7ನೇ ವೇತನ ಆಯೋಗ: 2019 ರ ಹೊಸ ವರ್ಷದ ಮುನ್ನ, ಕೇಂದ್ರೀಯ ಸರ್ಕಾರದಲ್ಲಿ ಕೆಲಸ ಮಾಡುವ ಏಕೈಕ ಪಿತೃಗಳಿಗೆ ಒಳ್ಳೆಯ ಸುದ್ದಿ ಇಲ್ಲಿದೆ.  ಈಗ, ಅವರು ಮಹಿಳಾ ಸಿಬ್ಬಂದಿಗಳಂತೆ ಮಕ್ಕಳ ಆರೈಕೆ ರಜೆ (ಸಿಸಿಎಲ್) ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರದ ಸೇವೆ ಯಲ್ಲಿರುವ ಏಕಪಾಲಕರಾಗಿರುವ (ಸಿಂಗಲ್ ಪೇರೆಂಟ್) ಪುರುಷರು ತಮ್ಮ ಸೇವಾವಧಿಯಲ್ಲಿ ಒಟ್ಟು 730 ದಿನ ಮಕ್ಕಳ ಆರೈಕೆ ರಜೆ (ಸಿಸಿಎಲ್) ಪಡೆಯಬಹುದು. ಇದಕ್ಕಾಗಿ, ಕೇಂದ್ರ ಸರ್ಕಾರವು ಅಧಿಸೂಚನೆಯನ್ನು ಜಾರಿಗೊಳಿಸಿದೆ.


COMMERCIAL BREAK
SCROLL TO CONTINUE READING

ಈವರೆಗೆ, ಮಹಿಳಾ ಉದ್ಯೋಗಿಗಳಿಗೆ ಮಾತ್ರ 730 ದಿನಗಳ ಪಾವತಿಸಿದ ಶಿಶುಪಾಲನಾ ರಜೆಗೆ ಅನುಮತಿ ನೀಡಲಾಗಿದೆ. ಈಗ,  7 ನೇ ವೇತನ ಆಯೋಗದ ಶಿಫಾರಸುಗೆ ಅನುಗುಣವಾಗಿ ಏಕ ಪುರುಷ ಪೋಷಕರಿಗೆ ಈ ಸೌಲಭ್ಯ ವಿಸ್ತರಿಸಿದೆ. ಈಗ, 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ನೋಡಿಕೊಳ್ಳುವ ಏಕೈಕ ತಂದೆ ಮಹಿಳಾ ಉದ್ಯೋಗಿಗಳೊಂದಿಗೆ ಸಮಾನವಾಗಿ CCL ಪ್ರಯೋಜನವನ್ನು ಆನಂದಿಸಬಹುದು.


7ನೇ ವೇತನ ಆಯೋಗವು ಹೀಗೆ ಹೇಳಿದೆ: 
"ಪುರುಷ ಉದ್ಯೋಗಿ ಏಕೈಕ ಪೋಷಕರಾಗಿದ್ದಾಗ, ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಆ ಪುರುಷನ ಹೆಗಲ ಮೇಲಿರುತ್ತದೆ ಎಂದು ಆಯೋಗ ಹೇಳುತ್ತದೆ. ಹೀಗಾಗಿ ಏಕೈಕ ಪುರುಷ ಪೋಷಕರಿಗೆ ಸಿಸಿಎಲ್ ಶಿಫಾರಸು ಮಾಡಲಾಗಿದೆ."


"ಇದಲ್ಲದೆ, ಏಕೈಕ ತಾಯಂದಿರಾಗಿರುವ ಉದ್ಯೋಗಿಗಳ ಭುಜದ ಮೇಲೆ ಹೆಚ್ಚುವರಿ ಜವಾಬ್ದಾರಿಯನ್ನು ಆಯೋಗವು ಗುರುತಿಸುತ್ತದೆ.  ಸಿಸಿಎಲ್ ಹೊರತಾಗಿ ಮಹಿಳಾ ಸಿಬ್ಬಂದಿ 180 ದಿನಗಳು ಮಾತೃತ್ವ ರಜೆ ಹಾಗೂ ಪುರುಷ ಸಿಬ್ಬಂದಿ 15 ದಿನ ಪಿತೃತ್ವ ರಜೆ ಪಡೆಯಬಹುದಾಗಿದೆ ಎಂದು ಶಿಫಾರಸು ಮಾಡಲಾಗಿದೆ."


ಮೊದಲ 365 ದಿನಗಳ ಮಕ್ಕಳ ಆರೈಕೆ ರಜೆಯಲ್ಲಿ 100% ರಷ್ಟು ವೇತನವನ್ನು ನೀಡಬೇಕು, ಆದರೆ ಮುಂದಿನ 365 ದಿನಗಳಲ್ಲಿ ಶೇ .80 ರಷ್ಟು ವೇತನ ನೀಡಬೇಕು  ಎಂದು ಶಿಫಾರಸು ಮಾಡಿದೆ.