JNU clash between two student groups: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಮತ್ತೊಮ್ಮೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಎಡಪಂಥೀಯ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಜೆ ಎನ್‌ಯುನಲ್ಲಿ ನಡೆದ ಗಲಾಟೆಗೆ ವಿದ್ಯಾರ್ಥಿ ಪರಿಷತ್ ಮತ್ತು ಎಡ ವಿದ್ಯಾರ್ಥಿಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನದಂದು ಎಬಿವಿಪಿ ವತಿಯಿಂದ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದೆ. ಈ ವೇಳೆ ಎಡಪಂಥೀಯರು ಜೆ ಎನ್‌ ಯು ಕ್ಯಾಂಪಸ್ ಟೆಫ್ಲಾಸ್‌ನಲ್ಲಿರುವ ಛತ್ರಪತಿ ಶಿವಾಜಿ ಅವರ ಪ್ರತಿಮೆಗೆ ಅವಮಾನ ಮಾಡಿದ್ದಾರೆ ಎಂದು ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳು ಹೇಳುತ್ತಾರೆ


ಇದನ್ನೂ ಓದಿ: Viral Video : ಮೊಸಳೆಯನ್ನು ಬೆನ್ನ ಮೇಲೆ ಹೊತ್ತು ಸಾಗುತ್ತಿರುವ ಬಾಲಕ.. ಶಾಕಿಂಗ್‌ ವಿಡಿಯೋ ವೈರಲ್‌


“ಇಂದು ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನದ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಿದ್ದರು. ಆದರೆ ಟೆಫ್ಲಾಜ್‌ನಲ್ಲಿ ತಮ್ಮ ಸಿದ್ಧಾಂತಕ್ಕೆ ಹೊಂದಿಕೆಯಾಗದ ಯಾವುದೇ ಫೋಟೋವನ್ನು ಬಳಸಬಾರದು ಎಂಬ ಅಂಶವನ್ನು ಇಟ್ಟುಕೊಂಡು ಎಡ ಪಕ್ಷಗಳು ಅಲ್ಲಿಂದ ಚಿತ್ರಗಳನ್ನು ತೆಗೆದು ಅವಮಾನಿಸಿದ್ದಾರೆ” ಎಂದು ಎಬಿವಿಪಿ ಆರೋಪಿಸಿದೆ.


ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘ ಈ ಬಗ್ಗೆ ವಿಭಿನ್ನ ಹೇಳಿಕೆಯನ್ನು ನೀಡಿದೆ. “ಟೆಫ್ಲಾಸ್‌ನಲ್ಲಿ ಎಬಿವಿಪಿ ಮತ್ತೊಮ್ಮೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದೆ. ಜಾತಿ ತಾರತಮ್ಯದ ವಿರುದ್ಧದ ಆಂದೋಲನವನ್ನು ಹಳಿತಪ್ಪಿಸಲು ABVP ಮತ್ತೊಮ್ಮೆ ಹೀಗೆ ಮಾಡಿದೆ” ಎಂದು JNUSU ಹೇಳಿದೆ.


ಇದನ್ನೂ ಓದಿ: Viral Video : ತಾಯಿ - ಮಗನ ಕಿಸ್ಸಿಂಗ್.. ರೋಮ್ಯಾನ್ಸ್‌ ವಿಡಿಯೋ ವೈರಲ್‌.! ಬಂಧನಕ್ಕೆ ಆಗ್ರಹ


ಜೆಎನ್‌ಯುನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್:


ಪ್ರಸ್ತುತ ಆಡಳಿತದಿಂದ ಜೆಎನ್‌ಯುನಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ವಿದ್ಯಾರ್ಥಿ ಪರಿಷತ್ ಹೇಳಿದೆ. ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದ ಗಲಾಟೆಯ ನಂತರ ದೆಹಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಂಪಸ್‌ಗೆ ಆಗಮಿಸಿದ್ದು, ಸದ್ಯ ಎರಡೂ ಸಂಘಟನೆಗಳ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.