LPG Gas Cylinder : Address Proof ಇಲ್ಲದಿದ್ದರೂ ಸಿಗಲಿದೆ ಅಡುಗೆ ಅನಿಲ , ಈ ರೀತಿ ಅರ್ಜಿ ಸಲ್ಲಿಸಿ

ಈ ಮೊದಲು, ವಿಳಾಸ ಪುರಾವೆ ಇಲ್ಲದೆ, ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯುವುದು ಸಾಧ್ಯವಾಗುತ್ತಿರಲಿಲ್ಲ. 

Written by - Ranjitha R K | Last Updated : Aug 31, 2021, 05:54 PM IST
  • ಅಡ್ರೆಸ್ ಪ್ರೂಫ್ ಇಲ್ಲದೆಯೇ ಸಿಗುತ್ತದೆ ಗ್ಯಾಸ್ ಸಿಲಿಂಡರ್
  • ಭಾರತೀಯ ತೈಲ ನಿಗಮ ನೀಡುತ್ತದೆ ಹೊಸ ಸೌಲಭ್ಯ
  • ಸಿಲಿಂಡರ್ ಬುಕ್ ಮಾಡುವುದು ಹೇಗೆ ತಿಳಿಯಿರಿ
LPG Gas Cylinder :  Address Proof ಇಲ್ಲದಿದ್ದರೂ ಸಿಗಲಿದೆ ಅಡುಗೆ ಅನಿಲ , ಈ ರೀತಿ ಅರ್ಜಿ ಸಲ್ಲಿಸಿ  title=
LPG Gas Cylinder (file photo)

ನವದೆಹಲಿ: LPG Latest News: ಈಗ ಎಲ್‌ಪಿಜಿ ಸಂಪರ್ಕ ಪಡೆಯಲು Address Proof  ಇರಲೇ ಬೇಕು ಎಂದಿಲ್ಲ. ಅಡ್ರೆಸ್ ಪ್ರೂಫ್ ಇಲ್ಲದಿದ್ದರೂ ಸಿಲಿಂಡರ್ ಖರೀದಿಸಬಹುದು. ಈ ಮೊದಲು ಸಿಲಿಂಡರ್ ಪಡೆಯಲು ಅಡ್ರೆಸ್ ಪ್ರೂಫ್  ನೀಡುವುದು ಕಡ್ಡಾಯವಾಗಿತ್ತು. ಸರ್ಕಾರಿ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL),ಈ ನಿಯಮವನ್ನು ಬದಲಾಯಿಸಿದೆ. 

ಅಡ್ರೆಸ್ ಪ್ರೂಫ್ ಇಲ್ಲದಿದ್ದರೂ ಸಿಲಿಂಡರ್ ಲಭ್ಯ : 
ಈ ಮೊದಲು, ವಿಳಾಸ ಪುರಾವೆ (Address Proof) ಇಲ್ಲದೆ, ಎಲ್‌ಪಿಜಿ (LPG) ಸಿಲಿಂಡರ್‌ಗಳನ್ನು ಪಡೆಯುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈಗ ಈ ನಿಯಮವನ್ನು ಬದಲಿಸಲಾಗಿದೆ. ಈಗ ಗ್ರಾಹಕರು ತಮ್ಮ ಸಮೀಪದ ಇಂಡೇನ್ ಗ್ಯಾಸ್ (Indane) ವಿತರಕರು ಅಥವಾ ಪಾಯಿಂಟ್ ಆಫ್ ಸೇಲ್‌ಗೆ ಭೇಟಿ ನೀಡುವ ಮೂಲಕ 5 ಕೆಜಿ ಎಲ್‌ಪಿಜಿ ಸಿಲಿಂಡರ್ ಅನ್ನು ಸುಲಭವಾಗಿ ಖರೀದಿಸಬಹುದು. ಇದಕ್ಕಾಗಿ ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ. ಸಿಲಿಂಡರ್ ಬೆಲೆಯನ್ನು ಪಾವತಿಸಿದರೆ ಸಾಕು.   ಇಂಡೇನ್‌ನ 5 ಕೆಜಿ ಸಿಲಿಂಡರ್ ಅನ್ನು ಇಂಡೇನ್‌ನ ಮಾರಾಟ ಕೇಂದ್ರದಿಂದ ಫಿಲ್ ಮಾಡಬೇಕು. ಈ ಸಿಲಿಂಡರ್‌ಗಳನ್ನು ಬಿಐಎಸ್ ಪ್ರಮಾಣೀಕರಿಸಿದೆ. 

ಇದನ್ನೂ ಓದಿ : PM Kisan: ಪತಿ ಪತ್ನಿ ಇಬ್ಬರಿಗೂ ಪಿಎಂ ಕಿಸಾನ್ ಯೋಜನೆಯ 6000 ರೂಪಾಯಿ ? ಏನು ಹೇಳುತ್ತದೆ ನಿಯಮ

ಸಿಲಿಂಡರ್ ಅನ್ನು ಹಿಂತಿರುಗಿಸಲೂಬಹುದು :
ಒಂದು ವೇಳೆ ಗ್ರಾಹಕರಿಗೆ ಈ ಸಿಲಿಂಡರ್ (LPG gas Cylinder ) ಬೇಡ ಎಂದಾದಲ್ಲಿ ಅಥವಾ ಬೇರೆ ಊರಿಗೆ ಶಿಫ್ಟ್ ಆಗುವ  ಸಮಯದಲ್ಲಿ ಈ ಸಿಲಿಂಡರ್ ಅನ್ನು indane ಸೆಲ್ಲಿಂಗ್ ಪಾಯಿಂಟ್ ಗೆ ಹೋಗಿ ವಾಪಸ್ ಮಾಡಬಹುದು.  5 ವರ್ಷಗಳ ಒಳಗೆ ಈ ಸಿಲಿಂಡರ್  ಅನ್ನು  ಹಿಂತಿರುಗಿಸಿದರೆ, ಸಿಲಿಂಡರ್‌ನ 50% ಬೆಲೆಯನ್ನು ನೀಡಲಾಗುತ್ತದೆ. 5 ವರ್ಷಗಳ ನಂತರ ಹಿಂದಿರುಗಿಸಿದಾಗ 100 ರೂಗಳು ಸಿಗುತ್ತದೆ. 

ಮನೆಯಿಂದ ಸುಲಭವಾಗಿ ಬುಕ್ ಮಾಡಿ : 
ಇದಲ್ಲದೇ, ರೀಫಿಲ್ ಗಾಗಿ ಗ್ಯಾಸ್ ಬುಕ್ (LPG Booking) ಮಾಡಬಹುದು. ಇದಕ್ಕಾಗಿ ಎಲ್ಲಿಗೂ ಹೋಗುವ ಅಗತ್ಯವಿಲ್ಲ. ಇದಕ್ಕಾಗಿ ಇಂಡೇನ್ ವಿಶೇಷ ಸಂಖ್ಯೆ 8454955555 ಅನ್ನು ಬಿಡುಗಡೆ ಮಾಡಿದೆ. ದೇಶದ ಯಾವುದೇ ಮೂಲೆಯಿಂದ ಈ ಸಂಖ್ಯೆಗೆ ಮಿಸ್ಡ್ ಕಾಲ್ ಮಾಡುವ ಮೂಲಕ ಸಣ್ಣ ಸಿಲಿಂಡರ್ ಅನ್ನು ಬುಕ್ ಮಾಡಬಹುದು. ವಾಟ್ಸಾಪ್ (Whatsapp) ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು. ರೀಫಿಲ್ ಎದು  ಟೈಪ್ ಮಾಡಿ,  7588888824 ಸಂಖ್ಯೆಗೆ ಸಂದೇಶ ಕಳುಹಿಸಿದರೆ ಸಿಲಿಂಡರ್ ಬುಕ್ ಆಗುತ್ತದೆ. 7718955555 ನಂಬರ್ ಗೆ ಕರೆ ಮಾಡುವ ಮೂಲಕ ಕೂಡಾ ಸಿಲಿಂಡರ್ ಅನ್ನು ಬುಕ್ ಮಾಡಬಹುದು.

ಇದನ್ನೂ ಓದಿ : ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಸಿಗಲಿದೆ ಬ್ಯಾಂಕ್ ಗಿಂತಲೂ ಅಧಿಕಬಡ್ಡಿ , ಬಡ್ಡಿ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News