UP: ಈ ನಗರದಲ್ಲಿ ಇನ್ನು ಮಾಂಸಾಹಾರ ಮದ್ಯ ಮಾರಾಟ ನಿಷೇಧ, ಸಿಎಂ ಯೋಗಿ ಆದೇಶ
ಧಾರ್ಮಿಕ ಮಹತ್ವವಿರುವ ನಗರದಲ್ಲಿ ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಹಿಂದೆ ಹೇಳಿದ್ದರು.
ಮಥುರಾ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಈ ಪ್ರದೇಶದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸೋಮವಾರ ಸಂಜೆ ಮಥುರಾದಲ್ಲಿ (Mathura) ನಡೆದ ಕೃಷ್ಣೋತ್ಸವ 2021 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಈ ನಿರ್ಧಾರಾನ್ನು ಪ್ರಕಟಿಸಿದ್ದಾರೆ.
"ಮದ್ಯ ಮತ್ತು ಮಾಂಸ ಮಾರಾಟಗಾರರು ಹಾಲು ಮಾರಾಟ ಮಾಡಲಿ" :
ಧಾರ್ಮಿಕ ಮಹತ್ವವಿರುವ ನಗರದಲ್ಲಿ ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗುವುದು (liquor ban) ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಈ ಹಿಂದೆ ಹೇಳಿದ್ದರು. ಮಥುರಾದ ವೈಭವವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ಮದ್ಯ ಮತ್ತು ಮಾಂಸದ ವ್ಯಾಪಾರದಲ್ಲಿ ತೊಡಗಿರುವ ಜನರು ಹಾಲಿನ (Milk) ಮಾರಾಟವನ್ನು ಪ್ರಾರಂಭಿಸಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ನಿಮ್ಮ ಬಳಿಯೂ ಇದ್ದರೆ MIಯ ಈ ಫೋನ್ , ಕಂಪನಿ ವಾಪಸ್ ನೀಡಲಿದೆ ಫುಲ್ ಅಮೌಂಟ್
''ಅಭಿವೃದ್ಧಿ ನಿಲ್ಲುವುದಿಲ್ಲ''
'ಬೃಜ್‌ಭೂಮಿಯನ್ನು ಅಭಿವೃದ್ಧಿಪಡಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಮತ್ತು ಇದಕ್ಕಾಗಿ ಯಾವುದೇ ಹಣದ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಯೋಗಿ, ಹೇಳಿದ್ದಾರೆ. ಈ ಕ್ಷೇತ್ರದ ಅಭಿವೃದ್ಧಿಗೆ ಆಧುನಿಕ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಮಿಶ್ರಣವನ್ನು ನೋಡುತ್ತಿದ್ದೇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Narendra Modi) ದೇಶಕ್ಕೆ ಹೊಸ ನಿರ್ದೇಶನ ನೀಡಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ದೀರ್ಘಕಾಲದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಧಾರ್ಮಿಕ ನಂಬಿಕೆಯ ಸ್ಥಳಗಳನ್ನು ಈಗ ಪುನರುಜ್ಜೀವನಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಧಾರ್ಮಿಕ ಸ್ಥಳಗಳಲ್ಲಿ ಇಂತಹ ವಸ್ತುಗಳ ಮಾರಾಟದ ಮೇಲೆ ನಿಷೇಧ :
ಸಿಎಂ ಯೋಗಿಯ ಈ ನಿರ್ಧಾರದ ಬಗ್ಗೆ ಮಾತನಾಡಿದ ಕ್ಯಾಬಿನೆಟ್ ಮಂತ್ರಿ ಮೊಹ್ಸಿನ್ ರಜಾ, ಮಥುರಾಗಲಿ, ಅಥವಾ ಯಾವುದೇ ಧಾರ್ಮಿಕ ಪವಿತ್ರ ಸ್ಥಳವಾಗಳಿ ಅಲ್ಲಿ ಇಂಥಹ ವಸ್ತುಗಳ ಮಾರಾಟದ ಅಗತ್ಯ ಇಲ್ಲ ಎಂದಿದ್ದಾರೆ. ಧಾರ್ಮಿಕ ವಿಚಾರಗಳಲ್ಲಿ ನಂಬಿಕೆಯಿದ್ದರೆ, ಇಂಥಹ ವಸ್ತುಗಳ ಅಗತ್ಯವೂ ಇಲ್ಲ ಎಂದಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ಧಾರ ಸರಿಯಾಗಿದೆ ಎಂದವರು ಹೇಳಿದ್ದಾರೆ.
ಇದನ್ನೂ ಓದಿ : PM Kisan: ಪತಿ ಪತ್ನಿ ಇಬ್ಬರಿಗೂ ಪಿಎಂ ಕಿಸಾನ್ ಯೋಜನೆಯ 6000 ರೂಪಾಯಿ ? ಏನು ಹೇಳುತ್ತದೆ ನಿಯಮ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ