಾರ್ ನೀಡಲಾಗುತ್ತದೆ. ಇದು ಮಗುವಿಗೆ 5 ವರ್ಷ ಮುಗಿದ ನಂತರ ಅಮಾನ್ಯವಾಗುತ್ತದೆ.
ಇದನ್ನೂ ಓದಿ : Night Curfew in Delhi: ದೆಹಲಿಯಲ್ಲಿ ನೈಟ್ ಕರ್ಫ್ಯೂ? ಈ ಕುರಿತು ಸಿಎಂಗೆ ಪ್ರಸ್ತಾವನೆ!
2. ನಿಮ್ಮ ಮಗುವಿ(Child)ಗೆ ಈ ಆಧಾರ್ ಕಾರ್ಡ್ ಮಾಡಿಸಲು ಬೇಕಾದ ದಾಖಲೆಗಳು ನಿಮ್ಮ ಮಗುವಿನ ಸ್ಕೂಲ್ ಐಡಿ ಕಾರ್ಡ್ (ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ನೀಡಿದ ಫೋಟೋ ಐಡಿ) ಅನ್ನು ನೀವು ಬಳಸಬಹುದು.
ಇದನ್ನೂ ಓದಿ : Assembly elections 2021: ಇಂದು ಪಂಚರಾಜ್ಯಗಳಲ್ಲಿ ಮತದಾನ! ಎಲ್ಲಿ ಹೇಗಿದೆ ವ್ಯವಸ್ಥೆ?
3. ನಿಮ್ಮ ಮಗುವಿನ ಬಯೋಮೆಟ್ರಿಕ್ ಆಧಾರ್ ಡೇಟಾವನ್ನು 5 ನೇ ವಯಸ್ಸಿನಲ್ಲಿ ಮತ್ತು 15 ನೇ ವಯಸ್ಸಿನಲ್ಲಿ ನವೀಕರಿಸಲು ಮರೆಯಬಾರದು. ಮಕ್ಕಳಿಗೆ ಬಯೋಮೆಟ್ರಿಕ್(Biometric) ಕಡ್ಡಾಯವಾಗಿದೆ, ನವೀಕರಣ ಉಚಿತವಾಗಿದೆ. ಅದನ್ನು ಪುನಃ ಅಪ್ ಡೇಟ್ ಮಾಡುವಾಗ ಬಯೋಮೆಟ್ರಿಕ್ ಕೂಡ ಪುನಃ ನವೀಕರಣಗಿಳಿಸುವುದು ಕಡ್ಡಾಯವಾಗಿದೆ.
4. ಈ ಆಧಾರ್ ಕಾರ್ಡ್ ಮಾಡಿಸಲು ತಂದೆ-ತಾಯಿ ಆಧಾರ್ ಕಾರ್ಡ್ ಜೊತೆಗೆ ಮಗುವಿನ ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆ(Hospital)ಯಿಂದ ಪಡೆದ ಡಿಸ್ಚಾರ್ಜ್ ಸ್ಲಿಪ್ ಸಾಕು.
ಇದನ್ನೂ ಓದಿ : ಕೊರೊನಾ ಪ್ರಕರಣ ಹೆಚ್ಚಳ: ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಎಪ್ರಿಲ್ 8 ಕ್ಕೆ ಸಭೆ
5. ಈ ಆಧಾರ್ ಕಾರ್ಡ್ ಮಾಡಿಸುವ ಸಂದರ್ಭದಲ್ಲಿ ಮಗುವಿನ ಬಯೋಮೆಟ್ರಿಕ್ ಮತ್ತು ಐರಿಸ್ ಸ್ಕ್ಯಾನ್ ಮಾಡುವದಿಲ್ಲ. ಇವುಗಳನ್ನ ಮಗು 5 ವರ್ಷದ ನಂತರ ಅಪ್ ಡೇಟ್ ಮಾಡಿಸಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.