ಮುಂಬೈ: ಕೊರೊನಾ 3ನೇ ಅಲೆಯ ಭೀತಿ ಹೆಚ್ಚಾಗುತ್ತಿದ್ದಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ(Uddhav Thackeray) ಮಂಗಳವಾರ (ಆ.31) ಬಿಜೆಪಿಯ ‘ಜನ ಆಶೀರ್ವಾದ ಯಾತ್ರೆ’ ವಿರುದ್ಧ ಕಿಡಿಕಾರಿದ್ದಾರೆ. ಹಬ್ಬ ಮತ್ತು ಉತ್ಸವಗಳಲ್ಲಿ ಜನರು ಪಾಲಿಸಬೇಕಾದ ಕೋವಿಡ್-19 ಮಾರ್ಗಸೂಚಿಗಳ ಬಗೆಗಿನ ಎಚ್ಚರಿಕೆ ಸಂದೇಶವುಳ್ಳ ಕೇಂದ್ರದ ಪ್ರತವನ್ನು ಉಲ್ಲೇಖಿಸಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

‘ಕೊರೊನಾ 3ನೇ ಅಲೆ(Corona 3rd Wave)ಯ ಭೀತಿಯ ನಡುವೆಯೂ ನಡೆಯುತ್ತಿರುವ ಜನಾಶೀರ್ವಾದ ಯಾತ್ರೆ(BJP Ashirvad yatras)ಯ ರ‍್ಯಾಲಿಗಳು ಜನರನ್ನು ಪ್ರಾಣಾಪಾಯಕ್ಕೆ ದೂಡುತ್ತಿವೆ' ಎಂದು ಉದ್ಧವ್‌ ಠಾಕ್ರೆ ತರಾಟೆಗೆ ತೆಗೆದುಕೊಂಡಿದ್ದಾರೆ. ಜನಸಂದಣಿ ನಿಷೇಧಿಸುವ ಆದೇಶಗಳ ವಿರುದ್ಧ ಪ್ರತಿಭಟಿಸಲು ಬಯಸುವವರು ಇದನ್ನು ಗಮನಿಸಬೇಕು ಅಂತಾ ಹೇಳಿದ್ದಾರೆ.


ಇದನ್ನೂ ಓದಿ: LPG Gas Cylinder : Address Proof ಇಲ್ಲದಿದ್ದರೂ ಸಿಗಲಿದೆ ಅಡುಗೆ ಅನಿಲ , ಈ ರೀತಿ ಅರ್ಜಿ ಸಲ್ಲಿಸಿ


‘ದೇಶದಲ್ಲಿ ಕೊರೊನಾ 3ನೇ ಅಲೆ(Corona 3rd Wave)ಯನ್ನು ನಿರೀಕ್ಷಿಸಲಾಗಿದೆ ಎಂದು ಸ್ವತಃ ಕೇಂದ್ರ ಸರ್ಕಾರವೇ ಹೇಳಿದೆ. ದಹಿ ಹಂಡಿ ಮತ್ತು ಗಣೇಶೋತ್ಸವದ ಸಮಯದಲ್ಲಿ ಹೆಚ್ಚು ಜನರು ಸೇರದಂತೆ ಕ್ರಮ ಕೈಗೊಳ್ಳಬೇಕೆಂದು ಪತ್ರದ ಮೂಲಕ ರಾಜ್ಯಗಳನ್ನು ಕೇಳಿದೆ. ಉತ್ಸವಕ್ಕೆ ಕಡಿವಾಣ ಹಾಕಿದ್ದಕ್ಕೆ ಪ್ರತಿಭಟಿಸಲು ಇಚ್ಛಿಸುವವರಿಗೆ ನಾವು ಕೇಂದ್ರದ ಈ ಪತ್ರವನ್ನು ತೋರಿಸಬೇಕಾಗಿದೆ’ ಅಂತಾ ಠಾಕ್ರೆ ಹೇಳಿದ್ದಾರೆ.


ಥಾಣೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಉದ್ಘಾಟಿಸಿ ಮಾತನಾಡಿರುವ ಅವರು, ಅವರು, ‘ಕೆಲವರು ಇಂತಹ ಯಾತ್ರೆಗಳನ್ನು ಆಯೋಜಿಸಲು ಬಯಸುತ್ತಾರೆ. ಇದು ತುಂಬಾ ದುರದೃಷ್ಟಕರ. ಇಂತಹ ರ‍್ಯಾಲಿಗಳಿಂದ ಜನರು ಮೃತಪಟ್ಟರೂ ಆಯೋಜಕರು ತಲೆಕೆಡಿಸಿಕೊಳ್ಳುವುದಿಲ್ಲ. ಕೇಂದ್ರ ಸಂಪುಟಕ್ಕೆ ಹೊಸದಾಗಿ ಸೇರಿರುವ ಬಿಜೆಪಿಯ ಸಚಿವರು ಜನಾಶೀರ್ವಾದ ಯಾತ್ರೆ ಆಯೋಜಿಸುತ್ತಿದ್ದಾರೆ. ಇವರು ಜನರಿಂದ ಆಶೀರ್ವಾದ ಪಡೆಯುತ್ತಿಲ್ಲ. ಬದಲಿಗೆ ಅವರನ್ನೇ ಕಷ್ಟಕ್ಕೆ ದೂಡುತ್ತಿದ್ದಾರೆ’ ಅಂತಾ ಠಾಕ್ರೆ ಕುಟುಕಿದ್ದಾರೆ.


ಇದನ್ನೂ ಓದಿ: ಭಾರೀ ಮಳೆ, ಪ್ರವಾಹ: ನವವಧು, ಟೆಕ್ಕಿ ಸೇರಿ 7 ಮಂದಿಯ ದುರಂತ ಸಾವು..!


‘ಶಿವಸೇನೆ(Shivasena) ಸ್ಥಾಪನೆಯಾದಾಗ ಅದು ಶೇ.80ರಷ್ಟು ಸಾಮಾಜಿಕ ಸೇವೆ, ಶೇ.20ರಷ್ಟು ರಾಜಕಾರಣ ಮಾಡಲಿದೆ ಎಂದು ಹೇಳಿತ್ತು. ಆದರೆ ಇಂದು ಕೆಲ ಪಕ್ಷಗಳು ಶೇ.100ರಷ್ಟು ರಾಜಕಾರಣವನ್ನೇ ಮಾಡುತ್ತಿವೆ. ಜನರಿಗೆ ನೆರವಾಗುವ ಯಾವ ಕೆಲಸವನ್ನೂ ಅವು ಮಾಡುವುದಿಲ್ಲ. ಜನರಿಗೆ ಸಮಸ್ಯೆಯಾಗುವಂತೆ ರ‍್ಯಾಲಿ ಆಯೋಜಿಸುತ್ತವೆ’ ಅಂತಾ ಕೇಂದ್ರದ ವಿರುದ್ಧ ಠಾಕ್ರೆ ಹರಿಹಾಯ್ದಿದ್ದಾರೆ.   


ಕೊರೊನಾ ಮಾರ್ಗಸೂಚಿ ಕಾರಣದಿಂದ ಕೃಷ್ಣ ಜನ್ಮಾಷ್ಟಮಿ ಮಾರನೆಯ ದಿನ ನಡೆಯುತ್ತಿದ್ದ ‘ದಹಿ ಹಂಡಿ’ ಆಚರಣೆಯ ಖುಷಿಯನ್ನು ನಾನು ತಪ್ಪಿಸಿಕೊಳ್ಳುತ್ತಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಠಾಕ್ರೆ ಹೇಳಿದರು. ಈ ಮಧ್ಯೆ ನಿರ್ಬಂಧಗಳ ನಡುವೆಯೂ ನೆರೆಯ ಪಾಲ್ಗಾರ್ ಜಿಲ್ಲೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯು (ಎಂಎನ್‌ಎಸ್‌) ‘ದಹಿ ಹಂಡಿ’ ಕಾರ್ಯಕ್ರಮವನ್ನು ಆಚರಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.