CM Kejriwal on PM Modi : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿನ್ನೆ ಇದ್ದಕ್ಕಿದ್ದಂತೆ 2000 ನೋಟುಗಳ ಅಮಾನ್ಯೀಕರಣವನ್ನು ಘೋಷಿಸುವ ಮೂಲಕ ದೇಶದ ಜನರನ್ನು ಬೆಚ್ಚಿಬೀಳಿಸಿದೆ. ಆರು ವರ್ಷಗಳ ಹಿಂದೆ 2016 ರಲ್ಲಿ ನೋಟು ಅಮಾನ್ಯೀಕರಣದ ಹೆಸರಿನಲ್ಲಿ ದೇಶದ ಜನರು ಬಹಳಷ್ಟು ತೊಂದರೆಗಳನ್ನು ಎದುರಿಸಿದರು. 2000 ನೋಟು ರದ್ದತಿಗೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತೊಮ್ಮೆ ತೀವ್ರ ಪ್ರತಿಕ್ರಿಯೆ ನೀಡಿದ್ದು, ಪಿಎಂ ಮೋದಿ ವಿರುದ್ಧ ಗುಡುಗಿದ್ದಾರೆ. 


COMMERCIAL BREAK
SCROLL TO CONTINUE READING

2016ರಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದಿಢೀರ್‌ ದೊಡ್ಡ ನೋಟುಗಳನ್ನು ರದ್ದುಗೊಳಿಸಿ ಸಂಚಲನ ಮೂಡಿಸಿದ್ದರು. ಭ್ರಷ್ಟಾಚಾರ ಮತ್ತು ಕಪ್ಪುಹಣ ಹೆಚ್ಚುತ್ತಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಒಂದು ಸಾವಿರ ರೂಪಾಯಿ ಬ್ಯಾನ್‌ ಮಾಡಿ 2000 ನೋಟು ಪರಿಚಯಿಸಿತ್ತು. 1000 ರೂಪಾಯಿ ನೋಟುಗಳಿಂದ ಕಪ್ಪುಹಣ ಹೆಚ್ಚುತ್ತದೆ ಎಂದು ಹೇಳಿದಾಗ 2000 ನೋಟು ಚಲಾವಣೆಗೆ ಟೀಕೆ ವ್ಯಕ್ತವಾಗಿತ್ತು. ಮತ್ತೊಂದೆಡೆ 500 ರೂಪಾಯಿ ನೋಟು ರದ್ದು ಮಾಡಿ ಹೊಸ 500 ರೂಪಾಯಿ ನೋಟು ಚಲಾವಣೆಗೆ ಬಂದಿತ್ತು.


ಇದನ್ನೂ ಓದಿ: ʼಇದು ನೋಟ್‌ ಬ್ಯಾನ್‌ ಅಲ್ಲʼ : 2000 ರೂ. ನೋಟಿನ ಕುರಿತು ನಿಮ್ಮ ತಲೆಯಲ್ಲಿರುವ ಪ್ರಶ್ನೆಗೆ ಉತ್ತರ ಇಲ್ಲಿವೆ...!


ಆಗಿನ ಸಮಯದಲ್ಲಿ ದೇಶದ ಜನತೆ ಕರೆನ್ಸಿ ವಿನಿಮಯಕ್ಕೆ ಬ್ಯಾಂಕ್‌ಗಳ ಮೊರೆ ಹೋಗಿದ್ದನ್ನು ಯಾರೂ ಮರೆಯುವಂತಿಲ್ಲ. ಇದೀಗ ಮತ್ತೊಮ್ಮೆ ಅದೇ ರೀತಿ ಆರ್‌ಬಿಐ ಶಾಕ್ ನೀಡಿದ್ದಕ್ಕೆ ವಿಪಕ್ಷಗಳು ಕಿಡಿಕಾರಿವೆ. 2000 ರೂಪಾಯಿ ನೋಟು ರದ್ದತಿ ಘೋಷಣೆಗೆ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದನ್ನು ರದ್ದುಪಡಿಸುವ ಇರಾದೆ ಇರುವಾಗ ಏಕೆ ಪರಿಚಯಿಸಬೇಕಾಗಿತ್ತು ಎಂಬ ಪ್ರಶ್ನೆಗಳು ಎದ್ದಿವೆ. 


ಈ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮೋದಿ ಕುರಿತು ವ್ಯಂಗ್ಯವಾಡಿದ್ದಾರೆ. ಮತ್ತೊಮ್ಮೆ ಶಿಕ್ಷಣದ ಬಗ್ಗೆ ಪ್ರಧಾನಿಗೆ ಹಾಸ್ಯ ಚಟಾಕಿ ಹಾರಿಸಿದ್ದಾರೆ. 2000 ರೂಪಾಯಿ ನೋಟು ರದ್ದು ಮಾಡಿರುವ ಆರ್‌ಬಿಐ ಘೋಷಣೆಯನ್ನು ಟೀಕಿಸಿದ ಅರವಿಂದ್ ಕೇಜ್ರಿವಾಲ್, ಅದಕ್ಕಾಗಿಯೇ ಪ್ರಧಾನಿಯಾಗುವ ವ್ಯಕ್ತಿಗೆ ಶಿಕ್ಷಣ ನೀಡಬೇಕು ಎಂದು ಟೀಕಿಸಿದ್ದಾರೆ. ಪ್ರಧಾನಿಯಾದವರು ವಿದ್ಯಾವಂತರಾಗಿದ್ದರೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ