ಬೀಜಿಂಗ್: ಚೀನಾ ಬಹಳ ಸಮಯದಿಂದ ತೈವಾನ್‌ಗೆ (Taiwan) ಹಕ್ಕು ಸಾಧಿಸುತ್ತಿದೆ ಮತ್ತು ತೈವಾನ್‌ಗೆ ಬೆಂಬಲ ನೀಡುವ ಇತರ ದೇಶಗಳಿಗೆ ಬೆದರಿಕೆ ಹಾಕುತ್ತಲೇ ಇದೆ. ಏತನ್ಮಧ್ಯೆ, ಭಾರತದಲ್ಲಿ ಭಾರತ-ತೈವಾನ್ ಸಂಬಂಧಕ್ಕೆ  (India-Taiwan Relation) ಹೆಚ್ಚುತ್ತಿರುವ ಬೆಂಬಲದಿಂದಾಗಿ ಚೀನಾ ತಲ್ಲಣಗೊಂಡಿದೆ. ಚೀನಾದ ಪತ್ರಿಕೆ ಗ್ಲೋಬಲ್ ಟೈಮ್ಸ್ ನ ಸಂಪಾದಕ ಈ ಬಗ್ಗೆ ನೇರವಾಗಿ ಮಾತನಾಡಿದ್ದು ಭಾರತೀಯ ಶಕ್ತಿಗಳು ತೈವಾನ್ ಜೊತೆ ಆಟವಾಡಿದರೆ, ಈಶಾನ್ಯವನ್ನು ಭಾರತದಿಂದ ಬೇರ್ಪಡಿಸಲು ಚೀನಾ (China) ಕ್ರಮ ತೆಗೆದುಕೊಳ್ಳಬಹುದು ಎಂದು ಬೆದರಿಕೆ ಹಾಕಿದೆ.


Exclusive: ಕೊರೊನಾವೈರಸ್ ಮಣಿಸಲು ತೈವಾನೀಸ್ ಮಂತ್ರಿಯ '3F' ಮಂತ್ರ


COMMERCIAL BREAK
SCROLL TO CONTINUE READING

ಸಿಕ್ಕಿಂ ಅನ್ನು ಬೇರ್ಪಡಿಸುವ ಬೆದರಿಕೆ:
ಗ್ಲೋಬಲ್ ಟೈಮ್ಸ್ ಸಂಪಾದಕ ಹೂ ಶಿಜಿನ್ (Hu Xijin), ಭಾರತದ ಸಾಮಾಜಿಕ ಶಕ್ತಿಗಳು ತೈವಾನ್ ವಿಷಯದಲ್ಲಿ ಆಡಿದರೆ, ನಾವು ಈಶಾನ್ಯ ಭಾರತದಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳನ್ನು ಬೆಂಬಲಿಸಬಹುದು ಮತ್ತು ಸಿಕ್ಕಿಂ (Sikkim) ಅನ್ನು ಪ್ರತ್ಯೇಕಿಸಬಹುದು ಎಂದು ಅವರು ತಿಳಿದಿರಬೇಕು. ನಾವು ಈ ವಿಧಾನಗಳ ಮೂಲಕ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳಬಹುದು. ಭಾರತೀಯ ರಾಷ್ಟ್ರೀಯವಾದಿಗಳು ಸ್ವಯಂ ಪ್ರಜ್ಞೆ ಹೊಂದಿರಬೇಕು ಎಂಬ ಸಂದೇಶವನ್ನು ಟ್ವೀಟ್ ಮೂಲಕ ರವಾನಿಸಿದ್ದಾರೆ.


ತೈವಾನ್ ದ್ವೀಪದ ಮೇಲೆ ಯುಎಸ್ ವಿಮಾನ ಹಾರಾಟ, ಯುದ್ಧ ವಿಮಾನ ಕಳಿಸಿದ ಚೀನಾ


ಚೀನಾ ಏಕೆ ಕೋಪಗೊಂಡಿದೆ ?
ವಾಸ್ತವವಾಗಿ ಭಾರತೀಯ ಮಾಧ್ಯಮಗಳು ತೈವಾನ್‌ನ ವಿದೇಶಾಂಗ ಸಚಿವ ಜೋಸೆಫ್ ವು ಅವರನ್ನು ಸಂದರ್ಶಿಸಿವೆ. ಅದರಲ್ಲಿ ತೈವಾನ್ ಎಂದಿಗೂ ಚೀನಾದ ಭಾಗವಲ್ಲ ಎಂದು ಅವರು ಹೇಳಿದರು. ಇದರೊಂದಿಗೆ ತೈವಾನ್‌ನ ಅಸ್ತಿತ್ವವನ್ನು ಒಪ್ಪಿಕೊಳ್ಳುವಂತೆ ಅವರು ಪ್ರಪಂಚದಾದ್ಯಂತದ ಜನರಿಗೆ ಮನವಿ ಮಾಡಿದರು. ಇದರ ನಂತರ ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿಯು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿತ್ತು ಮತ್ತು ತೈವಾನ್‌ಗೆ ವೇದಿಕೆ ನೀಡುವುದು ಒನ್-ಚೀನಾ ನೀತಿಯನ್ನು (One-China Policy) ಉಲ್ಲಂಘಿಸಿದೆ ಎಂದು ಹೇಳಿದ್ದಾರೆ.