Arvind Kejriwal : ಕೊರೋನಾದಿಂದ ಮಗನ ಕಳೆದುಕೊಂಡ ತಂದೆಗೆ ₹ 1 ಕೋಟಿ ಪರಿಹಾರ ನೀಡಿದ ದೆಹಲಿ ಸಿಎಂ!
ದೆಹಲಿಯ 26 ವರ್ಷದ ಡಾ.ಅನಾಸ್ ಎಂಬುವವರು ಕೊರೊನದಿಂದ ಇತ್ತೀಚೆಗಷ್ಟೇ ಮೃತಪಟ್ಟಿದ್ದರು.
ನವದೆಹಲಿ : ಕೊರೋನಾ ವಾರಿಯರ್ ಆಗಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ವರ್ಗದವರು ಬಹಳಷ್ಟಿದ್ದಾರೆ. ಆ ಪೈಕಿ ಪ್ರಮುಖವಾಗಿ ಇರುವಂಥವರು ಎಂದರೆ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಮುಂತಾದವರನ್ನೆಲ್ಲ ಕೊರೋನಾ ವಾರಿಯರ್ ಎಂದು ಪರಿಗಣಿಸಲಾಗಿದ್ದು, ಅವರು ಕೋವಿಡ್ನಿಂದಾಗಿ ಮೃತಪಟ್ಟರೆ ಸರ್ಕಾರದಿಂದ ಲಕ್ಷಾಂತರ ರೂ. ಪರಿಹಾರವಾಗಿ ಸಿಗಲಿದೆ.
ದೆಹಲಿಯಲ್ಲಿ ಹೀಗೆ ವೈದ್ಯರೊಬ್ಬರು ಕೊರೋನಾಗೆ ಬಲಿಯಾಗಿದ್ದು, ಅವರ ಕುಟುಂಬಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್(Arvind Kejriwal) ಕೊಟ್ಟಿರುವ ಪರಿಹಾರ ಮೊತ್ತವಾಗಿ ಬರೋಬ್ಬರಿ 1 ಕೋಟಿ ರೂಪಾಯಿ ನೀಡಿದ್ದಾರೆ. ದೆಹಲಿಯ 26 ವರ್ಷದ ಡಾ.ಅನಾಸ್ ಎಂಬುವವರು ಕೊರೊನದಿಂದ ಇತ್ತೀಚೆಗಷ್ಟೇ ಮೃತಪಟ್ಟಿದ್ದರು.
ಕಪ್ಪು ಶೀಲಿಂದ್ರ ಪ್ರಕರಣ ಹೆಚ್ಚಳ: ತುರ್ತು ಕ್ರಮಕ್ಕೆ ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪತ್ರ
ಡಾ. ಅನಾಸ್(Dr Anas) ಅವರ ಮನೆಗೆ ಭೇಟಿ ನೀಡಿ ಅವರ ತಂದೆಗೆ ಸಾಂತ್ವನ ಹೇಳಿರುವ ಸಿಎಂ ಅರವಿಂದ ಕೇಜ್ರಿವಾಲ್ 1 ಕೋಟಿ ರೂಪಾಯಿಯ ಚೆಕ್ ನೀಡಿದ್ದಾರೆ. 'ನನ್ನ ಪುತ್ರ ಕರ್ತವ್ಯದ ಮೇಲಿದ್ದ, ಜನರ ಸೇವೆ ಮಾಡಿ ಜೀವ ಕಳೆದುಕೊಂಡಿದ್ದಾನೆ. ನನ್ನ ಇತರ ಮಕ್ಕಳೂ ಅವನಂತೆಯೇ ದೇಶಕ್ಕಾಗಿ ಸೇವೆ ಮಾಡಲಿ ಎಂದು ಬಯಸುತ್ತೇನೆ' ಎಂಬುದಾಗಿ ಅನಾಸ್ ಅವರ ತಂದೆ ಈ ವೇಳೆ ಹೇಳಿದರು.
ಇದನ್ನೂ ಓದಿ : CBSE, ICSE 12ನೇ ತರಗತಿ ಪರೀಕ್ಷೆ: ನಾಳೆ ಕೇಂದ್ರದ ಮಹತ್ವದ ಸಭೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.