ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದೇಶವನ್ನುದ್ದೇಶಿಸಿ ಮಾತನಾಡುವಾಗ ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು. ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಪ್ರತಿಯೊಬ್ಬರ ಮಾತಿಗೂ ಕಿವಿಗೊಡುತ್ತದೆ. ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಬೇಕು ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕ್ರಮ ಸ್ವಾಗತಾರ್ಹ:
ಕೃಷಿ ಕಾನೂನುಗಳ (Agriculture Law) ಕುರಿತು ಮಾತನಾಡಿದ ಸಿಎಂ ಯೋಗಿ, 'ನಾನು ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ. ಅವರ ಈ ಕ್ರಮವನ್ನು ಸ್ವಾಗತಿಸುತ್ತೇನೆ. ಇಂತಹ ಕಾನೂನುಗಳು ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ದೊಡ್ಡ ವರ್ಗದ ಜನರು ನಂಬಿದ್ದರೂ, ರೈತ ಸಂಘಟನೆಗಳು ಅದನ್ನು ವಿರೋಧಿಸಿದಾಗ, ಸರ್ಕಾರವು ಎಲ್ಲಾ ಹಂತಗಳಲ್ಲಿ ಸಂವಾದದ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿತು ಎಂದು ಸರ್ಕಾರದ ಕ್ರಮವನ್ನು ಪ್ರಶಂಶಿಸಿದರು.


ಇದನ್ನೂ ಓದಿ- PM Modi Big Announcement- ನಾವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ: ಪ್ರಧಾನಿ ಮೋದಿ ಮಹತ್ವದ ಘೋಷಣೆ


ಕೃಷಿ ಕಾಯ್ದೆಯನ್ನು ಹಿಂಪಡೆಯುವುದಾಗಿ ಘೋಷಿಸುವಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ರೈತರಿಗೆ ಪ್ರತಿಭಟನೆಯನ್ನು (Farmers Protest) ಕೈಬಿಟ್ಟು ಮನೆಗೆ ಮರಳುವಂತೆ ಮನವಿ ಮಾಡಿದ್ದಾರೆ. ಇದೆಲ್ಲದರ ನಡುವೆ ರೈತ ಚಳವಳಿಯ ನೇತೃತ್ವ ವಹಿಸಿರುವ ರೈತ ಮುಖಂಡ ರಾಕೇಶ್ ಟೀಕಾಟ್ ಅವರು ಕೂಡಲೇ ರೈತ ಚಳವಳಿ ಹಿಂಪಡೆಯುವ ಮನಸ್ಥಿತಿಯಲ್ಲಿಲ್ಲ ಎಂದು ಸೂಚಿಸಿದ್ದಾರೆ. ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು ರದ್ದುಪಡಿಸುವ ದಿನಕ್ಕಾಗಿ ನಾವು ಕಾಯುತ್ತೇವೆ. ಇದಲ್ಲದೇ, ಎಂಎಸ್‌ಪಿ ಜೊತೆಗೆ ರೈತರಿಗೆ ಸಂಬಂಧಿಸಿದ ಇತರ ವಿಷಯಗಳನ್ನೂ ಸರ್ಕಾರ ಚರ್ಚಿಸಬೇಕು ಎಂದು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ- ಈ ನಿರ್ಧಾರ ಮೊದಲೇ ಮಾಡಿದ್ದರೆ ರೈತರ ಪ್ರಾಣ ಉಳಿಸಬಹುದಿತ್ತು - ಕೇಜ್ರಿವಾಲ್


ಸರ್ಕಾರವನ್ನು ಗುರಿಯಾಗಿಸಿಕೊಂಡ ಪ್ರತಿಪಕ್ಷಗಳು:
ಕೃಷಿ ಕಾನೂನುಗಳನ್ನು ಹಿಂಪಡೆದ ಕೇಂದ್ರ ಸರ್ಕಾರದ ಬಗ್ಗೆ ದೇಶಾದ್ಯಂತ ಹಲವು ನಾಯಕರು ಪ್ರತಿಕ್ರಿಯಿಸುತ್ತಿದ್ದಾರೆ. ಸತ್ಯಾಗ್ರಹದಿಂದ ದೇಶದ ಅನ್ನದಾತರು ದುರಹಂಕಾರ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಅನ್ಯಾಯದ ವಿರುದ್ಧದ ಈ ವಿಜಯಕ್ಕೆ ಅಭಿನಂದನೆಗಳು! ಜೈ ಹಿಂದ್, ಜೈ ಹಿಂದ್ ನ ರೈತ!' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 


ಇದೇ ವೇಳೆ ಕಾಂಗ್ರೆಸ್ ಟ್ವೀಟ್ ಮಾಡಿ 'ಭಗ್ನಗೊಂಡ ಹೆಮ್ಮೆ, ನನ್ನ ದೇಶದ ರೈತನನ್ನು ಗೆಲ್ಲಿಸಿದೆ' ಎಂದು ಹೇಳಿದೆ. ಎಸ್ಪಿ ವಕ್ತಾರ ಅನುರಾಗ್ ಭದೌರಿಯಾ ಸರ್ಕಾರವನ್ನು ಸುತ್ತುವರೆದರು ಮತ್ತು ಈ ಕೃಷಿ ಕಾನೂನಿನ ಧರಣಿ ಪ್ರತಿಭಟನೆಯಲ್ಲಿ 600 ರೈತರು ಪ್ರಾಣ ತ್ಯಾಗ ಮಾಡಿದ್ದಾರೆ. ಪ್ರಧಾನಿಯವರ ಗಮನಕ್ಕೆ ಬರಲೇ ಇಲ್ಲ. ಆ ರೈತರ ಬಗ್ಗೆ ಯೋಚಿಸಲೇ ಇಲ್ಲ ಎಂದು ವಾಗ್ಧಾಳಿ ನಡೆಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.