ಪುಣೆ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ(ShriRam Temple) ನಿರ್ಮಾಣವಾಗುತ್ತಿರುವ ಹಿನ್ನೆಲೆ ಬಿಜೆಪಿ ಕಾರ್ಯಕರ್ತನೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ದೇವಸ್ಥಾನ ಕಟ್ಟಿಸಿ ಗೌರವ ಸಲ್ಲಿಸಿದ್ದಾನೆ. ಪುಣೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪ್ರಧಾನಿ ಮೋದಿ ದೇವಾಲಯವನ್ನು ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದಂದು ಉದ್ಘಾಟಿಸಲಾಗಿದೆ. ‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುತ್ತಿರುವ ಪ್ರಧಾನಿ ಮೋದಿಯವರಿಗೆ ಗೌರವ ಸಲ್ಲಿಸಲು ದೇವಸ್ಥಾನ ನಿರ್ಮಿಸಿರುವುದಾಗಿ 37 ವರ್ಷದ ಬಿಜೆಪಿ ಕಾರ್ಯಕರ್ತ ಮಯೂರ್ ಮುಂಡೆ ಹೇಳಿದ್ದಾರೆ.
6x2.5 x7.5 ಅಡಿ ಅಳತೆಯ ಪ್ರಧಾನಿ ಮೋದಿ ದೇವಸ್ಥಾನ(PM Modi Temple)ವು ಪುಣೆಯ ಔಂದ್ ಪ್ರದೇಶದ ರಸ್ತೆಬದಿ ನಿರ್ಮಿಸಲಾಗಿದೆ. ಈ ದೇವಸ್ಥಾನದ ಫೋಟೋಗಳನ್ನು ಪತ್ರಕರ್ತ ಅಲಿಶೇಖ್ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿವೆ. ‘ಪುಣೆಯ ಬಿಜೆಪಿ ಕಾರ್ಯಕರ್ತ ಮಯೂರ್ ಮುಂಡೆ ಅವರು ಔಂದ್ ಪ್ರದೇಶದಲ್ಲಿ ಪ್ರಧಾನಿ ಮೋದಿ ದೇವಸ್ಥಾನ ನಿರ್ಮಿಸಿದ್ದಾರೆ. 6 ತಿಂಗಳಲ್ಲಿ 1.5 ಲಕ್ಷ ರೂ. ಹಣ ಖರ್ಚು ಮಾಡಿ ಈ ದೇವಾಲಯ ಕಟ್ಟಿಸಿದ್ದಾರೆ’ ಅಂತಾ ಕ್ಯಾಪ್ಶನ್ ಬರೆದಿದ್ದಾರೆ.
ಇದನ್ನೂ ಓದಿ: ಸುನಂದಾ ಪುಷ್ಕರ್ ಸಾವು ಪ್ರಕರಣ: ಕಾಂಗ್ರೆಸ್ ನಾಯಕ ಶಶಿ ತರೂರ್ ಖುಲಾಸೆ..!
‘ಪ್ರಧಾನಿಯಾದ ಬಳಿಕ ಮೋದಿಯವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿರುವುದು, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ದೇವಸ್ಥಾನ ನಿರ್ಮಾಣ ಮತ್ತು ತ್ರಿವಳಿ ತಲಾಕ್ ಅನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ’ ಅಂತಾ ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ಮುಂಡೆ ಹೇಳಿದ್ದಾರೆ. ‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಿಸಿದ ವ್ಯಕ್ತಿಗೆ ದೇಗುಲ ಇರಬೇಕೆಂದು ನಾನು ಭಾವಿಸಿದ್ದೆ. ಹೀಗಾಗಿ ನನ್ನ ಸ್ವಂತ ಜಾಗದಲ್ಲಿ ಹಣ ಖರ್ಚು ಮಾಡಿ ದೇವಸ್ಥಾನ ನಿರ್ಮಿಸಲು ನಿರ್ಧರಿಸಿದೆ’ ಅಂತಾ ಅವರು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಪುತ್ಥಳಿ ಮತ್ತು ದೇವಸ್ಥಾನ ನಿರ್ಮಿಸಲು ಜೈಪುರದಿಂದ ಕೆಂಪು ಅಮೃತಶಿಲೆಯನ್ನು ತರಿಸಲಾಗಿದೆ. ಅದರ ಭದ್ರತೆಗಾಗಿ ಗಟ್ಟಿಯಾದ ಗಾಜನ್ನು ಅಳವಡಿಸಲಾಗಿದೆ. ಮೋದಿಯವರ ಕುರಿತ ಕವಿತೆಯನ್ನು ಸಹ ದೇಗುಲದಲ್ಲಿ ಪ್ರದರ್ಶಿಸಲಾಗಿದೆ. ಒಟ್ಟು 1.6 ಲಕ್ಷ ರೂ. ಖರ್ಚು ಮಾಡಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: SBI Loan Offers: ಎಸ್‌ಬಿಐ ಕಾರ್, ಗೋಲ್ಡ್ ಲೋನ್‌ನಲ್ಲಿ ಸಿಗುತ್ತಿದೆ ಬಂಪರ್ ಕೊಡುಗೆ
Mayur Munde a #BJP worker from Pune has built a temple of Prime Minister Narendra Modi in Aundh area of Pune. Spent Rs 1.5 Lakhs and 6 months to get the work completed.#Pune pic.twitter.com/uHaOPAG8LI
— Ali shaikh (@alishaikh3310) August 17, 2021
ಮುಂಡೆಯವರು ಪ್ರಧಾನಿ ಮೋದಿಯವರ ದೇವಾಲಯ ನಿರ್ಮಿಸಿರುವುದಕ್ಕೆ ಪ್ರತಿಪಕ್ಷಗಳ ನಾಯಕರು ಮತಾಂಧತೆ ಅಂತಾ ಟೀಕಿಸಿದ್ದಾರೆ. ಇದು ಮತಾಂಧತೆಯ ಉತ್ತುಂಗ, ಒಂದೆಡೆ ಬಿಜೆಪಿ ಸರ್ಕಾರ ಮಾಜಿ ಪ್ರಧಾನಿಗಳ ಹೆಸರನ್ನು ಯೋಜನೆಗಳಿಂದ ತೆಗೆದುಹಾಕುತ್ತಿದೆ ಮತ್ತೊಂದೆಡೆ ಅವರ ಕಾರ್ಯಕರ್ತರು ತಮ್ಮ ನಾಯಕರ ದೇವಸ್ಥಾನಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಅನಂತ್ ಗಾಡ್ಗಿಲ್ ಕಿಡಿಕಾರಿದ್ದಾರೆ. ‘ಒಬ್ಬ ವ್ಯಕ್ತಿಯು ಯಾವುದೇ ನಾಯಕನಿಗೆ ನಿಷ್ಠೆಯನ್ನು ಹೊಂದಿರಬಹುದು. ಆದರೆ ಒಬ್ಬ ವ್ಯಕ್ತಿಯ ಇಂತಹ ದೈವೀಕರಣವನ್ನು ಅವನು ಯಾರೇ ಆಗಿರಲಿ, ಪುಣೆಯಂತಹ ನಗರವು ಸಹಿಸುವುದಿಲ್ಲ’ವೆಂದು ಪುಣೆಯ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಪ್ರಶಾಂತ್ ಜಗ್ತಾಪ್ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ