ನವದೆಹಲಿ:  CMV Rules 1989 Amendment - ಗ್ರಾಮೀಣ ಭಾರತದಲ್ಲಿ ಶುದ್ಧ ಇಂಧನವನ್ನು ಉತ್ತೇಜಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (Ministry of Road Transport and Highways) ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ  (Central Motor Vehicles Rules) ತಿದ್ದುಪಡಿ ಮಾಡಿ ಅಧಿಸೂಚನೆ ಜಾರಿಗೊಳಿಸಿದೆ.


COMMERCIAL BREAK
SCROLL TO CONTINUE READING

ಈ ತಿದ್ದುಪಡಿ ಬಳಿಕ, ಡೀಸೆಲ್ ಮತ್ತು ಪೆಟ್ರೋಲ್ ಚಾಲಿತ ಕೃಷಿ ಟ್ರಾಕ್ಟರುಗಳು, ವಿದ್ಯುತ್ ಟಿಲ್ಲರ್‌ಗಳು ಮತ್ತು ನಿರ್ಮಾಣ ಸಲಕರಣೆಗಳ ವಾಹನಗಳನ್ನು ಸಿಎನ್‌ಜಿ, ಬಯೋ-ಸಿಎನ್‌ಜಿ ಮತ್ತು ಎಲ್‌ಎನ್‌ಜಿ ಇಂಧನ ಎಂಜಿನ್‌ಗಳಾಗಿ ಪರಿವರ್ತಿಸಬಹುದು. "ಕೃಷಿ ಟ್ರಾಕ್ಟರುಗಳು, ವಿದ್ಯುತ್ ಟಿಲ್ಲರ್‌ಗಳು, ನಿರ್ಮಾಣ ಸಲಕರಣೆಗಳ ವಾಹನಗಳು ಮತ್ತು ಕೊಯ್ಲು ಮಾಡುವವರ ಎಂಜಿನ್‌ಗಳನ್ನು ಸಿಎನ್‌ಜಿ, ಬಯೋ-ಸಿಎನ್‌ಜಿ ಮತ್ತು ಎಲ್‌ಎನ್‌ಜಿ ಇಂಧನಗಳೊಂದಿಗೆ ಬದಲಾಯಿಸಲು ಕೇಂದ್ರ ಮೋಟಾರು ವಾಹನ ನಿಯಮಗಳು 1989 ರಲ್ಲಿ ತಿದ್ದುಪಡಿಯನ್ನು ತರಲಾಗಿದೆ " ಎಂದು ಸಚಿವಾಲಯ ಟ್ವೀಟ್ ಮಾಡಿದೆ.


ಇದನ್ನೂ ಓದಿ- ಅರುಣಾಚಲ ಪ್ರದೇಶದಲ್ಲಿ ರಿಕ್ಟರ್ ಮಾಪಕ 5.8 ತೀವ್ರತೆಯ ಭೂಕಂಪನ


ಭಾರತ ಲಸಿಕೆ ರಪ್ತಿನ ಮೇಲೆ ನಿಷೇಧ ಹೇರಿದ್ದು ಅಭಿವೃದ್ದಿಶೀಲ ರಾಷ್ಟ್ರಗಳಿಗೆ ಸಮಸ್ಯೆಯಾಗಿದೆ-IMF


ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಈ ವರ್ಷದ ಫೆಬ್ರವರಿಯಲ್ಲಿ ಭಾರತದ ಮೊದಲ ಡೀಸೆಲ್ ಎಂಜಿನ್‌ನಿಂದ ಸಿಎನ್‌ಜಿಗೆ ಪರಿವರ್ತಿಸಲಾದ  ಟ್ರ್ಯಾಕ್ಟರ್ ಅನ್ನು ಪರಿಚಯಿಸಿದ್ದರು ಮತ್ತು ಇದು ಗ್ರಾಮೀಣ ಆರ್ಥಿಕತೆಯನ್ನು ಬದಲಿಸುವುದಲ್ಲದೆ, ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದ್ದರು.

ಇದನ್ನೂ ಓದಿ-ಅತ್ಯಾಚಾರ ಪ್ರಕರಣ: ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್ಪಾಲ್ ನಿರ್ದೋಷಿ ಎಂದ ಗೋವಾ ಕೋರ್ಟ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.