ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಚಂದ್ರಯಾನ-3ರ ಲ್ಯಾಂಡಿಂಗ್ ತಾಣದ ಸುತ್ತ ಚೀನಾ ವಿಜ್ಞಾನಿಯ ಅನುಮಾನದ ಹುತ್ತ
Chinese scientist: ಭಾರತದ ಚಂದ್ರಯಾನ-3 ಯೋಜನೆಯ ರೋವರ್ ಚಂದ್ರನ ಮೇಲ್ಮೈಯಲ್ಲಿ ದಕ್ಷಿಣ ಗೋಳಾರ್ಧದಲ್ಲಿ 69 ಡಿಗ್ರಿ ಅಕ್ಷಾಂಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಿದೆ. ಆದರೆ, ಗಮನಾರ್ಹ ಅಂಶವೆಂದರೆ, ಇದು ಚಂದ್ರನ ಧ್ರುವ ಪ್ರದೇಶ ಅಲ್ಲ ಎಂದು ಓರ್ವ ವಿಜ್ಞಾನಿ ಹೇಳಿಕೆ ನೀಡಿದ್ದಾರೆ.
Chandrayaan-3 : ಚೀನಾದ ಪ್ರಮುಖ ವಿಜ್ಞಾನಿ, ಅದರಲ್ಲೂ ಚೀನಾದ ಚಂದ್ರ ಅನ್ವೇಷಣಾ ಯೋಜನೆಯ ಪಿತಾಮಹ ಎಂದೇ ಕರೆಯಲ್ಪಡುವ ಒವ್‌ಯಾಂಗ್ ಜಿ಼ಯುವಾನ್ ಅವರು ಭಾರತ ತನ್ನ ಐತಿಹಾಸಿಕ ಚಂದ್ರಯಾನ-3 ಯೋಜನೆಯಲ್ಲಿ ಆಗಸ್ಟ್ ತಿಂಗಳಲ್ಲಿ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಇಳಿಸಿರುವುದಾಗಿ ಹೇಳಿರುವುದರ ಕುರಿತು ತನ್ನ ಅನುಮಾನ ವ್ಯಕ್ತಪಡಿಸಿದ್ದಾರೆ.
ಚೀನಾದ ಪ್ರಥಮ ಚಂದ್ರ ಅನ್ವೇಷಣಾ ಯೋಜನೆಯ ಮುಖ್ಯ ವಿಜ್ಞಾನಿಯೂ ಆಗಿದ್ದ ಒವ್‌ಯಾಂಗ್ ಜಿ಼ಯುವಾನ್ ಅವರು ಭಾರತದ ಹೇಳಿಕೆಯ ನಿಖರತೆಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದು, ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದಿಲ್ಲ ಎಂದಿದ್ದಾರೆ.
ಒವ್‌ಯಾಂಗ್ ಅವರು ಚಂದ್ರಯಾನ-3ರ ಲ್ಯಾಂಡಿಂಗ್ ಪ್ರದೇಶ ಚಂದ್ರನ ದಕ್ಷಿಣ ಧ್ರುವದಲ್ಲೂ ಇಲ್ಲ, ಅಥವಾ ಚಂದ್ರನ ದಕ್ಷಿಣ ಧ್ರುವದ ಧ್ರುವ ಪ್ರದೇಶದಲ್ಲೂ ಇಲ್ಲ, ಹಾಗೂ ಅಂಟಾರ್ಕ್‍ಟಿಕ್ ಧ್ರುವ ಪ್ರದೇಶದಲ್ಲೂ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ-MS Swaminathan: ಭಾರತದ ‘ಹಸಿರು ಕ್ರಾಂತಿ’ಯ ಪಿತಾಮಹ ಎಂ.ಎಸ್.ಸ್ವಾಮಿನಾಥನ್ ವಿಧಿವಶ
ಚಂದ್ರಯಾನ-3ರ ರೋವರ್ ಚಂದ್ರನ ದಕ್ಷಿಣ ಗೋಳಾರ್ಧದಲ್ಲಿ 69 ಡಿಗ್ರಿ ಅಕ್ಷಾಂಶದಲ್ಲಿ ಇಳಿದಿದೆ. ಒವ್‌ಯಾಂಗ್ ಈ ಕುರಿತು ಹೇಳಿಕೆ ನೀಡಿದ್ದು, ಚಂದ್ರಯಾನ-3 ಲ್ಯಾಂಡಿಂಗ್ ನಡೆಸಿದ ಪ್ರದೇಶ ಚಂದ್ರನ ದಕ್ಷಿಣ ಗೋಳಾರ್ಧದಲ್ಲಿ ಇರುವುದು ನಿಜ. ಆದರೆ ಅದು ಭಾರತ ಹೇಳಿದಂತೆ ದಕ್ಷಿಣ ಧ್ರುವ ಪ್ರದೇಶದಲ್ಲಿ ಬರುವುದಿಲ್ಲ. "ಚಂದ್ರನ ದಕ್ಷಿಣ ಧ್ರುವ 88.5 ಮತ್ತು 90 ಡಿಗ್ರಿ ಅಕ್ಷಾಂಶಗಳ ನಡುವೆ ಬರುತ್ತದೆ" ಎಂದು ಒವ್‌ಯಾಂಗ್ ಹೇಳಿಕೆ ನೀಡಿದ್ದಾರೆ.
ಇನ್ನು ಚಂದ್ರನ ದಕ್ಷಿಣ ಧ್ರುವ ಪ್ರದೇಶ 66.5 ಮತ್ತು 90 ಡಿಗ್ರಿ ಅಕ್ಷಾಂಶಗಳ ನಡುವಿನ ಪ್ರದೇಶವಾಗಿದ್ದು, ಇದಕ್ಕೆ ಭೂಮಿಯ 23.5 ಡಿಗ್ರಿಗಳಷ್ಟು ಕಕ್ಷೀಯ ವಾಲುವಿಕೆ ಕಾರಣವಾಗಿದೆ.
ಒವ್‌ಯಾಂಗ್, ಚಂದ್ರನ ವಾಲುವಿಕೆ ಕೇವಲ 1.5 ಡಿಗ್ರಿ ಅಷ್ಟೇ ಇದ್ದು, ಈ ಕಾರಣದಿಂದ ಚಂದ್ರನ ಧ್ರುವ ಪ್ರದೇಶ ಸಾಕಷ್ಟು ಸಣ್ಣದಾಗಿರುತ್ತದೆ ಎಂದಿದ್ದಾರೆ.
ಚೀನಾದ ಮಾಧ್ಯಮ ವರದಿಗಳು ರಿಚರ್ಡ್ ಡಿ ಗ್ರಿಜ್ಸ್ ಎಂಬ, ಸಿಡ್ನಿಯ ಮ್ಯಾಕ್ವೈರ್ ವಿಶ್ವವಿದ್ಯಾಲಯದ ಉಪನ್ಯಾಸಕರ ಅಭಿಪ್ರಾಯವನ್ನೂ ದಾಖಲಿಸಿದ್ದು, ಅವರು ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವಕ್ಕಿಂತ ಹೊರಗಿನ ಪ್ರದೇಶದಲ್ಲಿ ಇಳಿದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ-Watch: ಈಶ್ಯಾನ್ಯ ರಾಜ್ಯದ ಮಹಿಳೆಯ ಮೇಲೆ ಸ್ಪಾ ಸೆಂಟರ್ ಮಾಲೀಕನ ಹಲ್ಲೆ
ಅವರು, ಮಾಧ್ಯಮಗಳು ಚಂದ್ರಯಾನ-3ರ ಲ್ಯಾಂಡಿಂಗ್ ಪ್ರದೇಶವನ್ನು ಚಂದ್ರನ ದಕ್ಷಿಣ ಧ್ರುವ ಪ್ರದೇಶ ಎಂದೇ ವರದಿ ಮಾಡಿದರೂ, ಅದು ವಾಸ್ತವವಾಗಿ ಚಂದ್ರನ ಅಂಟಾರ್ಕ್‍ಟಿಕ್ ವೃತ್ತದ ಒಳಗೆ ಬರುವುದಿಲ್ಲ. ಈ ವೃತ್ತವನ್ನು ಚಂದ್ರನ ಮೇಲ್ಮೈಯ ದಕ್ಷಿಣದಲ್ಲಿ 80 ಡಿಗ್ರಿ ಅಕ್ಷಾಂಶ ಎಂದು ಗುರುತಿಸಲಾಗುತ್ತದೆ.
ನಾಸಾ ಚಂದ್ರನ ಸಂಪೂರ್ಣ ಧ್ರುವ ಪ್ರದೇಶ ದಕ್ಷಿಣದಲ್ಲಿ 80 ರಿಂದ 90 ಡಿಗ್ರಿಗಳಲ್ಲಿ ವ್ಯಾಪಿಸಿದೆ ಎಂದಿದೆ. ಚೀನಾದ ಮಾಧ್ಯಮಗಳೂ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವ ಪ್ರದೇಶದಿಂದ ಹೊರಗೆ ಇಳಿದರೂ, ಈ ಹಿಂದಿನ ಎಲ್ಲ ಚಂದ್ರ ಅನ್ವೇಷಣೆಗಳು ಕ್ರಮಿಸದಷ್ಟು ದಕ್ಷಿಣದಲ್ಲಿ ಲ್ಯಾಂಡಿಂಗ್ ನಡೆಸಿದೆ ಎಂದಿವೆ.
ಗಮನಾರ್ಹ ಅಂಶವೆಂದರೆ, ಚಂದ್ರಯಾನ-3ರ ಯಶಸ್ವಿ ಲ್ಯಾಂಡಿಂಗ್ ಬಳಿಕ, ನಾಸಾದ ಮುಖ್ಯಸ್ಥರಾದ ಬಿಲ್ ನೆಲ್ಸನ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಅಭಿನಂದನೆ ಸಲ್ಲಿಸಿದ್ದು, ಇದನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಿದ ಮಹತ್ವದ ಸಾಧನೆ ಎಂದು ಬಣ್ಣಿಸಿದ್ದರು.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.